ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ ಅಣ್ಣಾ ಹಜಾರೆ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ದೆಹಲಿಯ ಹೊರವಲಯದಲ್ಲಿ ಕೇಂದ್ರೀಕೃತವಾಗಿರುವ ರೈತರ ಆಂದೋಲನವನ್ನು ಬೆಂಬಲಿಸಲು ದೇಶಾದ್ಯಂತ ರೈತರು ಬೀದಿಗಿಳಿಯಬೇಕು ಎಂದು ಹಜಾರೆ ಕೋರಿದ್ದಾರೆ.

'' ಇಂತಹ ಆಂದೋಲನಗಳು ಮತ್ತೆ ಮತ್ತೆ ಸಂಭವಿಸಬಾರದು'' ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಇದು ಸರಿಯಾದ ಸಮಯವಾಗಿದೆ ಎಂದು ಹಜಾರೆ ಹೇಳಿದ್ದಾರೆ. ನಾಳೆ ರೈತರ ಪ್ರತಿಭಟನೆಗೆ ಬೆಂಬಲವಾಗಿ ಮೌನ ಉಪವಾಸ ಮಾಡಲಿದ್ದಾರೆ.

ಡಿ.8ರ ಭಾರತ್ ಬಂದ್‌ಗೆ ಗುಜರಾತ್ ಬೆಂಬಲವಿಲ್ಲ: ಮುಖ್ಯಮಂತ್ರಿ ವಿಜಯ್ ರೂಪಾನಿಡಿ.8ರ ಭಾರತ್ ಬಂದ್‌ಗೆ ಗುಜರಾತ್ ಬೆಂಬಲವಿಲ್ಲ: ಮುಖ್ಯಮಂತ್ರಿ ವಿಜಯ್ ರೂಪಾನಿ

ರೈತರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ಕೃಷಿ ಸಚಿವರು ನೀಡಿದ ಭರವಸೆಗಳು ಈವರೆಗೆ ಈಡೇರಿಲ್ಲ. ರೈತರು ಬೀದಿಗಳಿದು ಹೋರಾಟ ನಡೆಸಿ ಆಂದೋಲವನ್ನು ಬೆಂಬಲಿಸಬೇಕು ಎಂದಿದ್ದಾರೆ. ಕೃಷಿ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ಅವರ ಬೆಳೆಗಳಿಗೆ ಎಂಎಸ್‌ಪಿ ನೀಡುವ ಅವಶ್ಯಕತೆಯಿದೆ ಎಂದು ಅಣ್ಣಾ ಹಜಾರೆ ಹೇಳಿದರು. ಇದಕ್ಕಾಗಿ ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು. ಈ ಬೇಡಿಕೆಗಾಗಿ ನಾವು ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದೆವು ಎಂದರು.

 Anna Hazare Urges Farmers Across Country To Take Street In Support Of Farmer Protest

ಕೇಂದ್ರ ಕೃಷಿ ಮೌಲ್ಯ ಆಯೋಗದ ಸ್ವಾಯತ್ತತೆ ಮತ್ತು ಸ್ವಾಮಿನಾಥ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಆದಾಗ್ಯೂ, ಇದನ್ನು ಇಲ್ಲಿಯವರೆಗೆ ನಿರ್ಲಕ್ಷಿಸಲಾಗಿದೆ. ಈಗ ನಾವು ಮತ್ತೊಮ್ಮೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

2011 ಮತ್ತು 2012 ರ ನಡುವೆ ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ಅಣ್ಣಾ ಹಜಾರೆ ಮುನ್ನಡೆಸಿದರು, ಇದು ಅಂದಿನ ಯುಪಿಎ ಸರ್ಕಾರವು ಚುನಾವಣೆಯಲ್ಲಿ ಸೋಲುವಂತೆ ಮಾಡಿತು. ಅಲ್ಲದೆ ಇವರ ದಿಟ್ಟತನದ ಹೋರಾಟವು ಹಜಾರೆ ಅವರನ್ನು ಮನೆ-ಮನೆ ಮಾತಾಗಿಸಿತು.

English summary
Veteran activist Anna Hazare has urged farmers across the country to come out on the streets to join the ongoing farmers protest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X