ಶಿವಮೊಗ್ಗ ಜನತೆಗೆ ಕುಡಿಯಲು ಕೊಳಚೆ ನೀರೇ ಗತಿ!

ಖಾಸಗಿ ಬಸ್ ನಿಲ್ದಾಣ ಸಮೀಪದ ದೊಡ್ಡಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಕುಡಿಯುವ ನೀರಿನ ಪೈಪ್‌ನೊಂದಿಗೆ ಕೊಳಚೆ ನೀರು ಸೇರುತ್ತಿದೆ. ನಗರಸಭೆ ಸಿಬ್ಬಂದಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.
ತುಂಗಾ ನದಿಯಿಂದ ಕುಡಿಯುವ ನೀರಿನ ಮುಖ್ಯ ಪೈಪ್ ದೊಡ್ಡಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹಾದು ಹೋಗಿದೆ. ಇಲ್ಲಿ ಸಿಮೆಂಟ್ ಛೇಂಬರ್‌ವೊಂದನ್ನು ನಿರ್ಮಿಸಿ, ಕಂಟ್ರೋಲ್ ವಾಲ್‌ವೊಂದನ್ನು ಅಳವಡಿಸಲಾಗಿದೆ. ಆದರೆ ಇಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇರದೆ ಇರುವುದರಿಂದ, ಕೊಳಚೆ ನೀರು ಸಿಮೆಂಟ್ ಛೇಂಬರ್‌ಗೆ ಹರಿದು ಬರುತ್ತಿದೆ. ಕುಡಿಯುವ ನೀರಿನೊಂದಿಗೆ ಬೆರೆಯುತ್ತಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಆರೋಪಿಸಿದ್ದಾರೆ.
ಕೂಡಲೇ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಕೊಳಚೆ ನೀರು ಶುದ್ದ ನೀರಿಗೆ ಸೇರುವುದನ್ನು ತಪ್ಪಿಸಬೇಕಾಗಿದೆ. ಅಶುದ್ದ ನೀರು ಕುಡಿದು ಸಾರ್ವಜನಿಕರು ರೋಗಗಳಿಗೆ ತುತ್ತಾಗುವ ಮುನ್ನವೇ ಎಚ್ಚರ ವಹಿಸಬೇಕಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications