ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಆರ್ ಸಾವು ನಿಯೋಜಿತ ಸಂಚು?

|
Google Oneindia Kannada News

YS Rajashekar reddy
ಹೈದರಾಬಾದ್, ಅ. 21 :ಆಂಧ್ರಪ್ರದೇಶದ ಮಾಜಿ ಮಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಸಾವಿನ ಬಗ್ಗೆ ಸಾಕ್ಷಿ ದಿನಪತ್ರಿಕೆ ಶಂಕೆ ವ್ಯಕ್ತಪಡಿಸಿದ್ದು ಆಂಧ್ರದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾಕ್ಷಿ ಪತ್ರಿಕೆ ವೈಎಸ್ಆರ್ ಅವರ ಕುಟುಂಬದ ಒಡೆತನದಲ್ಲಿದೆ.

ಇಂದು ಪ್ರಕಟಿಸಲಾಗಿರುವ ವರದಿಯಲ್ಲಿ ವೈಎಸ್ಆರ್ ಅವರ ಸಾವು ಅಪಘಾತದಿಂದ ಅಲ್ಲ, ಅದು ಹತ್ಯೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ. ಅವರ ಹತ್ಯೆಗಾಗಿ ಸಂಚು ರೂಪಿಸಲಾಗಿತ್ತು ಎಂದು ಹೇಳಿ ಸಂಚಲನವೆಬ್ಬಿಸಿದೆ. ರಾಜಶೇಖರ ರೆಡ್ಡಿ ಅವರ ಸಾವಿನ ಹಿಂದಿನ ರಹಸ್ಯ ಭೇದಿಸಬಹುದಾದ ಹೆಲಿಕಾಪ್ಟರ್ ಕಾಕ್ಪಿಟ್ ನಲ್ಲಿದ್ದ ಧ್ವನಿ ಮುದ್ರಣ ಸಾಧನ ಏನು ಮುದ್ರಿಸಿದೆ ಎಂಬುದನ್ನು ಕೂಡ ರಹಸ್ಯವಾಟ್ಟಿರುವುದು ಮತ್ತಷ್ಟು ಸಂಶಯಗಳಿಗೆ ಎಡೆಮಾಡಿದೆ.

ಅಪಘಾತವಾಗುವ ಕೆಲ ಕ್ಷಣಗಳ ಮೊದಲು ರಾಜಶೇಖರ ರೆಡ್ಡಿ ಪೈಲಟ್ ಗೆ 'ಈಡಿಯಟ್' ಎಂದು ಕೂಗಿದ್ದರೆಂದು ಖಾಸಗಿ ಟಿವಿ ಚಾನಲ್ ಹಿಂದೆ ಬಹಿರಂಗಪಡಿಸಿತ್ತು. ನಂತರ ಈ ಘಟನೆ ಕುರಿತಂತೆ ಯಾವುದೇ ಮಾಹಿತಿಯನ್ನು ಚಾನಲ್ ಬಹಿರಂಗಪಡಿಸಿಲ್ಲ. ಗೃಹ ಮಂತ್ರಾಲಯ ಟಿವಿ ಚಾನಲ್ಲಿಗೆ ಬಾಯಿ ಮುಚ್ಚಿಕೊಂಡಿರಲು ಸೂಚಿಸಿದೆ ಎಂದು ಹೇಳಲಾಗಿದೆ.

ದಿವಂಗತ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಮಗ ಜಗನ್ಮೋಹನ್ ರೆಡ್ಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೈಕಮಾಂಡ್ ಮೇಲೆ ತೀವ್ರ ಒತ್ತಡ ತರುತ್ತಿದ್ದಾರೆ. ಆದರೆ, ಹೈಕಮಾಂಡ್ ಮಾತ್ರ ಜಗನ್ ಗೆ ಪಟ್ಟಕಟ್ಟಲು ತಯಾರಿಲ್ಲ. ಇದರಿಂದ ಬೇಸತ್ತ ವೈಎಸ್ ಆರ್ ಬೆಂಬಲಿಗರು ದಿನಕ್ಕೊಂದು ನಾಟಕ ಶುರು ಮಾಡಿಕೊಂಡಿದ್ದಾರೆ. ಅದರ ಪರಿಣಾಮ ಇಂದಿನ ಸಾಕ್ಷಿ ಪತ್ರಿಕೆ ಹೆಡ್ ಲೈನ್ ಸ್ಟೋರಿ ಆಗಿದೆ ಎನ್ನುವುದು ಗುಟ್ಟಾಗೇನು ಉಳಿದಿಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X