ಮಾಯಾದಂತ ಶೋಭಾ ಮೇಡಂ ಅಸಾಂಜನನ್ನು ನಿಮ್ಹಾನ್ಸ್ ಗೆ ಸೇರಿಸ್ತಾರಾ!?

ಓಕೆ ಫೈನ್. ಆಕೆಯ ಮೌಢ್ಯತೆ ಬಗ್ಗೆ ಆಮೇಲೆ ಮಾತನಾಡೋಣ. ಆದರೆ ಈಕೆ ಎಲ್ಲಿ? ನಮ್ಮ 'ಗರ್ಲ್ ಫ್ರೆಂಡ್' ಶೋಭಾ. ಅದೇ ಕಣ್ರಿ. 2009ರಲ್ಲಿ ಅಂದಿನ ನಮ್ಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿಸಿದ್ದ ಅವರ 'ಗೆಳತಿ' ಶೋಭಾ ಕರಂದ್ಲಾಜೆ! ಏಕೆಂದರೆ ಇದನ್ನೂ ಸ್ವತಃ ವಿಕಿಲೀಕ್ಸ್ ಮಾಲಿಕ ಅಸಾಂಜ್ ಅವರೇ ಬೆತ್ತಲುಗೊಳಿಸಿದ್ದರು.
ಇಂದೋ, ನಾಳೆಯೋ ನಮ್ಮ ಶೋಭಾ ಮೇಡಂ ಸಹ ಪತ್ರಿಕಾಗೋಷ್ಠಿ ಕರೆದು ಅಸಾಂಜ್ ಜನ್ಮ ಜಾಲಾಡುತ್ತಾರೆ. ತನ್ಮೂಲಕ ಮತ್ತೊಮ್ಮೆ ತಾವೂ ಬಟಾಬಯಲಾಗುತ್ತಾರಾ ಎಂದು ಮಂದಿ ಈಗ ಕಾಯುತ್ತಾ ಕುಳಿತಿದ್ದಾರೆ.
ಆಗ್ರಾದಲ್ಲಿರುವ ಹುಚ್ಚಾಸ್ಪತ್ರೆಗಿಂತ ನಮ್ಮಲ್ಲಿ ಶ್ರೇಷ್ಠವಾದ ಹುಚ್ಚಾಸ್ಪತ್ರೆ ಇದೆ. ಅದೇ ನಿಮ್ಹಾನ್ಸ್! ಶೋಭಾ ಮೇಡಂ ಬೇಕಾದರೆ ತಮ್ಮ ಎಂದಿನ ಅಧಿಕಾರ ಬಳಸಿ ಅಸಾಂಜೆಗೆ ಇಲ್ಲಿ 'ಉಚಿತ' ಟ್ರೀಟ್ ಮೆಂಟ್ ಕೊಡಿಸಬಹುದು. ಮೇಡಂ ಶೋಭಾ ಅವರು ಆದಷ್ಟು ಬೇಗ ಕಾರ್ಯಪ್ರವೃತ್ತರಾದರೆ ಒಳಿತು.












Click it and Unblock the Notifications