ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಿಲೋಲನಿಗೆ ಚಿನ್ನದ ರಥ ಸಮರ್ಪಣೆ

By Staff
|
Google Oneindia Kannada News

Udupi Krishna Ratha
ಉಡುಪಿ, ಡಿ. 22 : ಭಾರತದಲ್ಲೇ ಮೊದಲ ಬಾರಿಗೆ ನವಕನಕರತ್ನ ಉಡುಪಿ ಶ್ರೀಕೃಷ್ಣ ಸದ್ಯವೇ ಸಮರ್ಪಣೆಯಾಗಲಿದ್ದು, ರಥ ನಿರ್ಮಾಣದ ಅಂತಿಮ ಹಂತದಲ್ಲಿದೆ. ಡಿ.24 ರಿಂದ 26ರ ತನಕ ಸಮರ್ಪಣೆ ಮಹೋತ್ಸವ ಮತ್ತು ಡಿ 27 ರಿಂದ ಜ.4ರ ತನಕ ನವರತ್ನ ನವೋತ್ಸವ ಜರುಗಲಿದೆ. ಮಧುರೈನ ತಂಗದೊರೈ ಮತ್ತು 150 ಕುಶಲಕರ್ಮಿಗಳ ಒಂದು ವರ್ಷದಿಂದ ರಥದ ನಿರ್ಮಾಣದ ಶ್ರಮವಹಿಸಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಎರಡು ಕೋಟಿ ರುಪಾಯಿಗೂ ಅಧಿಕ ಸಾಲ ನವರತ್ನ ನಿರ್ಮಾಣಕ್ಕಾಗಿದ್ದು, ಆರ್ಥಿಕ ಆಯಾಸ ನೀಗಲು ಭಕ್ತರು ತಮ್ಮ ಭಕ್ತಿ ಕಾಣಿಕೆ ದೇಣಿಗೆಯನ್ನು ಶ್ರೀಕೃಷ್ಣ ಸೇವಾ ಸಮಿತಿ, ಉಡುಪಿ ಈ ವಿಳಾಸಕ್ಕೆ ಸಲ್ಲಿಸುವಂತೆ ಸುಗುಣೇಂದ್ರ ಶ್ರೀಪಾದರು ಮನವಿ ಮಾಡಿಕೊಂಡಿದ್ದಾರೆ.

ರಥದ ವೈಶಿಷ್ಟ್ಯ

7 ಕೋಟಿ ರುಪಾಯಿ ವೆಚ್ಚ, 500 ಕೆಜಿ ಬೆಳ್ಳಿ, 12 ಕೆಜಿ ಚಿನ್ನ, 1.50 ಲಕ್ಷ ರತ್ನ, ಸಾಂಪ್ರಾದಾಯಕ ಅಷ್ಟಪಟ್ಟಿಯ ಮಂಟಪದ ನಡುವೆ ಶ್ರೀಕೃಷ್ಣನರತ್ನಖಚಿತ ಪೀಠ, ಹಿಂಬದಿ ಆಚಾರ್ಯ ಮಧ್ವರು ಉಪೇಂದ್ರ ತೀರ್ಥರಿಗೆ ನೀಡಿದ ವಿಠಲ. ಆಕರ್ಷಣೆಗಾಗಿ ರಥದಲ್ಲಿ ಕೆಂಪು ಬಿಳಿ ಹರಳು ಹೆಚ್ಚು. 2 ಟನ್ ತೂಕ, 9 ಅಡಿ ಎತ್ತರ. 5 ಅಡಿ ಎತ್ತರ, ಒಂಬತ್ತು ಅಡಿ ಅಗಲದ ನಾಲ್ಕು ಚಕ್ರದ ಜಿಡ್ಡಿಯ ಜೋಡಣೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X