ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ ಶಬ್ದಿಕ್ ವರ್ಮಾ ಪುಟಾಣಿ ಚೆಸ್ ಪ್ರತಿಭೆ

By Srinath
|
Google Oneindia Kannada News

ಬೆಂಗಳೂರು, ಏ. 28: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಬ್ ಜೂನಿಯರ್ 'ಫಿಡೆ' ಪರಿಗಣಿತ ಚೆಸ್ ಚಾಂಪಿಯನ್ ಷಿಪ್ ನಲ್ಲಿ 121 ಚೆಸ್ ಪಟುಗಳ ಮಧ್ಯೆ ಧರ್ಮಸ್ಥಳದ ಶಬ್ದಿಕ್ ವರ್ಮಾ ಗುರುತರ ಸಾಧನೆ ತೋರಿದ್ದಾನೆ. ಇತ್ತೀಚೆಗೆ ಇಲ್ಲಿ ನಡೆದ ಚೆಸ್ ಕೂಟದಲ್ಲಿ ಶಬ್ದಿಕ್ ಮತ್ತು ಮೈಸೂರಿನ ಗಿರೀಶ್ ಕೌಶಿಕ್ ಎಂಟು ಸುತ್ತುಗಳ ಬಳಿಕವೂ ಅಜೇಯರಾಗಿ ಉಳಿದಿದ್ದರು. ಆದರೆ ಶಬ್ದಿಕ್ ಕೊನೆಯ ಸುತ್ತಿನಲ್ಲಿ ಕೌಶಿಕ್ ನನ್ನು 27ನೇ ಆಟದಲ್ಲೇ ಮಣಿಸಿದ.

ಇದರೊಂದಿಗೆ ಶಬ್ದಿಕ್ (FIDE rating 1736), ಕೌಶಿಕ್ ( 2293- ಈತ ವಿಶ್ವಮಟ್ಟದ ಚಿನ್ನದ ಪದಕ ವಿಜೇತ), ಬೆಂಗಳೂರಿನ ನರೇನ್ ಎನ್. ಕುಮಾರ್ (1756) ಮತ್ತು ಕೊಡಗಿನ ಅಗಸ್ಟಿನ್ (1956) ಮುಂದಿನ ತಿಂಗಳು ಚೆನ್ನೆನಲ್ಲಿ ನಡೆಯುವ ರಾಷ್ಟ್ರೀಯ ಸಬ್ ಜೂನಿಯರ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದರು.

ಶಬ್ದಿಕ್, ಮಂಗಳೂರು ಚೆಸ್ ಅಕಾಡೆಮಿಯ ಪ್ರತಿಭೆ. ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಬಿ. ಎಸ್. ಶಿವಾನಂದ್ ಮತ್ತು ಮಾಜಿ ರಾಷ್ಟ್ರೀಯ ಆಟಗಾರ ಅರವಿಂದ್ ಶೆಟ್ಟಿ ಈತನ ಕೋಚ್ ಎಂದು ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಒಕ್ಕೂಟದ ಅಧ್ಯಕ್ಷ ಎಂ. ಎಸ್. ಗುರುರಾಜ್ ತಿಳಿಸಿದ್ದಾರೆ.

English summary
Shabdik Verma from Dharmasthala won the Karnataka state sub-junior fide rated chess championship-2011 that was held at the youth centre, Bangalore, from 15th to 19th of April 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X