ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು?

Who after Yeddyurappa?
ಮೂರು ವರ್ಷ ಮುಳ್ಳಿನ ಕುರ್ಚಿಯ ಮೇಲೆ ಕುಳಿತು 'ಕುಟುಂಬ'ದವರು ಮೆಚ್ಚುವಂತೆ ರಾಜ್ಯಭಾರ ಮಾಡಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಭಾರವಾದ ಹೃದಯದಿಂದ ಕೆಳಗಿಳಿಯಲಿದ್ದಾರೆ. ಈ ಹಿಂದೆ ಕುರ್ಚಿಗೆ ಸಂಚಕಾರ ಬಂದಾಗ ಕೂಡ, 'ಅವರ ಹೊರತಾಗಿ ಮತ್ತಾರಿಲ್ಲ' ಎಂಬ ಸ್ಥಿತಿಯಿದ್ದರಿಂದ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.

ಆದರೆ, ಈಗಿನ ಪರಿಸ್ಥಿತಿ ಹಿಂದಿನಂತಿಲ್ಲ. ಅವರನ್ನು ಬಲವಂತವಾಗಿಯಾದರೂ ಕೆಳಗಿಳಿಸದಿದ್ದರೆ ಬಿಜೆಪಿ ಹೈಕಮಾಂಡಿಗೇ ಮಸಿಬಳಿಯುವ ಸಾಧ್ಯತೆಯಿದೆ. ಯಡಿಯೂರಪ್ಪನನ್ನು ಕೆಳಗಿಳಿಸಿ ಬೇರೊಬ್ಬ ಸೂಕ್ತ ವ್ಯಕ್ತಿಯನ್ನು ಕೂಡಿಸದಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಅಧಿಕಾರವನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಡುವ ಸಮಸ್ಯೆ ಬಿಜೆಪಿಗೆ ಎದುರಾಗಿದೆ.

ಹೀಗಾಗಿ, ಇದ್ದವರಲ್ಲಿಯೇ ಅತ್ಯುತ್ತಮ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಲು ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಕರ್ನಾಟಕ್ಕೆ ಹಾರಿಕೊಂಡು ಬರುತ್ತಿದ್ದಾರೆ. ಈಗಾಗಲೆ ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕರ ಹೆಸರುಗಳು ಕೇಳಿಬಂದಿದ್ದರೂ, ಮಠಾಧಿಪತಿಗಳ ಒಲುವು, ಶಾಸಕರ ನಿಲುವುಗಳ ಆಧಾರದ ಮೇಲೆ ಮುಂದಿನ ವ್ಯಕ್ತಿ ರಾಜ್ಯಭಾರ ನಡೆಸಲಿದ್ದಾರೆ.

ಈಗಾಗಲೆ ಕೇಳಿಬಂದಿರುವ ಹೆಸರುಗಳೆಂದರೆ, ಅನಂತ್ ಕುಮಾರ್, ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಎಸ್ ಸುರೇಶ್ ಕುಮಾರ್, ಡಿವಿ ಸದಾನಂದ ಗೌಡ. ತಾವು ಇಷ್ಟಪಟ್ಟ ವ್ಯಕ್ತಿಯೇ ಮುಖ್ಯಮಂತ್ರಿಯಾಗಬೇಕು ಎಂದು ಯಡಿಯೂರಪ್ಪ ಷರತ್ತು ವಿಧಿಸಿದ್ದಾರೆ. ಇವರಲ್ಲಿ ಯಾರಿಗೆ ಅದೃಷ್ಟ ಒಲಿದುಬರಲಿದೆ? ಅವರು ಸೂಕ್ತ ವ್ಯಕ್ತಿಯೆ? ಮುಂದೆ ಓದಿರಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+