ಯಾರು ಮುಂದಿನ ಸಿಎಂ : ಅನಂತ್ ಕುಮಾರ್?
ಎದುರುಬದುರಾದಾಗ
ನಗುನಗುತ್ತಲೇ ಕೈಕುಲುಕುವ ಬ್ರಾಹ್ಮಣ ಅನಂತ್ ಕುಮಾರ್ ಮತ್ತು ಲಿಂಗಾಯತ ಯಡಿಯೂರಪ್ಪ ಮೊದಲಿನಿಂದಲೂ ಒಬ್ಬರಿಗೊಬ್ಬರು ಹಿಂದಿನಿಂದ ಚೂರಿ ಹಾಕುತ್ತಲೇ ಬಂದಿದ್ದಾರೆ. ಇವರ ಹೆಸರನ್ನು ಯಡಿಯೂರಪ್ಪ ಶಿಫಾಸರು ಮಾಡುತ್ತಾರೆಯೆ? ನೋ ಚಾನ್ಸ್! id="toptextpromo">ಆದರೆ,
ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಹೊಂದಿರುವ ಅನಂತ್ ಕುಮಾರ್ ಗೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಬೆಂಬಲವಿದೆ. ಮತ್ತು, ನಾಯಕತ್ವ ಬದಲಾವಣೆ ಪ್ರಶ್ನೆ ಎದ್ದಾಗಲೆಲ್ಲ ಅನಂತ್ ಕುಮಾರ್ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಷರತ್ತನ್ನು ಧಿಕ್ಕರಿಸುವ ರಿಸ್ಕನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡರೆ ಅನಂತ್ ಕುಮಾರ್ ಮೊದಲ ಬಾರಿಗೆ ಕರ್ನಾಟಕದ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನವಿಲ್ಲ. 2ಜಿ ತರಂಗಗುಚ್ಛ ಹಗರಣದಲ್ಲಿ ಅನಂತ್ ಹೆಸರು ಕೇಳಿಬಂದಿದ್ದರೂ, ಸದ್ಯಕ್ಕೆ ಗಟ್ಟಿ ಕ್ಯಾಂಡಿಡೇಟ್ ಅಂದರೆ ಅನಂತ್ ಕುಮಾರ್ ಅವರೆ.











Click it and Unblock the Notifications