ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಂಸದ ಬರ್ಗರ್ ಮೇಲೆ ಲಕ್ಷ್ಮಿ ಚಿತ್ರ ಪ್ರಕಟ

By Staff
|
Google Oneindia Kannada News

Goddess Lakshmi on burger ad outrages hindus in America
ವಾಷಿಂಗ್ಟನ್, ಜು. 9 : ಮಾಂಸಾಹಾರಿ ಬರ್ಗರ್ ತಿಂಡಿಯ ಜಾಹೀರಾತಿನಲ್ಲಿ ದೇವಿ ಲಕ್ಷ್ಮಿಯ ಚಿತ್ರವನ್ನು ಪ್ರಕಟಿಸಿದ ಬರ್ಗರ್ ಕಂಪನಿಗೆ ಈಗ ಪೀಕಲಾಟ ಶುರುವಾಗಿದೆ. ಸಮುದಾಯದ ಧಾರ್ಮಿಕ ಭಾವನೆಗಳನ್ನು ಅಪಮಾನಿಸುವ ಹಾಗೂ ಕೆರಳಿಸುವ ಈ ಜಾಹೀರಾತಿಗೆ ಅಮೆರಿಕದಾದ್ಯಂತ ಹಿಂದು ಗುಂಪುಗಳಿಂದ ಪ್ರಬಲ ವಿರೋಧ ಆರಂಭವಾಗಿದೆ. ಮಾಂಸದ ಬರ್ಗರ್ ಮೇಲೆ ಲಕ್ಷ್ಮಿ ಕುಳಿತಿರುವ ಭಂಗಿಯ ಜಾಹೀರಾತು ವಿವಾದದ ಕೇಂದ್ರವಾಗಿದೆ.

ಅಮೆರಿಕಾದ ಮುದ್ರಣ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ಈ ಅತ್ಯಂತ ಕೆಟ್ಟ ಜಾಹೀರಾತನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಅಮೆರಿಕಾದ ದಿ ಹಿಂದು ಅಮೆರಿಕನ್ ಫೌಂಡೇಶನ್ (HAF) ಆಗ್ರಹಿಸಿದೆ. ಇದೇ ಜಾಹೀರಾತು ಸ್ಪೇನ್ ಪತ್ರಿಕೆಗಳಲ್ಲೂ ಪ್ರಕಟವಾಗುವ ಸಾಧ್ಯತೆ ಇತ್ತು. ಸ್ಪೇನ್ ಭಾಷೆಯಲ್ಲಿ ಜಾಹೀರಾತು 'ಪವಿತ್ರವಾದ ತಿನಿಸು' ಎಂದು ಓದಿಸಿಕೊಳ್ಳುತ್ತದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂವೇದನೆಗಳಿಗೆ ಗೌರವ ನೀಡದ ಈ ಜಾಹೀರಾತನ್ನು ಹಿಂದಕ್ಕೆ ಪಡೆಯುವುದಲ್ಲದೆ ಹಿಂದೂಗಳ ಕ್ಷಮಾಪಣೆ ಕೇಳಬೇಕು ಎಂದು ಸಂಘಟನೆಗಳು ಬರ್ಗರ್ ಕಂಪನಿಗೆ ಖಾರವಾದ ಪತ್ರ ಬರೆದಿವೆ. ಪವಿತ್ರವಾದ ಚಿತ್ರಗಳನ್ನು, ಸಂಕೇತಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಅಪರಾಧ. ಅಲ್ಲದೆ, ಮಾಂಸದ ಪದಾರ್ಥದೊಂದಿಗೆ ಹಿಂದೂ ದೇವತೆಯನ್ನು ಜೋಡಿಸಿ ಪ್ರಕಟಿಸಿರುವುದು ಅಕ್ಷಮ್ಯ ಎಂದು ಫೌಂಡೇಶನ್ನಿನ ಕಾನೂನು ಸಲಹೆಗಾರ ಸುಹಾಗ್ ಶುಕ್ಲ ಹೇಳಿದ್ದಾರೆ.

ವಿವಾದಾತ್ಮಕ ಬರ್ಗರ್ ಮೇಲಿನ ಲಕ್ಷ್ಮಿ ಚಿತ್ರವನ್ನು ದಟ್ಸ್ ಕನ್ನಡ ಅಚ್ಚು ಮಾಡುತ್ತಿಲ್ಲ - ಸಂಪಾದಕ.

ಬರ್ಗರ್ ಕ್ಷಮೆಯಾಚನೆ : ವಾಷಿಂಗ್ಟನ್ ನಿಂದ ಬಂದಿರುವ ಇತ್ತೀಚಿನ ವರದಿಯ ಪ್ರಕಾರ ಬರ್ಗರ್ ಕಿಂಗ್ ಕಂಪನಿ ಬರ್ಗರ್ ಮೇಲೆ ಲಕ್ಷ್ಮಿ ಚಿತ್ರ ಪ್ರಕಟಿಸಿದ್ದಕ್ಕಾಗಿ ಹಿಂದೂಗಳ ಕ್ಷಮೆ ಕೋರಿದೆ. 'ಯಾರನ್ನೂ ಹೀಯಾಳಿಸುವ ಉದ್ದೇಶ ನಮಗಿರಲಿಲ್ಲ. ಆದ್ದರಿಂದ ಈ ಜಾಹೀರಾತು ಪ್ರಕಟಿಸಿದ್ದಕ್ಕೆ ವಿಷಾದ ವ್ಯಪಡಿಸುತ್ತಿದ್ದೇವೆ' ಎಂದು ಬರ್ಗರ್ ಕಿಂಗ್ ಕಂಪನಿಯ ವಕ್ತಾರ ಡೆನೀಸ್ ಟಿ ವಿಲ್ಸನ್ ಹೇಳಿದ್ದಾರೆ.

(ಒನ್ ಇಂಡಿಯಾ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X