Get Updates
Get notified of breaking news, exclusive insights, and must-see stories!

International Labour Day 2022: ಇಲ್ಲಿದೆ ವಿಶ್ವ ಕಾರ್ಮಿಕರ ದಿನದ ಶುಭ ಸಂದೇಶಗಳು

ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 1 ರಂದು ಆಚರಿಸಲಾಗುತ್ತದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರ ಸಾಧನೆಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ಭಾರತ, ಚೀನಾ ಮತ್ತು ಕ್ಯೂಬಾದಂತಹ ದೇಶಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. COVID-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದೆರೆಡು ವರ್ಷಗಳಿಂದ ಕಾರ್ಮಿಕ ದಿನವನ್ನು ಸರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ವಿಭಿನ್ನವಾಗಿ ಕಾರ್ಮಿಕ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಮೇ ದಿನವನ್ನು ಗುರುತಿಸಲು ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನೀವು ಕಳುಹಿಸಬಹುದಾದ ಕೆಲವು ಶುಭಾಶಯಗಳು, ಉಲ್ಲೇಖಗಳು ಮತ್ತು ಸಂದೇಶಗಳನ್ನು ನಾವು ನಿಮಗೆ ತಂದಿದ್ದೇವೆ.

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ 2022 ಶುಭಾಶಯಗಳು

*ಕೆಲಸವು ಅವಮಾನವಲ್ಲ; ಅವಮಾನವೆಂದರೆ ಆಲಸ್ಯ. ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು!

*ಒಬ್ಬ ಕೆಲಸಗಾರನು ಸೃಷ್ಟಿಕರ್ತ ಮತ್ತು ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ. ಕಾರ್ಮಿಕರ ದಿನಾಚರಣೆಯ ಶುಭಾಶಯಗಳು

*ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲಿ!

Happy International Labour Day 2022: Wishes, quotes, messages in kannada

*ಕಾರ್ಮಿಕರ ದಿನವನ್ನು ಆಚರಿಸಿ; ಪ್ರತಿ ರಾಷ್ಟ್ರದ ಅಸ್ತಿತ್ವ ಮತ್ತು ಬೆಳವಣಿಗೆಯನ್ನು ಗೌರವಿಸಿ. ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!

*ಶ್ರಮವು ಮಾನವ ಘನತೆ ಮತ್ತು ಸೃಜನಶೀಲ ಶ್ರೇಷ್ಠತೆಯನ್ನು ವ್ಯಕ್ತಪಡಿಸುವ ಏಣಿಯಾಗಿದೆ. ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

*ಕೆಲಸ ಮಾಡದೆ ಶ್ಲಾಘನೆ ಸಿಗುವುದಿಲ್ಲ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

*ನಾನು ನಿಮಗೆ ಮೇ ದಿನದ ಶುಭಾಶಯಗಳನ್ನು ಕೋರುತ್ತೇನೆ. ಉತ್ತಮ ವಿಶ್ರಾಂತಿಯನ್ನು ತೆಗೆದುಕೊಳ್ಳಿ ಇದರಿಂದ ನೀವು ಹೆಚ್ಚು ಉತ್ಸಾಹದಿಂದ ಕೆಲಸಕ್ಕೆ ಮಾಡಬಹುದು.

*ಕೆಲಸವು ಬೇಸರ, ಅಸಡ್ಡೆ, ಆಲಸ್ಯ ಮೂರು ದೊಡ್ಡ ಕೆಡುಕುಗಳನ್ನು ಓಡಿಸುತ್ತದೆ. ಅಂತರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು!

*ಐವತ್ತು ಜನ ಸಾಮಾನ್ಯರ ಕೆಲಸವನ್ನು ಒಂದು ಯಂತ್ರ ಮಾಡಬಲ್ಲದು. ಒಬ್ಬ ಅಸಾಧಾರಣ ಮನುಷ್ಯನ ಕೆಲಸವನ್ನು ಯಾವ ಯಂತ್ರವೂ ಮಾಡಲಾಗದು. ಅಂತರರಾಷ್ಟ್ರೀಯ ಕಾರ್ಮಿಕ ದಿನದ ಶುಭಾಶಯಗಳು.

*ಕಠಿಣ ಪರಿಶ್ರಮವು ನಿಮ್ಮನ್ನು ಎಂದಿಗೂ ವಿಫಲಗೊಳಿಸುವುದಿಲ್ಲ. ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

Happy International Labour Day 2022: Wishes, quotes, messages in kannada

*ಕಾರ್ಮಿಕರು ರಾಷ್ಟ್ರದ ಬೆನ್ನೆಲುಬು, ಏಕೆಂದರೆ ಅವರಿಂದಲೇ ಒಂದು ರಾಷ್ಟ್ರವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ಕಾರ್ಮಿಕರಿಗೆ ಮೇ ದಿನದ ಶುಭಾಶಯಗಳು!

*ನಿಜವಾದ ಸ್ವಾತಂತ್ರ್ಯ ಕಠಿಣ ಪರಿಶ್ರಮದಲ್ಲಿದೆ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

*ದೈಹಿಕ ಶ್ರಮವು ಮಾನಸಿಕ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ಮಾನಸಿಕ ಚಟುವಟಿಕೆಯನ್ನು ಸುಧಾರಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

*ಕಾರ್ಮಿಕರ ದಿನದ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರ ಜೊತೆ ಅದ್ಭುತ ದಿನವನ್ನು ಕಳೆಯಿರಿ ಎಂದು ಹಾರೈಸುತ್ತೇನೆ.

*ಪ್ರತಿಯೊಂದು ಕ್ಷೇತ್ರದ ಕಾರ್ಯಕರ್ತರಿಗೆ ನಮ್ಮ ಮೆಚ್ಚುಗೆ ಮತ್ತು ಗೌರವವನ್ನು ಕಳುಹಿಸುತ್ತಿದ್ದೇವೆ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

*ಪ್ರತಿ ಕೆಲಸಕ್ಕೂ ನಿಮ್ಮ ಅತ್ಯುತ್ತಮ ಶ್ರಮ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಕಾರ್ಮಿಕರ ದಿನದ ಶುಭಾಶಯಗಳು!

*ಸಮಾಜದ ಎಲ್ಲಾ ಗೌರವಾನ್ವಿತ ಶ್ರಮಜೀವಿಗಳಿಗೆ ಮೇ ದಿನದ ಶುಭಾಶಯಗಳು. ಅವರು ಇಂದು ಮಾತ್ರವಲ್ಲದೆ ವರ್ಷದ ಪ್ರತಿ ದಿನವೂ ಸಂತೋಷವಾಗಿರಲು ಅರ್ಹರು!

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ 2022 ಉಲ್ಲೇಖಗಳು

*"ಪವಾಡವೆಂದರೆ ನಾವು ಈ ಕೆಲಸವನ್ನು ಮಾಡುತ್ತಿಲ್ಲ, ಆದರೆ ನಾವು ಅದನ್ನು ಮಾಡಲು ಸಂತೋಷ ಪಡುತ್ತೇವೆ" - ಮದರ್ ತೆರೇಸಾ

*"ಶ್ರಮವಿಲ್ಲದೆ ಏನೂ ಅಭಿವೃದ್ಧಿಯಾಗುವುದಿಲ್ಲ" - ಸೋಫೋಕ್ಲಿಸ್

*"ಮಹಾನ್ ಪುರುಷರ ಶ್ರಮವಿಲ್ಲದೆ ಯಾವುದೇ ಮಾನವ ಮೇರುಕೃತಿಯನ್ನು ರಚಿಸಲಾಗಿಲ್ಲ" - ಅಂದ್ರೆ ಗಿದೆ

*"ಕಾರ್ಮಿಕ ದಿನವು ಯಾವುದೇ ವ್ಯಕ್ತಿಗೆ, ಬದುಕಿರುವ ಅಥವಾ ಸತ್ತವರಿಗೆ, ಯಾವುದೇ ಪಂಥ, ಜನಾಂಗ ಅಥವಾ ಯಾವುದೇ ರಾಷ್ಟ್ರಕ್ಕೆ ಮೀಸಲಾಗಿಲ್ಲ." - ಸ್ಯಾಮ್ಯುಯೆಲ್ ಗೊಂಪರ್ಸ್

*"ನಿಜವಾದ ಶ್ರಮವೇ ಎಲ್ಲದರ ಮೇಲೆ ವ್ಯತ್ಯಾಸವನ್ನು ಉಂಟುಮಾಡುತ್ತದೆ." - ಜಾನ್ ಲಾಕ್

*"ಮಾನವೀಯತೆಯನ್ನು ಉನ್ನತೀಕರಿಸುವ ಎಲ್ಲಾ ಶ್ರಮವು ಘನತೆಯನ್ನು ಹೊಂದಿದೆ" - ಮಾರ್ಟಿನ್ ಲೂಥರ್ ಕಿಂಗ್, ಜೂ.

*"ಕಠಿಣ ಪರಿಶ್ರಮದ ಫಲಿತಾಂಶ ನೀಡುವ ಸಂತೋಷ ಬೇರೆಯದರಲ್ಲಿ ಸಿಗದು." - ಬೂಕರ್ ಟಿ. ವಾಷಿಂಗ್ಟನ್

*"ನಿಮ್ಮ ಉತ್ಸಾಹವನ್ನು ಅನುಸರಿಸಿ, ಕಷ್ಟಪಟ್ಟು ಕೆಲಸ ಮಾಡಲು ಮತ್ತು ತ್ಯಾಗ ಮಾಡಲು ಸಿದ್ಧರಾಗಿರಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಕನಸುಗಳನ್ನು ಮಿತಿಗೊಳಿಸಲು ಯಾರಿಗೂ ಬಿಡಬೇಡಿ" - ಡೊನೊವನ್ ಬೈಲಿ

*"ನೀವು ಮಾಡದ ಹೊರತು ಏನೂ ಕೆಲಸ ಆಗುವುಲ್ಲ" - ಮಾಯಾ ಏಂಜೆಲೋ

Happy International Labour Day 2022: Wishes, quotes, messages in kannada

*"ಪ್ರಾಮಾಣಿಕವಾಗಿರಲು ಧೈರ್ಯ ಮಾಡಿ ಮತ್ತು ಯಾವುದೇ ಕೆಲಸಕ್ಕೆ ಹೆದರಬೇಡಿ" - ರಾಬರ್ಟ್ ಬರ್ನ್ಸ್

*"ನಾವು ಕಾರ್ಮಿಕ ದಿನವನ್ನು ಆಚರಿಸುವುದರೊಂದಿಗೆ ಕಾರ್ಮಿಕರ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಹೋರಾಡಿದ ಪುರುಷರು ಮತ್ತು ಮಹಿಳೆಯರನ್ನು ಗೌರವಿಸಬೇಕು, ಇದು ಕಾರ್ಮಿಕರಿಗೆ ಬಲ ನೀಡುತ್ತದೆ ಮತ್ತು ಯಶಸ್ವಿ ಕಾರ್ಮಿಕರನ್ನಾಗಿ ಮಾಡುತ್ತದೆ" - ಎಲಿಜಬೆತ್ ಎಸ್ಟಿ

*"ಕೆಲಸವನ್ನು ಹಣ ಸಂಪಾದಿಸಲು ಅಲ್ಲ ನಿಮ್ಮ ಜೀವನವನ್ನು ಸಮರ್ಥಿಸಲು ಮಾಡುತ್ತೀರಿ" - ಮಾರ್ಕ್ ಚಾಗಲ್

*"ನಮ್ಮ ಕೆಲಸದ ಶ್ರಮ ಆಸೆ, ಅಸಡ್ಡೆ, ನಿರ್ಲಕ್ಷ್ಯ ಮೂರು ದೊಡ್ಡ ಕೆಡುಕುಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ" - ವೋಲ್ಟೇರ್

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ 2022 ಸಂದೇಶಗಳು

ಶ್ರದ್ಧೆಯಿಂದ ದುಡಿಯುವವನು ಎಂದಿಗೂ ಹತಾಶನಾಗಬೇಕಾಗಿಲ್ಲ; ಯಾಕಂದರೆ ಎಲ್ಲಾ ಕೆಲಸಗಳು ಶ್ರದ್ಧೆ ಮತ್ತು ಶ್ರಮದಿಂದ ಸಾಧಿಸಲ್ಪಡುತ್ತವೆ. ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

ಎಲ್ಲಾ ಸಂಪತ್ತು ಶ್ರಮದ ಉತ್ಪನ್ನವಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

ಇಂದು ಎಲ್ಲಾ ಕಾರ್ಮಿಕರಿಗೆ ಸಂತೋಷ ದಿನ. ಎಲ್ಲಾ ಶ್ರಮಜೀವಿ ಪುರುಷ ಮತ್ತು ಮಹಿಳೆಯರಿಗೆ ಕಾರ್ಮಿಕ ದಿನದ ಶುಭಾಶಯಗಳು.

ನಿಮ್ಮೆಲ್ಲರಿಗೂ ಕಾರ್ಮಿಕ ದಿನದ ಶುಭಾಶಯಗಳು. ನಮ್ಮ ದೇಶಕ್ಕಾಗಿ ಕೆಲಸ ಮಾಡುವ ಎಲ್ಲರಿಗೂ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ.

ಇಂದು ನಿಮ್ಮ ಕಠಿಣ ಪರಿಶ್ರಮವನ್ನು ಆಚರಿಸುವ ದಿನ. ನಿಮ್ಮ ಕೆಲಸದ ಜೀವನದ ಯಶಸ್ಸು ಮತ್ತು ಹೋರಾಟಗಳನ್ನು ನಾವು ಆಚರಿಸೋಣ. ನಿಮಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

ನಿಮ್ಮೆಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು! ನಾನು ನಿಮಗೆ ನಿಜವಾಗಿಯೂ ಆಭಾರಿಯಾಗಿದ್ದೇನೆ.

ಕಾರ್ಮಿಕರನ್ನು ಮತ್ತು ಕಾರ್ಮಿಕರ ಶ್ರಮವನ್ನು ಗೌರವಿಸಲು ನಾವು ಒಂದು ದಿನವನ್ನು ಕಳೆಯೋಣ. ನಿಮ್ಮ ಕಾರ್ಮಿಕ ದಿನವನ್ನು ಆನಂದಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+