ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್, ದೂರು ದಾಖಲು
ಮೈಸೂರು, ಜುಲೈ 19: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿ ಕಮೆಂಟ್ ಹಾಕಿದ ಗೋವಿಂದ ನಾಯಕ ಎಂಬುವವನ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 2023ರ ಚುನಾವಣೆ ನನ್ನ ಕೊನೆ ಚುನಾವಣೆ, ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದರು. ಈ ಸುದ್ದಿಯನ್ನು ಪ್ರಕಟಿಸಿದ್ದ ಖಾಸಗಿ ನ್ಯೂಸ್ ವೆಬ್‌ಸೈಟ್‌ನ ಪೋಸ್ಟ್‌ಗೆ ಗೋವಿಂದ ನಾಯಕ ಅವಹೇಳನ ಕಾರಿ ಕಮೆಂಟ್ ಹಾಕಿದ್ದ.
"ನೀನು ಎಲ್ಲೇ ನಿಂತರೂ ಸೋಲು, ನಿನ್ನಂಥ ದುರಂಕಾರಿ ದೇಶದಲ್ಲೇ ಯಾರು ಇಲ್ಲ" ಎಂದಿದ್ದ ಆತ ವೈಯಕ್ತಿಕವಾಗಿಯೂ ಸಿದ್ದರಾಮಯ್ಯರನ್ನು ಅವಾಚ್ಯ ಪದಕ ಬಳಕೆ ಮಾಡಿದ್ದರು.

ಹುಣಸೂರು ಠಾಣೆಯಲ್ಲಿ ದೂರು; ಇದು ನನ್ನ ಕೊನೆ ಚುನಾವಣೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಫೇಸ್‌ಬುಕ್‌ನಲ್ಲಿ ವಿರುದ್ಧ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಹುಣಸೂರು ನಗರದ ಗುರುಗಳ ಕಟ್ಟೆ ಬೀದಿಯ ಗೋವಿಂದ ನಾಯಕ ಎಂಬಾತ ಅವಹೇಳನ ಕಾರಿ ಕಮೆಂಟ್ ಮಾಡಿದ್ದಾರೆ.
ಈತನ ವಿಕೃತ ಮತ್ತು ಅವಹೇಳನ ಕಾರಿ ಕಮೆಂಟ್ ಸಮಾಜದ ಶಾಂತಿಯನ್ನು ಭಂಗಮಾಡುವುದಲ್ಲದೇ, ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಸಾಧ್ಯತೆಯಿದೆ. ಒಬ್ಬ ಸಮಾಜದ ಗಣ್ಯ ವ್ಯಕ್ತಿಯನ್ನು ರಾಜಕೀಯ ಮುತ್ಸದಿಯನ್ನು ಅವಮಾನ ಮಾಡಲು ಕಾರಣವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದೆಯೂ ಇದೇ ರೀತಿ ಹೇಳಿಕೆ; ಇನ್ನೂ ಗೋವಿಂದ ನಾಯಕ ಈ ರೀತಿ ಗಣ್ಯ ವ್ಯಕ್ತಿಗಳ ವಿರುದ್ಧ ಕೀಳಾಗಿ ಕಮೆಂಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವರ ವಿರುದ್ಧ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದು, ಎಷ್ಟು ಸಾರಿ ಬುದ್ದಿ ಹೇಳಿದರೂ ತಿದ್ದಿಕೊಳ್ಳುತ್ತಿಲ್ಲ.

ಪದೇ ಪದೇ ಗಣ್ಯವ್ಯಕ್ತಿಗಳನ್ನು ಗುರಿಯಾಗಿಸಿ ಕಮೆಂಟ್ ಮಾಡುತ್ತಿದ್ದಾನೆ. ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಕಮೆಂಟ್ ಮಾಡಿ ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾನೆ. ಈತನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಯುವ ಮೋರ್ಚಾ ಕಾರ್ಯಕರ್ತರು ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications