Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?

ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಬಿಸಿಲಿನಿಂದ ದೇಹವನ್ನು ತಂಪಾಗಿಡಲು ಮತ್ತು ಹೈಡ್ರೇಟ್(ನೀರಿನಾಂಶ)ನಿಂದ ಇರಲು ಜನರು ವಿವಿಧ ಪಾನಿಯಗಳತ್ತ ಮುಖ ಮಾಡುತ್ತಾರೆ. ವಿಶೇಷವಾಗಿ ಭಾರತದಲ್ಲಿ ಎಳನೀರು ಹಾಗೂ ಕಬ್ಬಿನ ರಸ ಆರೋಗ್ಯಕರ ಮತ್ತು ಜನಪ್ರಿಯ ಪಾನೀಯಗಳಾಗಿವೆ. ಆದರೆ ಈ ಎರಡರಲ್ಲಿ ಯಾವುದು ಆರೋಗ್ಯಕರ? ಯಾವುದು ಹೆಚ್ಚು ದೇಹಕ್ಕೆ ನಿರಿನಾಂಶವನ್ನು ನೀಡುತ್ತದೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಎಳನೀರು ಪ್ರಕೃತಿ ಹೈಡ್ರೇಶನ್ ಪಾನೀಯ

ಎಳನೀರನ್ನು ಸಾಮಾನ್ಯವಾಗಿ ಪ್ರಕೃತಿಯ ಪಾನೀಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೊಟ್ಯಾಶಿಯಮ್, ಸೋಡಿಯಮ್ ಮತ್ತು ಮೆಗ್ನೀಶಿಯಮ್ ಮುಂತಾದ ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ಬೆವರಿನಿಂದ ಮೂಲಕ ಕಳೆದುಹೋಗುವ ದ್ರವ ಮತ್ತು ಖನಿಜಗಳನ್ನು ಮರು ಪೂರೈಸುವಲ್ಲಿ ಸಹಾಯ ಮಾಡುತ್ತವೆ.

Summer Drinks

ಎಳನೀರು ಕಡಿಮೆ ಸಕ್ಕರೆ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ದಿನ ನಿತ್ಯ ಕುಡಿಯಲು ಸೂಕ್ತವಾಗಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರು ಮತ್ತು ಹೆಚ್ಚು ದಣಿವನ್ನು ಅನುಭವಿಸುವವರಿಗೆ ಇದು ಉತ್ತಮ ಪಾನೀಯ ಆಗಿದೆ.

ಕಬ್ಬಿನ ರಸ ತಕ್ಷಣ ಶಕ್ತಿ ನೀಡುವ ಪಾನೀಯ

ಕಬ್ಬಿನ ರಸವು ಸಾಮಾನ್ಯವಾಗಿ ಸಿಹಿಯನ್ನು ಹೊಂದಿದ್ದು ದೇಹಕ್ಕೆ ತಕ್ಷಣ ಶಕ್ತಿ ನೀಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸಕ್ಕರೆ, ಕ್ಯಾಲ್ಸಿಯಮ್, ಪೊಟ್ಯಾಸಿಯಮ್ ಮತ್ತು ಇತರ ಖನಿಜಾಂಶಗಳು ಇರುತ್ತವೆ. ಬೇಸಿಗೆಕಾಲದಲ್ಲಿ ದೇಹವನ್ನು ತಂಪಾಗಿಸಲು ಹಾಗೂ ದಣಿವು ನಿವಾರಿಸಲು ಕಬ್ಬಿನ ರಸ ತುಂಬಾ ಸಹಕಾರಿಯಾಗಿದೆ. ಆದರೆ ಇದರಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಿರುವುದರಿಂದ ಇದನ್ನು ಮಿತವಾದ ರೀತಿಯಲ್ಲಿ ಬಳಸುವುದು ಒಳ್ಳೆಯದು.

ಹೈಡ್ರೇಶನ್ ದೃಷ್ಟಿಯಿಂದ ನೋಡಿದರೆ ದೇಹಕ್ಕೆ ಯಾವುದು ಉತ್ತಮ?

ಹೈಡ್ರೇಶನ್ ದೃಷ್ಟಿಯಿಂದ ನೋಡಿದರೆ ಆರೋಗ್ಯಕ್ಕೆ ಎಳನೀರು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ. ಸಕ್ಕರೆಯ ಪ್ರಮಾಣವು ಕಡಿಮೆ ಮತ್ತು ಹೆಚ್ಚು ಎಲೆಕ್ಟ್ರೊಲೈಟ್‌ಗಳು ಹೊಂದಿರುತ್ತದೆ ಆದ್ದರಿಂದ ಎಳನೀರು ಒಳ್ಳೆಯದು ಎಂದು ತಜ್ಞರ ಅಭಿಪ್ರಾಯವಾಗಿದೆ. ಎಳನೀರು ಕುಡಿಯುವುದರಿಂದ ದೇಹದಲ್ಲಿನ ನೀರಿನಾಂಶವನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿ ಇಡುವ ಸಾಮರ್ಥ್ಯ ಇದೆ ಎಂದು ಹೇಳುತ್ತಾರೆ.

ಆರೋಗ್ಯಕ್ಕೆ ಹೆಚ್ಚಿನ ಲಾಭ

ಎಳನೀರು ದೇಹಕ್ಕೆ ನೀರಿನಂಶವನ್ನು ಹೆಚ್ಚು ಮಾಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಸಹಕಾರಿಯಾಗಿದೆ. ಇದರಲ್ಲಿ ಇರುವ ನೈಸರ್ಗಿಕ ಎನ್ಜೈಮ್‌ಗಳು ಅಜೀರ್ಣ ಮತ್ತು ಆಮ್ಲತೆಯಂತಹ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವಾಗಬಲ್ಲದು. ಅದೆ ರೀತಿ ಕಬ್ಬಿನ ರಸದಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕಗಳು ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಯಾವಾಗ ಯಾವುದು ಕುಡಿಯಬೇಕು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ವ್ಯಾಯಾಮದ ನಂತರ ಎಳನೀರು ಕುಡಿಯುವುದು ಉತ್ತಮ. ಇದು ದೇಹಕ್ಕೆ ತಕ್ಷಣ ತಂಪು ನೀಡುವುದರ ಜೊತೆಗೆ ಎಲೆಕ್ಟ್ರೋಲೈಟ್‌ಗಳನ್ನು ಸ್ಥಿರತೆಯಲ್ಲಿ ಇಡುತ್ತದೆ. ಇನ್ನೊಂದೆಡೆ ಕಬ್ಬಿನ ರಸವು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಕಬ್ಬಿನ ರಸವು ಹೆಚ್ಚು ದಣಿವು ಅಥವಾ ಶಕ್ತಿಯ ನ್ಯೂನತೆಯನ್ನು ಅನುಭವಿಸಿದಾಗ ಕಬ್ಬಿನ ರಸ ಕುಡಿಯುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ. ಕಬ್ಬಿನ ರಸವನ್ನುಆಯುರ್ವೇದದಲ್ಲಿ ಕಾಮಾಲೆಯಂತಹ ಕಾಯಿಲೆಗಳಿಗೆ ಉಪಯೋಗಿಸಲಾಗುತ್ತದೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಕಬ್ಬಿನ ರಸವೂ ಆರೋಗ್ಯಕರವಾದ ಪಾನೀಯವೇ ಆಗಿದ್ದರೂ ಇದರಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಇರುವುದರಿಂದ ಮಿತವಾಗಿ ಸೇವಿಸುವುದು ಒಳ್ಳೆಯದು. ಜೊತೆಗೆ ಸ್ವಚ್ಛವಾದ ಸ್ಥಳದಲ್ಲಿ ತಯಾರಿಸಿದ ಕಬ್ಬಿನ ರಸವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+