• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಮಹಾರಾಷ್ಟದ ಆಸ್ತಿ,ಯಪ್ಪಾ!

By Mahesh
|

ಬೆಂಗಳೂರು, ಮಾ.25: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಈಗ ಭೋಗೋಳಿಕ ಗಡಿಗಳಲ್ಲಿದ ಫೇಸ್ ಬುಕ್ ನಲ್ಲಿ ಆರಂಭವಾಗಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳುವ ಸಮುದಾಯ ಪುಟವನ್ನು ಹುಟ್ಟುಹಾಕಲಾಗಿದೆ. ಸುಮಾರು 400ಕ್ಕೂ ಹೆಚ್ಚು ಜನ ಅದನ್ನು ಇಷ್ಟ(Like) ಪಟ್ಟಿದ್ದಾರೆ. ಅಲ್ಲದೆ, ಬೆಳಗಾವಿ ಮಹಾರಾಷ್ಟ್ರದ ಒಂದು ಭಾಗ ಎನ್ನುವುದಕ್ಕೆ ಬೇಕಾದ ಕೆಲವು ಪುರಾವೆಗಳನ್ನು ಪುಟದಲ್ಲಿ ನೀಡಲಾಗಿದೆ. ಪುರಾವೆಗಳು ಇಂತಿವೆ :

* ಮಹಾರಾಷ್ಟ್ರದ ಪಯೋನಿರ್ ಸೊಸೈಟಿ, ಪುಣೆ ಬ್ಯಾಂಕ್ ಸೇರಿದಂತೆ ಹತ್ತು ಹಲವು ಜನಪ್ರಿಯ ಸಂಸ್ಥೆಗಳು ದೈನಂದಿನ ವ್ಯವಹಾರವನ್ನು ಮರಾಠಿ ಭಾಷೆಯಲ್ಲೇ ಮಾಡುತ್ತಾ ಬಂದಿವೆ. ಇಂದಿರಾ ಗಾಂಧಿ ಕಾಲದಲ್ಲಿ ಗಡಿ ವಿವಾದ ಬಗೆಹರಿಸಲು ಸ್ಥಾಪಿತವಾದ ಮಹಾಜನ್ ಆಯೋಗದ ವರದಿ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಸಮಾಧಾನವಿರಲಿಲ್ಲ. ನಂತರ ಕರ್ನಾಟಕದ 233 ಗ್ರಾಮಗಳು ಸೇರಿದಂತೆ ಬೆಳಗಾಂನ ಕೆಲಭಾಗವನ್ನು ಮಹಾರಾಷ್ಟ್ರಕ್ಕೆ ನೀಡಲಾಗಿತ್ತು.

* ಮಹಾಜನ್ ಆಯೋಗದ ವರದಿಯನ್ನು ಖಂಡಿಸಿ, 2003ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. 131(ಬಿ) ವಿಧೇಯಕದಡಿಯಲ್ಲಿ ಹಾಕಲಾಗಿದ್ದ ಈ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ. ಕರ್ನಾಟಕ ಸರ್ಕಾರ ಮಾತ್ರ ಮರಾಠಿಗರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿಲ್ಲ.

ಬೆಳಗಾಂನಲ್ಲಿ ಮೊದಲ ಪತ್ರಿಕೆ ಮರಾಠಿ ಭಾಷೆಯಲ್ಲಿ ಬಂದಿದೆ. ಮೊದಲ ಶಾಲೆ ಮರಾಠಿ ಭಾಷೆ ಆಧಾರಿತ ಶಾಲೆ. ಸರ್ಕಾರಿ ಕಚೇರಿಗಳಲ್ಲೂ ಮರಾಠಿ ಭಾಷೆಯೇ ಪ್ರಧಾನವಾಗಿದೆ. ಬೆಳಗಾಂನಲ್ಲಿ ಮರಾಠಿ ಸಂಸ್ಕೃತಿ, ಮರಾಠಿಗರದ್ದೇ ಮೇಲುಗೈ ಎಂದು ನಿಜಲಿಂಗಪ್ಪ ಅವರು ಒಪ್ಪಿಕೊಂಡಿದ್ದರು ಎಂಬ ಪತ್ರಿಕಾ ಪ್ರತಿಗಳನ್ನು ಪುಟದಲ್ಲಿ ಹಾಕಲಾಗಿದೆ. ಈ ಪುಟವನ್ನು ಬೆಂಬಲಿಸುತ್ತಿರುವ ಮರಾಠಿಗರೆಲ್ಲರೂ ಮರಾಠಿ ಭಾಷೆಯಲ್ಲೇ ಉತ್ತರಿಸುತ್ತಿದ್ದು, ಶಿವಸೇನೆ ಪ್ರೇರಿತರಾಗಿ ಜೈ ಮಾಹಾರಾಷ್ಟ್ರ ಎಂಬ ಘೋಷಣೆಗಳನ್ನು ಹಾಕಿದ್ದಾರೆ.

ಈ ಕುಹಕ ಮತ್ತು ಕುಚೋದ್ಯದ ಪುಟಕ್ಕೆ ಕನ್ನಡಿಗರು ಏನು ಮಾಡಬಹುದು?

ಫೇಸ್ ಬುಕ್ ಬಳಸುವ ಕನ್ನಡಿಗರೆಲ್ಲರೂ ಈ Belgaum belongs to Maharashtra ಎಂಬ ಸಮುದಾಯ ಪುಟಕ್ಕೆ ಹೋಗಿ report page ಅನ್ನು ಕ್ಲಿಕ್ ಮಾಡಿ, ಒಂದು ವಿಂಡೋ ಓಪನ್ ಆಗುತ್ತೆ. ಅದರಲ್ಲಿ ಇರುವ ಐದಾರು ಆಯ್ಕೆಯಲ್ಲಿ ಸರಿಯಾದ ಆಯ್ಕೆ ಮಾಡಿ ವರದಿ ಸಲ್ಲಿಸಬಹುದು.

* ಈ ಸಮುದಾಯ ಪುಟ ಸ್ಪಾಮ್ ಅಥವಾ ಸ್ಕಾಮ್ ;

* ಅವಹೇಳನಕಾರಿ ಭಾಷಣ ಅಥವಾ ವೈಯಕ್ತಿಕ ದ್ವೇಷ;

* ಗಲಭೆ ಅಥವಾ ಅಹಿತಕಾರಿ ನಡವಳಿಕೆ;

* ನಗ್ನತೆ, ಅಶ್ಲೀಲ ಅಥವಾ ಲೈಂಗಿಕ ದೌರ್ಜನ್ಯಯುಕ್ತ ಮಾಹಿತಿ;

* ನಕಲು ಪ್ರತಿ, ಸುಳ್ಳು ಅಥವಾ ಈ ವಿಭಾಗಕ್ಕೆ ಸೇರದ ಪುಟ ಎಂಬ ವಿವಿಧ ಆಯ್ಕೆಯಲ್ಲಿ ಒಂದನ್ನು ಆರಿಸಿ ವರದಿ ಸಲ್ಲಿಸಬಹುದು. ಆದರೆ, report ಸಲ್ಲಿಸಿದ ತಕ್ಷಣಕ್ಕೆ ಸಮುದಾಯ ಪುಟವನ್ನು ಫೇಸ್ ಬುಕ್ ನಿಂದ ತೆಗೆಯುವುದಿಲ್ಲ. ಹೆಚ್ಚು ಜನರಿಂದ ವರದಿ ಬಂದ ನಂತರ ಫೇಸ್ ಬುಕ್ ಅಗತ್ಯ ಕ್ರಮ ಕೈಗೊಳ್ಳುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belgaum belongs to Maharashtra says Facebook page. The page which as over 400 likes also gives proof such as Pioneer society, Pune bank and many other business units in Belgaum are using Marathi and Most of people in Border city want to join Maharashtra. Mean while Kannadigas on FB are yet to notice on this and report it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more