ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಜಿ : ವಲಯಕ್ಕೆ ಮೂರು ಖಾಸಗಿ ಕಂಪನಿಗಳು

By Mrutyunjaya Kalmat
|
Google Oneindia Kannada News

3G auction: 3 pvt players in most circles
ನವದೆಹಲಿ, ಫೆ. 26 : 3ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಸಂಬಂಧಿಸಿದಂತೆ ಬಹುತೇಕ ವೃತ್ತಗಳಲ್ಲಿ 3 ಖಾಸಗಿ ಕಂಪನಿಗಳಿಗೆ ಅನುಮತಿ ನೀಡುವುದಾಗಿ ಕೇಂದ್ರ ಸರಕಾರ ಹೇಳಿದೆ. ಇದರೊಂದಿಗೆ 3ಜಿ ಹರಾಜು ಕುರಿತ ಗೊಂದಲ-ಪ್ರಹಸನ ಅಂತ್ಯವಾಗುವ ಲಕ್ಷಣಗಳು ಗೋಚರಿಸಿವೆ.

ಮೆಟ್ರೊ ಸೇರಿದಂತೆ ದೇಶದ ಬಹುತೇಕ ವೃತ್ತಗಳ 3ಜಿ ಸೇವೆಯಲ್ಲಿ 3 ಕಂಪನಿಗಳಿಗೆ ಅವಕಾಶ ನೀಡಲಾಗುವುದು. ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 5 ರಾಜ್ಯಗಳಲ್ಲಿ 4 ಕಂಪನಿಗಳಿಗೆ ಅನುಮತಿ ನೀಡುತ್ತೇವೆ ಎಂದು ಸರಕಾರ ಸ್ಪಷ್ಟಪಡಿಸಿದೆ. 3ಜಿ ಸೇವೆ, ವೇಗಯುತ ಡೌನ್‌ಲೋಡ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲಿದೆ.

ಆಹ್ವಾನ ಅರ್ಜಿ ಸೂಚನೆ(ಎನ್‌ಐಎ) ಪ್ರಕಾರ, 22 ವೃತ್ತಗಳಲ್ಲಿ 3ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆಯಲಿದೆ. ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಖಾಸಗಿ ಕಂಪನಿಗಳು ಅವಕಾಶ ಪಡೆಯಲಿವೆ. ಹರಾಜಿನಲ್ಲಿ ಗೆದ್ದ ಕಂಪನಿ, 2010ರ ಸೆ.1ರಿಂದ ಸೇವೆ ಆರಂಭಿಸುವ ಅವಕಾಶ ಪಡೆಯಲಿದೆ. ಸ್ಪೆಕ್ಟ್ರಮ್ ಲಭ್ಯತೆ ಮತ್ತು ಅನುಮತಿ ನೀಡಬೇಕಾದ ಕಂಪನಿಗಳ ಸಂಖ್ಯೆ ಕುರಿತಾಗಿನ ಗೊಂದಲಗಳಿಂದ ಹಲವಾರು ಸಲ ಹರಾಜು ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು.

ಏ.9ಕ್ಕೆ ಹರಾಜು : 3ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಏ.9ರಂದು ನಡೆಯಲಿದೆ. ಮಾರ್ಚ್. 19 ಹರಾಜು ಅರ್ಜಿ ಸಲ್ಲಿಸಲು ಕೊನೆಯ ದಿನ. ಏಪ್ರಿಲ್ 5 ಮತ್ತು 6 ರಂದು ಅಣಕು ಹರಾಜು ನಡೆಯಲಿದೆ. ಸರಕಾರ 3ಜಿ ಹರಾಜಿನಿಂದ 35 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಭಾರ್ತಿ, ವೊಡಾಫೋನ್, ಆರ್‌ಕಾಮ್, ಟಾಟಾ ಮುಂತಾದ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿವೆ. ಸ್ಪೆಕ್ಟ್ರಮ್ ದರ ನಿಗದಿಯಲ್ಲಿನ ಭಿನ್ನಾಭಿಪ್ರಾಯ ದಿಂದ ಹರಾಜು ಮುಂದೂಡಿಕೆಯಾಗಿತ್ತು. ಈಗ ಬಿನ್ನಾಭಿಪ್ರಾಯ ಇತ್ಯರ್ಥವಾಗಿದೆ ಎಂದು ದೂರಸಂಪರ್ಕ ಇಲಾಖೆ ಸಚಿವ ಎ. ರಾಜಾ ಬುಧವಾರ ಹೇಳಿಕೆ ನೀಡಿದ್ದರು.

ಬಿಡಬ್ಲ್ಯುಎ ಸ್ಪೆಕ್ಟ್ರಮ್ ಹರಾಜು, 3ಜಿ ಹರಾಜಿನ 2 ದಿನದ ನಂತರ ಆರಂಭವಾಗುತ್ತದೆ. ಬ್ರಾಡ್‌ಬ್ಯಾಂಡ್ ಸೇವೆಗೆ ಈ ಸ್ಪೆಕ್ಟ್ರಮ್ ಬಳಕೆಯಾಗುತ್ತದೆ ಎಂದು ಮೂಲಗಳು ಹೇಳಿವೆ. ಹರಾಜು ಪ್ರಕ್ರಿಯೆ ಮುಗಿದ 10ದಿನದೊಳಗೆ ಕಂಪನಿಗಳು ಹಣ ಪಾವತಿ ಮಾಡಲಿವೆ. ಮೆಟ್ರೊ ಮತ್ತು ಎ ದರ್ಜೆ ನಗರದ ಸೇವೆಗೆ 320 ಕೋಟಿ ರೂ, ಬಿ ದರ್ಜೆ ನಗರದಲ್ಲಿ 120 ಕೋಟಿ ರೂ, ಸಿ ದರ್ಜೆ ನಗರದಲ್ಲಿ 30 ಕೋಟಿ ರೂ. ನಿಗದಿಪಡಿಸಲಾಗಿದೆ. ಬಿಡಬ್ಲ್ಯುಎ ಸ್ಪೆಕ್ಟ್ರಮ್‌ಗೆ ಸಂಬಂಧಿಸಿದಂತೆ ಮೆಟ್ರೊ ನಗರಕ್ಕೆ 160 ಕೋಟಿ ರೂ. ಉಳಿದೆಡೆ 15-60 ಕೋಟಿ ರೂ. ದರ ನಿಗದಿಯಾಗಿದೆ ಎಂದು ದೂರ ಸಂಪರ್ಕ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X