ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲ ಭಾರಧ್ವಾಜ್ ಸುದ್ದಿಗೋಷ್ಠಿ ಹೈಲೈಟ್ಸ್

By Mahesh
|
Google Oneindia Kannada News

HR Bhardwaj Press Meet Highlights
ಬೆಂಗಳೂರು, ಅ.12: ಬಹುಮತ ಸಾಬೀತುಪಡಿಸಲು ಇನ್ನೊಂದು ಅವಕಾಶ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದ ನಂತರ ರಾಜಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಷ್ಟ್ರಪತಿ ಆಡಳಿತ ಹೇರುವ ಪರಿಸ್ಥಿತಿ ತಲೆ ದೋರಿದೆ ಎಂದಿದ್ದಾರೆ. ಆದರೆ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಸ್ನೇಹಭಾವದಿಂದ ಅವಕಾಶ ನೀಡುತ್ತಿದ್ದೇನೆ ಎಂದು ಭಾರಧ್ವಾಜ್ ಹೇಳಿದ್ದಾರೆ.

ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು,ಸ್ಪೀಕರ್ ಬೋಪಯ್ಯ ಶಾಸಕರನ್ನು ಏಕಾಏಕಿ ಅನರ್ಹಗೊಳಿಸದ ಕ್ರಮ ಸರಿಯಿಲ್ಲ. ರೆಡ್ಡಿ ಸೋದರರು 50 ಜನ ಶಾಸಕರನ್ನು ಹೈಜಾಕ್ ಮಾಡಿದ್ದಾಗ ಅವರನ್ನು ಏಕೆ ಅನರ್ಹಗೊಳಿಸಲಿಲ್ಲ ಎಂದು ಪ್ರಶಿಸಿದರು. ನಾನು ಪ್ರಜಾಪ್ರಭುತ್ವವಾದಿ ಎಂದು ತೋರಿಸಲು ಸಿಎಂಗೆ ಮತ್ತೊಂದು ಅವಕಾಶ ನೀಡಿದ್ದೇನೆ. ಸುಪ್ರೀಂಕೋರ್ಟ್ ಆದೇಶದಂತೆ ಅ.14ರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದೇನೆ.

ವಿಧಾನಸಭೆ ಅ.11 ರಂದು ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಖಾಕಿಧಾರಗಳ ಉಪಸ್ಥಿತಿಗೆ ನನ್ನ ಆಕ್ಷೇಪವಿದೆ. ಸ್ಪೀಕರ್ ಗೆ ಸಂದೇಶ ಕಳಿಸುವ ಅಧಿಕಾರ ನನಗಿದೆ. ನಾನು ಪಕ್ಷಪಾತ ಮಾಡಿಲ್ಲ. ಆದರೆ, ಸ್ಪೀಕರ್ ನಡೆದುಕೊಂಡ ಕ್ರಮ ಸರಿಯಿಲ್ಲ. ಸದನದಲ್ಲಿ ನಡೆದ ಕೋಲಾಹಲಕ್ಕೆ ಸಿಎಂ ನೇರಹೊಣೆ ಎಂದರು.

ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್ ಹಗರಣ, ಸರ್ಕಾರದ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದೇನೆ. ಯಾವುದೇ ಸಮಯದಲ್ಲಿ ನನ್ನ ಸಲಹೆಯನ್ನು ಸ್ವೀಕರಿಸದೇ ಸಿಎಂ ಪದೇ ಪದೇ ಟೀಕಿಸಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ರಾಜ್ಯಪಾಲರ ಕರ್ತವ್ಯ ನಿರ್ವಹಿಸಿದ್ದೇವೆ. ಉತ್ತಮ ನಾಗರೀಕ ಸಮಾಜವುಳ್ಳ ಕರ್ನಾಟಕ ಹಾಳಾಗುವುದು ನನಗಿಷ್ಟವಿಲ್ಲ ಎಂದು 74ರ ವಯೋವೃದ್ಧ ಭಾರಧ್ವಾಜ್ ಹೇಳಿದರು.

ನಾನು ಮತ್ತು ನನ್ನ ಹೆಂಡತಿ, ಅಷ್ಟೆ. ನಮಗೆ ಕರ್ನಾಟಕದಲ್ಲಿ ಮೂರನೇ ವ್ಯಕ್ತಿ ಇಲ್ಲ. ನಾನು ಸಂವಿಧಾನಕ್ಕೆ ಬದ್ಧನಷ್ಟೇ ವಿನಾ ಮತ್ತಾರ ಹಂಗೂ ನನಗೆ ಇಲ್ಲ. ನಾನು ಕರ್ನಾಟಕದಲ್ಲಿ ಹುಟ್ಟಿಲ್ಲ. ಈ ರಾಜ್ಯದಲ್ಲಿ ರಾಜ್ಯಪಾಲನಾಗುವ ಅವಕಾಶ ಬಂದಿದೆ. ಕರ್ನಾಟಕದ ಜನ ಸಭ್ಯರು ಮತ್ತು ಉತ್ತಮ ನಾಗರಿಕರು. ರಾಜ್ಯದಲ್ಲಿ ಹಿರಿಯ ಹುದ್ದೆಯಲ್ಲಿರುವ ನಾನು ಸಾರ್ವಜನಿಕ ಸಂವೇದನೆಗಳನ್ನು, ಬದುಕಿನ ಮೌಲ್ಯಗಲನ್ನು ಹಾಳಾಗಾಲು ಬಿಡುವುದಿಲ್ಲ ಎಂದೂ ಹಂಸರಾಜ್ ಸ್ಪಷ್ಟಪಡಿಸಿದರು.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X