Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ
ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಎಲ್ಲರು ತಂಪಾದ ನೀರನ್ನು ಕುಡಿಯಲು ಬಯಸುತ್ತಾರೆ. ಕಚೇರಿಯಲ್ಲಾಗಲಿ, ಮನೆಯಲ್ಲಾಗಲಿ ಅಥವಾ ಹೊರಗಡೆ ಇಂದಾ ಬಂದ ತಕ್ಷಣ ಪ್ರಿಜ್ ತೆಗೆದು ತಣ್ಣಗಿನ ನೀರನ್ನು ಕುಡಿಯುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ಅತಿ ಹೆಚ್ಚು ತಣ್ಣಗಿನ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ತಣ್ಣಗಿನ ನೀರು ಜೀರ್ಣಕ್ರಿಯೆಗೆ ಸಂಬಂದಿಸಿದ ಕಾಯಿಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಯಾವಗಲೂ ಊಟದ ನಂತರ ತಣ್ಣಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುವ ಸಾದ್ಯತೆ ಇರುತ್ತದೆ. ಇದರಿಂದ ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳವ ಸಾದ್ಯತೆಗಳು ಹೆಚ್ಚಾಗಬಹುದು ಎಂದು ತಜ್ಙರ ಹೇಳುತ್ತಾರೆ.

ಕೆಲವರಿಗೆ ತಣ್ಣಗಿನ ನೀರು ತಕ್ಷಣವೇ ಗಂಟಲು ನೋವು, ಕೆಮ್ಮು ಅಥವಾ ಶೀತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈಗಾಗಲೇ ಗಂಟಲು ಅಥವಾ ಶೀತ ಸಮಸ್ಯೆ ಇರುವವರು ಫ್ರಿಜ್ ನೀರನ್ನು ಕುಡಿಯದೆ ಇರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೃದಯ ಸಂಬಂಧಿ ಸಮಸ್ಯೆಗಳಿರುವವರಲ್ಲಿ ತಣ್ಣಗಿನ ನೀರು ರಕ್ತನಾಳಗಳ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದು. ಹೆಚ್ಚು ತಣ್ಣಗಿನ ನೀರು ಸೇವಿಸುವುದು ರಕ್ತನಾಳಗಳ ಗಾತ್ರಕ್ಕೆ ತೊಂದರೆಗೆ ಕಾರಣವಾಗಬಹುದು ಎಂಬ ಅಭಿಪ್ರಾಯವೂ ಇದೆ.
ಬೇಸಿಗೆಯಲ್ಲಿ ದೇಹ ಡೀಹೈಡ್ರೇಷನ್ ಆಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಆದ್ದರಿಂದ ಸಾಕಷ್ಟು ನೀರು ಕುಡಿಯಬೇಕು. ಆದರೆ ತುಂಬಾ ತಣ್ಣಗಿನ ನೀರಿಗಿಂತ ಸಾಮಾನ್ಯ ತಾಪಮಾನದ ನೀರು ಅಥವಾ ಸ್ವಲ್ಪ ತಂಪಾದ ನೀರು ಕುಡಿಯುವುದು ಆರೋಗ್ಯಕರ ಆಯ್ಕೆಯಾಗಿದೆ.
ತಜ್ಞರ ಪ್ರಕಾರ ಫ್ರಿಜ್ ನೀರು ಸಂಪೂರ್ಣವಾಗಿ ಹಾನಿಕಾರಕ ಎಂದು ಹೇಳಲಾಗುವುದಿಲ್ಲ, ಆದರೆ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ ಹಿತಮಿತದಲ್ಲಿ ಸೇವಿಸುವುದು ಮುಖ್ಯ. ಯಾವುದೇ ಅಸಹಜ ಲಕ್ಷಣಗಳು ಕಂಡುಬಂದರೆ ತಣ್ಣನೆಯ ನೀರನ್ನು ತಪ್ಪಿಸುವುದು ಉತ್ತಮ.
ಬೇಸಿಗೆಯಲ್ಲಿ ನೀರು ಹೆಚ್ಚು ಕುಡಿಯುವುದು ಅಗತ್ಯ ಆದರೆ ಅತಿಯಾಗಿ ತಣ್ಣಗಿನ ನೀರಿಗಿಂತ ಸಾಮಾನ್ಯ ನೀರನ್ನು ಆಯ್ಕೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.












Click it and Unblock the Notifications