ನಿಮ್ಮ ಮನೆಯ ವಾಸ್ತು ಸರಿಯಿದೆಯೇ? ಶಾಂತಿ ಮತ್ತು ಪ್ರಗತಿಗಾಗಿ ಇಲ್ಲಿವೆ ಪರಿಹಾರಗಳು
ವಾಸ್ತು ಶಾಸ್ತ್ರ ಎಂಬುದು ಕೇವಲ ಮನೆ ಕಟ್ಟವ ಕಲೆಯಲ್ಲ, ಇದು ಒಂದು ಪ್ರಕೃತಿಯ ಪಂಚಭೂತಗಳಲ್ಲಿ ಮನುಷ್ಯನು ಸಮತೋಲನ ಕಾಯ್ದುಕೊಳ್ಳುವ ವಿಜ್ಞಾನ. ನಾವು ದಿನನಿತ್ಯದ ಅವಸರದಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳು ಮನೆಯ ಶಕ್ತಿಯ ಓಟದ ಮೇಲೆ ಪ್ರಭಾವ ಬೀರುತ್ತವೆ. ಸಕಾರತ್ಮಕ ಶಕ್ತಿಯು ಮನೆಯೊಳಗೆ ಸರಳ ರೀತಿಯಲ್ಲಿ ಬರದೆ ಇದ್ದಾಗ ಮಾನಸಿಕ ಒತ್ತಡ, ಅನಾರೋಗ್ಯ, ಮತ್ತು ಆರ್ಥಿಕ ಮುಗ್ಗಟ್ಟುಗಳು ಎದುರಾಗುತ್ತವೆ.
1. ಮನೆಯ ಮುಖ್ಯ ದ್ವಾರ ಮತ್ತು ಸ್ವಚ್ಚತೆ
ಮನೆಯ ಮುಖ್ಯ ದ್ವಾರ ಬಾಗಿಲು ಲಕ್ಷ್ಮಿಯ ಪ್ರವೇಶದ್ವಾರ ಎಂದು ಪರಿಗಣಿಸಲಾಗುತ್ತದೆ. ಇದು ಯಾವಗಲೂ ಬೆಳಕಿನಿಂದ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಬಾಗಿಲಿನ ಹಿಂದೆ ಕಸದ ಬುಟ್ಟಿ ಅಥವಾ ಹಳೆಯ ಚಪ್ಪಲಿಗಳನ್ನು ಇಡುವುದರಿಂದ ಅದೃಷ್ಟವು ದೂರವಾಗುತ್ತದೆ. ಪೂಜಾ ಕೊಠಡಿ ಮತ್ತು ಅಡುಗೆಮನೆಯಲ್ಲಿ ಅಸ್ತವ್ಯಸ್ತವಾಗಿರುವ ವಸ್ತುಗಳನ್ನು ತೆಗೆದುಹಾಕುವುದರಿಂದ ಮನೆಯಲ್ಲಿ ಶಾಂತಿಯ ವಾತವರಣ ನಿರ್ಮಾಣವಾಗುತ್ತದೆ.

2. ನೈಸರ್ಗಿಕ ಬೆಳಕಿನೊಂದಿಗೆ ದಿನದ ಆರಂಭ
ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಕಿಟಕಿ-ಬಾಗಿಲುಗಳನ್ನು ತೆರೆಯುವುದು ವಾಸ್ತುವಿನ ದೃಷ್ಟಿಯಿಂದ ಅತ್ಯಂತ ಶ್ರೇಷ್ಠ. ಸೂರ್ಯನ ಕಿರಣಗಳು ಮನೆಯ ಒಳಗಿನ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದು ಮಾತ್ರವಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕುತ್ತವೆ. ತಾಜಾ ಗಾಳಿಯ ಸಂಚಾರವು ಮನೆಯ ಸದಸ್ಯರ ಆಲೋಚನೆಗಳಲ್ಲಿ ಸ್ಪಷ್ಟತೆಯನ್ನು ತರುತ್ತದೆ.
3. ಅಡುಗೆಮನೆಯಲ್ಲಿ ಸ್ವಚ್ಚತೆ
ಅಡುಗೆಮನೆಯು 'ಅಗ್ನಿ' ತತ್ತ್ವವನ್ನು ಪ್ರತಿನಿಧಿಸುತ್ತದೆ, ರಾತ್ರಿ ವೇಳೆ ಸಿಂಕ್‌ನಲ್ಲಿ ಎಂಜಲು ಪಾತ್ರೆಗಳನ್ನು ಬಿಡುವುದು ಅಲಕ್ಷ್ಮಿಯನ್ನು ಆಹ್ವಾನಿಸಿದಂತೆ. ಇದು ಕುಟುಂಬದಲ್ಲಿ ಕಲಹ ಮತ್ತು ಅನಗತ್ಯ ಖರ್ಚುಗಳಿಗೆ ಕಾರಣವಾಗಬಹುದು. ಅಡುಗೆಮನೆಯ ಈಶಾನ್ಯ ಮೂಲೆಯಲ್ಲಿ ನೀರನ್ನು ಮತ್ತು ಆಗ್ನೇಯದಲ್ಲಿ ಸ್ಟೌವ್ ಇಡುವುದು ಸಮೃದ್ಧಿಯ ಸಂಕೇತ.
4. ಮುರಿದ ವಸ್ತುಗಳು ಮತ್ತು ನಕಾರಾತ್ಮಕತೆ
ಮನೆಯಲ್ಲಿ ನಿಂತುಹೋದ ಗಡಿಯಾರಗಳು ನಮ್ಮ ಎಲ್ಲಾ ರೀತಿಯ ಪ್ರಗತಿಯನ್ನು ಕುಂಠಿತಗೊಳಿಸುತ್ತವೆ. ಹಾಗೆಯೇ ಒಡೆದ ಕನ್ನಡಿ ಅಥವಾ ಬಿರುಕು ಬಿಟ್ಟ ಗಾಜಿನ ವಸ್ತುಗಳು ಸಂಬಂಧಗಳಲ್ಲಿ ಬಿರುಕು ತರುತ್ತವೆ. ಇವುಗಳನ್ನು ಸಂಗ್ರಹಿಸಿಡುವುದರಿಂದ ಮನಸ್ಸಿನಲ್ಲಿ ಗೊಂದಲ ಹೆಚ್ಚಾಗುತ್ತದೆ. ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳನ್ನು ತಕ್ಷಣ ವಿಲೇವಾರಿ ಮಾಡುವುದು ಉತ್ತಮ.
5. ಆರೋಗ್ಯ ಮತ್ತು ಔಷಧಗಳ ನಿರ್ವಹಣೆ
ಬಹಳಷ್ಟು ಜನರು ಔಷಧಗಳನ್ನು ಸುಲಭವಾಗಿ ಸಿಗಲಿ ಎಂದು ಅಡುಗೆಮನೆಯಲ್ಲಿ ಇಡುತ್ತಾರೆ. ಆದರೆ ಇದು ವಾಸ್ತುವಿನ ಪ್ರಕಾರ ಆಹಾರ ತಯಾರಿಸುವ ಸ್ಥಳದಲ್ಲಿ ಔಷಧ ಇಡುವುದು ಕುಟುಂಬ ಸದಸ್ಯರು ಪದೇ ಪದೇ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. ಔಷಧಗಳನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ಭಾಗದ ಪ್ರತ್ಯೇಕ ಸ್ಥಳದಲ್ಲಿ ಇಡುವುದು ಸೂಕ್ತ.
6. ಸಂಜೆಯ ದೀಪಾರಾಧನೆ ಮತ್ತು ನಿದ್ರೆ
ಸಂಜೆಯ ಸಮಯದಲ್ಲಿ ಮನೆಯ ಪ್ರವೇಶ ದ್ವಾರದಲ್ಲಿ ಮತ್ತು ದೇವರ ಮನೆಯಲ್ಲಿ ದೀಪ ಹಚ್ಚುವುದು ಕತ್ತಲನ್ನು ಮಾತ್ರವಲ್ಲ, ದಾರಿದ್ರ್ಯವನ್ನೂ ಓಡಿಸುತ್ತದೆ. ಸಕಾಲದಲ್ಲಿ ನಿದ್ರೆ ಮಾಡುವುದು ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಜೀವನದ ಶಿಸ್ತನ್ನು ಹೆಚ್ಚಿಸುತ್ತದೆ. ಮಲಗುವಾಗ ತಲೆಯನ್ನು ದಕ್ಷಿಣ ದಿಕ್ಕಿಗೆ ಇಟ್ಟು ಮಲಗುವುದು ಆಳವಾದ ನಿದ್ರೆಗೆ ಮತ್ತು ಮಾನಸಿಕ ಶಾಂತಿಗೆ ಸಹಕಾರಿ.
ಒಟ್ಟಿನಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ದಿ ಮತ್ತು ಅಭವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications