ಹಂದಿಜ್ವರ ಹತೋಟಿಗೆ ಯುಪಿಎ ಏನ್ಮಾಡ್ತಿದೆ?
ನವದೆಹಲಿ,
ಆ.10: ದೇಶದ ಎಲ್ಲೆಡೆ ಹಂದಿಜ್ವರ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ, ಯುಪಿಎ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಕೊನೆಗೂ ಮನಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಅಜಾದ್ ಅವರು ಇಂದು ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಸಂಪುಟ ಕಾರ್ಯದರ್ಶಿ ಕೆಎಂ ಚಂದ್ರಶೇಖರ್ ಅವರೊಡನೆ ಸಮಾಲೋಚನೆ ನಡೆಸಿದರು. ದೇಶದಲ್ಲಿ ಶೇ. 33 ರಷ್ಟು ಜನರಿಗೆ ಎಚ್ 1 ಎನ್ 1 ಸೋಂಕು ತಗುಲುವ ಸಾಧ್ಯತೆಯಿದೆ ಎಂದು ಗುಲಾಮ್ ನಬಿ ಅಜಾದ್ ಹೇಳಿದ್ದಾರೆ. id="toptextpromo">ಇಂದು
ನಡೆದ ಸಭೆಯಲ್ಲಿ ಹಂದಿಜ್ವರ ಹರಡದಂತೆ ತಡೆಗಟ್ಟಲು ಬೇಕಾದ ಅಗತ್ಯ ಮುನ್ಸೂಚನೆ ಹಾಗೂ ಔಷಧ ಲಭ್ಯತೆಯ ಬಗ್ಗೆ ಚರ್ಚಿಸಲಾಯಿತು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ನರೇಶ್ ದಯಾಳ್ ಹೇಳಿದರು.ಇದುವರೆವಿಗೂ 6 ಜನ ಎಚ್ 1ಎನ್ 1 ಸೋಂಕಿನಿಂದ ಬಳಲುತ್ತಿದ್ದ 6 ಜನ ಸಾವನ್ನಪ್ಪಿದ್ದಾರೆ. ರೋಗದ ಲಕ್ಷಣ ಹಾಗೂ ಸಾರ್ವಜನಿಕ ನೀಡಬೇಕಾದ ಮಾಹಿತಿ ಕುರಿತು ಚರ್ಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications