ಉದ್ಧವ್ ಸರ್ಕಾರದ ಅಬಕಾರಿ ನೀತಿ ವಿರುದ್ಧ ಉಪವಾಸ ಕೈಬಿಟ್ಟ ಅಣ್ಣಾ ಹಜಾರೆ
ಮುಂಬೈ ಫೆಬ್ರವರಿ 14: ಮಹಾರಾಷ್ಟ್ರ ಸರ್ಕಾರದ ಹೊಸ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಣ್ಣಾ ಹಜಾರೆ ಅವರು ಸೋಮವಾರದಿಂದ ಅಂದರೆ ಫೆಬ್ರವರಿ 14 ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ ಈಗ ಅವರು ಪ್ರತಿಭಟನೆ ಮಾಡುತ್ತಿಲ್ಲ. ಈ ನಿರ್ಧಾರದ ಬಗ್ಗೆ ಅಣ್ಣಾ ಹಜಾರೆ ಅವರು, ಮಹಾರಾಷ್ಟ್ರ ಸರ್ಕಾರದ ಅಬಕಾರಿ ನೀತಿ ವಿರುದ್ಧ ಉದ್ದೇಶಿತ ಉಪವಾಸ ಸತ್ಯಾಗ್ರಹವನ್ನು ಮುಂದೂಡಲು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದರು. ಈ ಕುರಿತು ಕಾರ್ಯದರ್ಶಿಯವರ ಪತ್ರವನ್ನು ಸ್ವೀಕರಿಸಿದ್ದೇನೆ. ನೀತಿ ಜಾರಿಗೂ ಮುನ್ನ ಜನರ ಮತವನ್ನೂ ಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಶನಿವಾರ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಜ್ಞಾಪನೆ ಪತ್ರ ಬರೆದಿದ್ದಾರೆ. ಸೂಪರ್ ಮಾರ್ಕೆಟ್ ಮತ್ತು ರಸ್ತೆ ಬದಿಯ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಅಣ್ಣಾ ಹಜಾರೆ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದರು. ಇದಾದ ನಂತರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅಣ್ಣಾ ಹಜಾರೆ ಫೆಬ್ರವರಿ 14 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು.
ಇದು ನನ್ನ ಕೊನೇ ಪ್ರತಿಭಟನೆ; ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ
ಅಬಕಾರಿ ನೀತಿಯನ್ನು ವಿರೋಧಿಸಿ ಫೆ.3ರಂದು ಸಿಎಂಗೆ ಮೊದಲ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದರು. ಇದಾದ ಬಳಿಕ ಸಿಎಂಗೆ ನೆನಪಿಸಲು ಜ್ಞಾಪಕ ಪತ್ರ ಕಳುಹಿಸಬೇಕಿತ್ತು. ಅದನ್ನು ಅವರು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂದು ಅಣ್ಣಾ ಹಜಾರೆ ಅವರು ಪತ್ರವನ್ನು ಸ್ವೀಕರಿಸಿದ್ದಾರೆ. ಪತ್ರದಲ್ಲಿ ಸಾರ್ವಜನಿಕರಿಂದ ಅನುಮತಿ ಪಡೆಯದೆ ಯಾವುದೇ ಅಬಕಾರಿ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಕಾರ್ಯದರ್ಶಿ ಭರವಸೆ ನೀಡಿದ್ದಾರೆ. ಹೀಗಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹವನ್ನು ಮುಂದೂಡಲು ನಿರ್ಧರಿಸಿದ್ದಾರೆ.

ಪೆಟ್ರೋಲ್ ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆಯಾಗಿರೋ ಈ ಹೊತ್ತಿನಲ್ಲಿ ಮಹಾರಾಷ್ಟ್ರ ಸರ್ಕಾರ ಮದ್ಯಪ್ರಿಯರಿಗೆ ಹಾಟ್ ನ್ಯೂಸ್ ನೀಡಿದೆ. ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳೋ ಸ್ಕಾಚ್ ಬೆಲೆಯನ್ನ ಇತರ ರಾಜ್ಯಗಳಿಗೆ ಸರಿಸಮಾನಾಗಿಸೋದಕ್ಕೆ ತೀರ್ಮಾನ ತೆಗೆದುಕೊಂಡಿರುವ ಮಹಾ ಸರ್ಕಾರ ವಿಸ್ಕಿ ಮೇಲಿನ ಅಬಕಾರಿ ಸುಂಕವನ್ನ ಶೇಕಡಾ 50 ರಷ್ಟು ಕಡಿತಗೊಳಿಸಿದಕ್ಕೆ ಮುಂದಾಗಿತ್ತು.
ಲೋಕಪಾಲ ನೇಮಕ: ಗಾಂಧಿವಾದಿ ಅಣ್ಣಾ ಹಜಾರೆ ಪ್ರತಿಕ್ರಿಯೆ
ಮಾಹಿತಿ ಪ್ರಕಾರ ಆಮದು ಮಾಡಿಕೊಂಡ ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚವನ್ನ 300 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ಸ್ಕಾಚ್ ವಿಸ್ಕಿಯ ಬೆಲೆ ಕಡಿಮೆಯಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಸದ್ಯಕ್ಕೆ ಮಹಾರಾಷ್ಟ್ರದ ಅಬಕಾರಿ ಇಲಾಖೆಯಿಂದ ಕೇಳಿ ಬರ್ತಾ ಇರೋ ಮಾಹಿತಿಯ ಪ್ರಕಾರ 1000 ಮಿಲಿ ಸ್ಕಾಚ್ ವಿಸ್ಕಿಯನ್ನ ಆಮದು ಮಾಡಿದ್ರೆ ಅದರ ಬೆಲೆ ಕನಿಷ್ಠ 5000 ರೂಪಾಯಿಗಳಿಂದ ಗರಿಷ್ಠ 14,000 ರೂಪಾಯಿ ಇರುತ್ತೆ. ಇದೀಗ ಇದೇ ಬೆಲೆ ಕನಿಷ್ಠ 35 ರಿಂದ 40% ಕಡಿಮೆಯಾಗಲಿದೆ ಅನ್ನೋ ಮಾತಿಗಳು ಕೇಳಿ ಬಂದಿದೆ. ಇನ್ನು ಆಮದು ಮಾಡಿಕೊಳ್ಳುವ ಸ್ಕಾಚ್ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರು ಗೂ ಅಧಿಕ ಆದಾಯ ಬರುತಂತೆ. ಇದೀಗ ಹೊಸ ದರ ಜಾರಿಯಾದ್ರೆ ಸುಮಾರು ಒಂದು ಲಕ್ಷ ಬಾಟಲಿಗಳಿಂದ 2.7 ಲಕ್ಷ ಬಾಟಲಿಗಳು ಮಾರಾಟವಾಗುವ ನಿರೀಕ್ಷೆ ಇರುವುದರಿಂದ ಆದಾಯ 250 ಕೋಟಿ ರು ಗೆ ಏರಿಕೆಯಾಗುವ ನಿರೀಕ್ಷೆಯಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಅಣ್ಣಾ ಹಜಾರೆ ನಿಲುವಾದರೂ ಏನು?; ಶಿವಸೇನೆಯಿಂದ ಟೀಕೆ
ಇನ್ನು ಮಹಾರಾಷ್ಟ್ರದ ಅಬಕಾರಿ ಇಲಾಕೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 2016-17, 2017-18 ಹಾಗೂ 2018-19 ವಾರ್ಷಿಕದಲ್ಲಿ ಸರ್ಕಾರ 200 ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹಿಸಿದೆ. ಆದ್ರೆ 2019-20 ಹಾಗೂ 2020-21 ವಾರ್ಷಿಕದಲ್ಲಿ ಅವದಿಯಲ್ಲಿ ಈ ಅದಾಯ 100 ಕೋಟಿ ರೂಪಾಯಿಗೆ ಕುಸಿದಿದೆ ಇದಕ್ಕೆ ಪ್ರಮುಖ ಕಾರಣ ಬೆಲೆ ಹೆಚ್ಚಳ ಹಾಗು ಕಡಿಮೆ ಬೆಲೆಯ ಕಡೆ ಮದ್ಯ ಪ್ರಿಯರು ವಾಲ್ತಾ ಇರೋದು ಪ್ರಮುಖ ಕಾರಣ ಅನ್ನೋದು ಅಧಿಕಾರಿಗಳ ವಾದ.
Recommended Video
ಹೀಗಾಗಿ ಈಗ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ತಾ ಇದೆ ಅನ್ನುವ ಸುದ್ದಿ ಹೊರ ಬರ್ತಾ ಇದ್ದ ಹಾಗೆ ಮಹಾರಾಷ್ಟ್ರದಲ್ಲಿ ಎಣ್ಣೆ ವ್ಯಾಪಾರ ಜೋರಾಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಾ ಇದೆ. ಈ ನಡುವೆ ಸೂಪರ್ ಮಾರ್ಕೆಟ್ ಮತ್ತು ರಸ್ತೆ ಬದಿಯ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications