ಯಾರು ಮುಂದಿನ ಸಿಎಂ : ಕೆಎಸ್ ಈಶ್ವರಪ್ಪ?
ಶಿವಮೊಗ್ಗದವರೇ
ಆದ, ಕುರುಬ ಜನಾಂಗದ ಭಾರೀ ಬೆಂಬಲವಿರುವ ಕೆಎಸ್ ಈಶ್ವರಪ್ಪ ಭಾರೀ ಮಹತ್ವಾಕಾಂಕ್ಷಿ. ಅವಕಾಶ ಸಿಕ್ಕಾಗಲೆಲ್ಲ ನಾನೇಕೆ ಮುಖ್ಯಮಂತ್ರಿಯಾಗಬಾರದು ಎಂದು ಬಹಿರಂಗವಾಗಿ ಕೇಳುತ್ತಲೇ ಬಂದವರು. ಅವಕಾಶ ಸಿಕ್ಕಾಗಲೆಲ್ಲ ದೆಹಲಿಗೆ ಧಾವಿಸಿ ಯಡಿಯೂರಪ್ಪ ವಿರುದ್ಧ ಕತ್ತಿಮಸೆಯುತ್ತಲೂ ಬಂದವರು. id="toptextpromo">ಆದರೆ,
ಬಿಜೆಪಿಯಲ್ಲಿ ವಿರೋಧಿಗಳೂ ಹೆದರುವಂತೆ ಗಟ್ಟಿದನಿ ಇರುವವರಲ್ಲಿ ಈಶ್ವರಪ್ಪ ಪ್ರಮುಖರು. ಈಗ ಸಿಕ್ಕಿರುವ ಸದವಕಾಶವನ್ನು ಹಾಳುಗೆಡವುವ ಜಾಯಮಾನದವರು ಈಶ್ವರಪ್ಪ ಅಲ್ಲವೇ ಅಲ್ಲ. ಇವರ ಒಂದೇ ವೀಕ್ನೆಸ್ ಅಂದರೆ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡದಿರುವುದು. id='are-slot-1' class='oiad oi-axt oiadv'> id='top-searched-articles'>ರಾಜ್ಯಾಧ್ಯಕ್ಷರಾಗಿಯೂ
ಈಶ್ವರಪ್ಪ ಪಕ್ಷದಲ್ಲಿ ಬಿಗಿಹಿಡಿತ ಸಾಧಿಸಿದ್ದಾರೆ. 'ಯಾರು ತಿಳಿಯಲು ನನ್ನ ಕಂಠಬಲದ ಪರಾಕ್ರಮ' ಎಂದು ರಾಗವಾಗಿ ಹಾಡಲು ಈಶ್ವರಪ್ಪ ಶುರುಮಾಡಿದರೂ ಆಶ್ಚರ್ಯವಿಲ್ಲ. ಇವರು ಕೂಡ ಯಡಿಯೂರಪ್ಪನವರ ನೆಚ್ಚಿನ ಅಭ್ಯರ್ಥಿ ಅಲ್ಲವೇ ಅಲ್ಲ. ಯಾರ ಮನದಲ್ಲಿ ಏನಿದೆಯೋ ಬಲ್ಲವರಾರು?











Click it and Unblock the Notifications