ನಿಮ್ಮ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದಿಯಾ? ಹೀಗೆ ರಿಕವರಿ ಮಾಡಿಕೊಳ್ಳಿ
ನಿಮ್ಮ ಫೇಸ್‌ಬುಕ್ ಖಾತೆಗಳು ನಿಮ್ಮ ಬ್ಯಾಂಕ್ ಖಾತೆಗಳಷ್ಟೇ ಅಮೂಲ್ಯವಾದವುಗಳು, ಅದು ನಿಮ್ಮ ವೈಯಕ್ತಿಕ ತಾಣವಾಗಿದ್ದು, ನಿಮ್ಮ ಅನುಮತಿಯಿಲ್ಲದೆ ಬೇರೆ ಯಾರು ಅದನ್ನು ಪ್ರವೇಶಿಸುವ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಖಾತೆಗಳು ಹ್ಯಾಕ್ ಆಗುವ ಪ್ರಕರಣಗಳು ಹೆಚ್ಚಾಗುತ್ತಿವೆ, ಅದನ್ನು ಸಾಮಾಜಿಕ ಜಾಲಾತಾಣದಲ್ಲಿ ಸೆಲೆಬ್ರಿಟಿಗಳು ಪೋಸ್ಟ್ ಮಾಡುವುದನ್ನು ಅಥವಾ ನಿಮ್ಮ ಸ್ನೇಹಿತರು ಹೇಳಿಕೊಳ್ಳುವುದನ್ನು ಕೇಳಿರುತ್ತೀರಿ.
ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಉಪಟಳ ಹೆಚ್ಚಾಗುತ್ತಿದೆ. ನೀವು ರಾತ್ರಿ ಆರಾಮವಾಗಿ ನಿದ್ದೆ ಮಾಡಿ ಬೆಳಿಗ್ಗೆ ಎದ್ದಾಗ, ಯಾರೋ ಒಬ್ಬರು ನಿಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದರೆ ನಿಮಗೆ ಹೇಗನಿಸುತ್ತದೆ? ಯಾರೋ ಗೊತ್ತಿಲ್ಲದ ವ್ಯಕ್ತಿ ನಿಮ್ಮ ಫೋಟೋಗಳು, ಸಂದೇಶಗಳು ಸೇರಿದಂತೆ ಎಲ್ಲಾ ಆಕ್ಸಸ್ ಅನ್ನು ಪಡೆದಿರುತ್ತಾನೆ ಎನ್ನುವುದನ್ನು ನೆನೆದರೆ ಮನದಲ್ಲಿ ಒಮ್ಮೆ ಭಯಾನಕವಾದ ಭಾವನೆ ಉಂಟಾಗುತ್ತದೆ. ಆದರೆ ಅದಕ್ಕೆ ನೀವು ಹೆದರುವ ಅಗತ್ಯವಿಲ್ಲ, ನೀವು ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ, ಏಕೆಂದರೆ ನಿಮ್ಮ ಖಾತೆಯನ್ನು ಮರಳಿ ಪಡೆಯುವುದಕ್ಕೆ ಮಾರ್ಗಗಳಿವೆ.
ಹ್ಯಾಕ್ ಹೇಗಾಗುತ್ತದೆ?
ನಿಮ್ಮ ಫೇಸ್‌ಬುಕ್ ಖಾತೆಗೆ ಬೇರೆ ಯಾವುದೇ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ಪಾಸ್‌ವರ್ಡ್ ಊಹಿಸಿ ಪಡೆಯುವುದು ಅಥವಾ ಅದನ್ನು ಪಡೆಯಲು ತನ್ನ ಹ್ಯಾಕಿಂಗ್ ಕೌಶಲ್ಯಗಳನ್ನು ಬಳಸುವುದು. ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ತಿಳಿಯಲು ಹಲವು ವಿಧಾನಗಳಿಗಳಿವೆ.

ಫೇಸ್‌ಬುಕ್‌ನ ಮಾತಿನಲ್ಲೇ ಹೇಳುವುದಾದರೆ, ನಿಮ್ಮ ಇಮೇಲ್ ಅಥವಾ ಪಾಸ್‌ವರ್ಡ್ ಬದಲಾದರೆ, ನಿಮ್ಮ ಹೆಸರು ಅಥವಾ ಜನ್ಮದಿನ ಬದಲಾದರೆ, ನಿಮಗೆ ಪರಿಚಯವಿಲ್ಲದ ಜನರಿಗೆ ಫ್ರೆಂಡ್ ರೆಕ್ವೆಸ್ಟ್ ಕಳುಹಿಸುತ್ತಿದ್ದರೆ, ನಿಮಗೆ ಗೊತ್ತಿಲ್ಲದೆ ಖಾತೆಯಿಂದ ಸಂದೇಶಗಳನ್ನು ರವಾನೆಯಾಗುತ್ತಿದ್ದರೆ ಮತ್ತು ಪೋಸ್ಟ್‌ಗಳನ್ನು ಶೇರ್ ಆಗುತ್ತಿದ್ದಾಗ ನಿಮ್ಮ ಖಾತೆ ಹ್ಯಾಕ್ ಆಗಿದೆ ಎನ್ನುವುದು ತಿಳಿಯುತ್ತದೆ.
ತಕ್ಷಣ ಪಾಸ್‌ವರ್ಡ್ ಬದಲಾಯಿಸಿ
ನಿಮ್ಮ ಖಾತೆ ಹ್ಯಾಕ್ ಆಗಿದೆ ಎನ್ನುವುದು ನಿಮ್ಮ ಅರಿವಿಗೆ ಬಂದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಪಾಸ್ ಬದಲಾವಣೆ ಮಾಡಬೇಕು. ಅದು ಹೇಗೆಂದರೆ,
>Settings and Privacy ಸೆಕ್ಸನ್‌ಗೆ ಹೋಗಬೇಕು,
>ನಂತರ Password and Security ಆಯ್ಕೆ ಮಾಡಿಕೊಳ್ಳಬೇಕು
>ನಂತರ Change Password ಆಯ್ಕೆ ಮಾಡಿಕೊಂಡು ನಿಮ್ಮ ಹಿಂದಿನ >ಪಾಸ್‌ವರ್ಡ್ ನಿಮಗೆ ತಿಳಿದಿದಿಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಖಾತೆ ಲಾಗಿನ್ ಆಗಿರುವ ಡಿವೈಎಸ್‌ಗಳನ್ನು ಲಾಗೌಟ್ ಮಾಡಿ
ನಂತರ ಅದೇ Password and Security ಪೇಜ್‌ನಲ್ಲಿ ನಿಮ್ಮ ಖಾತೆ ಬೇರೆ ಡಿವೈಸ್‌ನಲ್ಲಿ ಲಾಗಿನ್ ಆಗಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ಬೇರೆ ಯಾವುದಾದರೂ ನಿಮಗೆ ತಿಳಿದಿಲ್ಲದ ಡಿವೈಎಸ್‌ನಲ್ಲಿ ಲಾಗ್ ಇನ್ ಆಗಿರುವುದು ತಿಳಿದುಬಂದರೆ, ತಕ್ಷಣ ಆ ಡಿವೈಸ್ ಅನ್ನು ತಕ್ಷಣವೇ ರಿಮೂವ್ ಮಾಡಬೇಕು. ಹೇಗೆ ಎನ್ನವುದನ್ನು ಇಲ್ಲಿ ನೋಡಿ
> ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಹೋಗಿ ಮತ್ತು ಮೇಲಿನ ಬಲಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಆಯ್ಕೆ ಮಾಡಿ.
> ನಂತರ Password and Security ಆಯ್ಕೆಯಲ್ಲಿ ನೀವು ಯಾವ ಡೇವಿಸ್‌ನಲ್ಲಿ ಲಾಗಿನ್ ಎನ್ನುವುದು ಕಾಣಿಸುತ್ತದೆ
> ಒಂದು ವೇಳೆ ನಿಮ್ಮ ಖಾತೆಯಲ್ಲಿ ಬೇರೆ ಡಿವೈಸ್ ಹೆಸರು ಕಾಣಿಸಿಕೊಂಡರೆ, Select Secure Account ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಫೇಸ್‌ಬುಕ್ ಹೇಳುವ ಸ್ಟೆಪ್‌ಗಳನ್ನು ಅನುಸರಿಸಿದರೆ ನಿಮ್ಮ ಖಾತೆಯನ್ನು ಹೇಗೆ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಹೇಗೆ ಎನ್ನುವುದನ್ನು ತೋರಿಸುತ್ತದೆ.
* ನೀವು ಬೆಂಬಲ support page ಮೂಲಕ ಫೇಸ್‌ಬುಕ್‌ನೊಂದಿಗೆ ಸಂಪರ್ಕದಲ್ಲಿರಬಹುದು.
* Password and Security ಪೇಜ್‌ಗೆ ಹೋಗಿ, Get Help ಅನ್ನು ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ರಿಪೋರ್ಟ್ ಮಾಡಬಹುದು.

ಒಂದು ವೇಳೆ ಹ್ಯಾಕರ್ ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ಲಾಗ್ ಇನ್ ಆಗಿದ್ದರೆ, Facebook.com/ hacked ಹೋದರೆ ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ಅಥವಾ ಫೋನ್ ನಂಬರ್‌ಗಳನ್ನು ವಿಶ್ಲೇಷಿಸುತ್ತದೆ. ಇದೆಲ್ಲಾ ಪೂರ್ಣಗೊಂಡ ನಂತರ ಫೇಸ್‌ಬುಕ್ ನಿಮ್ಮ ಖಾತೆಯನ್ನು ಮರಳಿ ಪಡೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ.












Click it and Unblock the Notifications