ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನ್ಪುರ ಹಿಂಸಾಚಾರ: ಡಿಎಂ ಪದಚ್ಯುತಿ, 21 ಐಎಎಸ್ ಅಧಿಕಾರಿಗಳ ವರ್ಗಾವಣೆ

|
Google Oneindia Kannada News

ಕಾನ್ಪುರ ಜೂನ್ 07: ಕಾನ್ಪುರ ಹಿಂಸಾಚಾರದಲ್ಲಿ ಯೋಗಿ ಸರ್ಕಾರ ಕ್ರಮ ಕೈಗೊಳ್ಳಲು ನಿರಂತರವಾಗಿ ಚಿತ್ತ ಹರಿಸಿದೆ. ಒಂದೆಡೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿದ್ದರೆ, ಸರ್ಕಾರ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಮಾಹಿತಿ ಪ್ರಕಾರ ಕಾನ್ಪುರ ಡಿಎಂ ನೇಹಾ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ನೇಹಾ ಶರ್ಮಾ ಅವರನ್ನು ಸ್ಥಳೀಯ ಸಂಸ್ಥೆಯ ನಿರ್ದೇಶಕಿಯನ್ನಾಗಿ ಮಾಡಲಾಗಿದೆ. ಯೋಗಿ ಸರ್ಕಾರ ಕೂಡ 9 ಡಿಎಂಗಳನ್ನು ವರ್ಗಾವಣೆ ಮಾಡಿದೆ. ಈ ಪೈಕಿ ಲಕ್ನೋ ಡಿಎಂ ಆಗಿದ್ದ ಅಭಿಷೇಕ್ ಪ್ರಕಾಶ್ ಹೆಸರೂ ಸೇರಿದೆ. ಅವರಿಗೆ ಈಗ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು

*ಗಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಕೃಷ್ಣ ಕರುಣೇಶ್ ಅವರನ್ನು ಗೋರಖ್‌ಪುರಕ್ಕೆ ವರ್ಗಾಯಿಸಲಾಗಿದ್ದು ಅವರನ್ನು ಅಲ್ಲಿ ಡಿಎಂ ಮಾಡಲಾಗಿದೆ.

Kanpur violence: DM overthrow, transfer of 21 IAS officers

*ವಿಜಯ್ ಕಿರಣ್ ಆನಂದ್ ಅವರನ್ನು ಡಿಎಂ ಗೋರಖ್‌ಪುರ ಹುದ್ದೆಯಿಂದ ತೆಗೆದುಹಾಕಲಾಗಿದೆ ಮತ್ತು ಶಾಲಾ ಶಿಕ್ಷಣದ ಪ್ರಭಾರ ನಿರ್ದೇಶಕರಾಗಿ, ಮೂಲ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಇದರೊಂದಿಗೆ ಕುಂಭಮೇಳದ ಪ್ರಯಾಗ್‌ರಾಜ್‌ನ ಹೆಚ್ಚುವರಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

*ಅನಾಮಿಕಾ ಸಿಂಗ್ ಅವರನ್ನು ಆಹಾರ ಪ್ರಾಧಿಕಾರದ ನಿರ್ದೇಶಕರ ಹುದ್ದೆಯಿಂದ ತೆಗೆದುಹಾಕಲಾಗಿದೆ ಮತ್ತು ಯುಪಿ ಸರ್ಕಾರದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಪೋಷಣೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

Kanpur violence: DM overthrow, transfer of 21 IAS officers

*ಸೂರ್ಯಪಾಲ್ ಗಂಗ್ವಾರ್ ಅವರನ್ನು ಲಕ್ನೋ ಡಿಎಂ ಆಗಿ ನೇಮಕ ಮಾಡಲಾಗಿದ್ದು, ಅಭಿಷೇಕ್ ಪ್ರಕಾಶ್ ಅವರನ್ನು ಲಕ್ನೋ ಡಿಎಂನಿಂದ ತೆಗೆದುಹಾಕಲಾಗಿದೆ ಮತ್ತು ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ.

*ವಿಶಾಖ್ ಜಿ ಅವರನ್ನು ಕಾನ್ಪುರ ನಗರದ ಹೊಸ ಡಿಎಂ ಮಾಡಲಾಗಿದೆ. ಇವರು ಇದುವರೆಗೆ ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿಯಾಗಿದ್ದರು.

*ಭವಾನಿ ಸಿಂಗ್ ಖಗರೌತ್ ಅವರನ್ನು ಮಧ್ಯಾಂಚಲ್ ವಿದ್ಯುತ್ ವಿತ್ರನ್ ನಿಗಮದ ಎಂಡಿ ಮಾಡಲಾಗಿದೆ.

*ಅನುಪಮ್ ಶುಕ್ಲಾ ಅವರನ್ನು ವಿಶೇಷ ಇಂಧನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.

Kanpur violence: DM overthrow, transfer of 21 IAS officers

*ನೀಲಂ ಸಾಯಿ ಅವರು ಜೌನ್‌ಪುರದ ಹೊಸ ಸಿಡಿಒ ಆಗಿದ್ದಾರೆ.

*ಸೆಲ್ವ ಕುಮಾರಿ ಅವರನ್ನು ಬರೇಲಿಯ ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ.

*ಸೌಮ್ಯಾ ಅಗರ್ವಾಲ್ ಅವರನ್ನು ಬಲ್ಲಿಯಾ ಡಿಎಂ ಆಗಿ ನೇಮಕ ಮಾಡಲಾಗಿದೆ.

* ಇಂದರ್ ವಿಕ್ರಮ್ ಸಿಂಗ್ ಅವರನ್ನು ಅಲಿಗಢದ ಹೊಸ ಡಿಎಂ ಆಗಿ ನೇಮಿಸಲಾಗಿದೆ.

* ಬಸ್ತಿಯ ನೂತನ ಡಿಎಂ ಆಗಿ ಪ್ರಿಯಾಂಕಾ ನಿರಂಜನ್ ಅವರನ್ನು ನೇಮಕ ಮಾಡಲಾಗಿದೆ.

* ಚಾಂದಿನಿ ಸಿಂಗ್ ಜಲೌನ್‌ನ ಹೊಸ ಡಿಎಂ ಆಗಿದ್ದಾರೆ.

ಕಳೆದ ಶುಕ್ರವಾರ ಕಾನ್ಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್‌ನ 15 ಖಾತೆಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಒಂದು ಗುಂಪು ಪ್ರತಿಭಟನೆ ಸಂದರ್ಭದಲ್ಲಿ ಮಾರುಕಟ್ಟೆಯನ್ನು ಮುಚ್ಚುವಂತೆ ಕರೆ ನೀಡಿತ್ತು. ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದಾಗ ಪರಸ್ಪರ ಕಲ್ಲು ತೂರಾಟ ನಡೆಯಿತು. ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿದರು. ಗಲಭೆಯಲ್ಲಿ 20 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

English summary
Yogi government DM has been ousted in connection with the Kanpur violence and transferred 21 IAS officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X