ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಕ್ಕು ತಪ್ಪಿಸುವ ಅಣ್ಣಾ ಹೋರಾಟ: ಅಗ್ನಿ ಶ್ರೀಧರ್

By Mahesh
|
Google Oneindia Kannada News

Anna fight misleading: Agni Shridhar
ಬೆಂಗಳೂರು, ಆ.20: ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆಗೆ ಅಪಾರ ಸಂಖ್ಯೆಯಲ್ಲಿ ಯುವಜನಾಂಗ ಬೆಂಬಲಿಸುತ್ತಿದೆ. ಯುವಜನತೆಯ ಈ ಆಕ್ರೋಶ ಕಾರ್ಪೊರೇಟ್ ವಲಯ ದಿಕ್ಕು ತಪ್ಪಿಸುತ್ತಿದೆ.

ಅಣ್ಣಾ ಹಜಾರೆ ನಡೆಸುತ್ತಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಮಸೂದೆ ಜಾರಿ ಕುರಿತು ಚರ್ಚೆ ಸಂಸತ್‌ನಲ್ಲಿ ಮಾಡಬಹುದೇ ಹೊರತು ಬೀದಿಯಲ್ಲಲ್ಲ ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ಪತ್ರಕರ್ತ ಅಗ್ನಿ ಶ್ರೀಧರ್ ಖಂಡಿಸಿದ್ದಾರೆ.

ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೂರದೃಷ್ಟಿಯಿಲ್ಲ, ಸಮೂಹ ಸನ್ನಿಯಾಗಿರುವ ಹೋರಾಟಕ್ಕೆ ಸ್ಪಷ್ಟ ನಿಲುವಿಲ್ಲ ಎಂದು ಅಗ್ನಿ ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.

ಕಾಳಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಖಾಸಗೀಕರಣವಾಗಿರುವ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ಎಲ್ಲ ನಾಗರಿಕರಿಗೆ ಸಿಗಬೇಕು. ಆಗ ಭ್ರಷ್ಟಾಚಾರ ತಾನಾಗಿಯೇ ನಿಯಂತ್ರಣಗೊಳ್ಳುತ್ತದೆ ಎಂದು ಶ್ರೀಧರ್ ಹೇಳಿದರು.

English summary
Journalist Agni Shridhar has criticized Social Activist Anna Hazare's fight against corruption. Shridhar alleged that Anna's movement is misleading corporates and Public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X