ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009-10ರ ಕೇಂದ್ರ ಬಜೆಟ್ ಮಂಡನೆ

By Super
|
Google Oneindia Kannada News

Pranab Mukherjee
ನವದೆಹಲಿ, ಜು. 6 : ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಿರುವ ಯುಪಿಎ ಸರಕಾರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಯಲ್ಲಿ 2009-10 ನೇ ಸಾಲಿನ ಆಯವ್ಯಯ ಮಂಡಿಸಿದರು. ಮುಖ್ಯವಾಗಿ ಕೃಷಿಯಲ್ಲಿ ಶೇ 4 ರಷ್ಟು ಅಭಿವೃದ್ಧಿ ಗುರಿ. ಪ್ರತಿ ವರ್ಷ 1.20 ಕೋಟಿ ರ ಉದ್ಯೋಗ ಸೃಷ್ಟಿ. ಶೇ. 9 ರಷ್ಟು ಅಭಿವೃದ್ಧಿ ಸಾಧಿಸುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರಣಬ್ ಮುಖರ್ಜಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದರು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಜಾರಿ ( 3 ರು ಕೆಜಿ 25 ಕೆಜಿ ಆಹಾರ ಧಾನ್ಯ ತಿಂಗಳಿಗೆ). ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸ್ಕಾಲರ್ ಶಿಷ್ ಯೋಜನೆ ಈ ಬಾರಿಯ ವಿಶೇಷ.

ವಿಡಿಯೋ: ಪ್ರಣಬ್ ರಿಂದ 2009-10 ನೇ ಸಾಲಿನ ಬಜೆಟ್ ಮಂಡನೆ

2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು(ಸಮಯ 12.30 ಗಂಟೆ)

* ಜೀವರಕ್ಷಕ ಔಷಧಗಳು ಸೀಮಾಸುಂಕ ಕಡಿತ
* ಗಟ್ಟಿ ಚಿನ್ನದ ಮೇಲಿನ ಸೀಮಾಸುಂಕ ಹೆಚ್ಚಳ
* ಬೆಳ್ಳಿ ಬಂಗಾರ ಮತ್ತಷ್ಟು ತುಟ್ಟಿ
* ಎಲ್ ಸಿಡಿ , ಟಿವಿ ಸೆಟ್, ಪಾದರಕ್ಷೆಗಳು ಅಗ್ಗ
* ಸೆಟ್ ಅಪ್ ಬಾಕ್ಸ್ ಮೇಲಿನ ತೆರಿಗೆ ಶೇ. 5 ರಷ್ಟು ತೆರಿಗೆ
* ರಾಜಕೀಯ ದೇಣಿಗೆಗೆ ಶೇ. 100 ವಿನಾಯಿತಿ
* ನೌಕರರ ಮೇಲಿನ ಹೆಚ್ಚುವರಿ ತೆರಿಗೆ ರದ್ದು
* ಸಣ್ಣ ಉದ್ಯಮಗಳ ಮುಂಗಡಗಳ ತೆರಿಗೆ ರದ್ದು
* ಆದಾಯ ರಫ್ತುದಾರರ ತೆರಿಗೆ ರಜೆ 2011ರ ವಿಸ್ತರಣೆ
* ಕಮಾಡಿಟಿ ಟ್ರಾನ್ಸಾಕ್ಷನ್ ಮೇಲಿನ ತೆರಿಗೆ ಕಡಿತ
* ಜೈವಿಕ ಡಿಸೇಲ್ ಮೇಲಿನ ಸೀಮಾಸುಂಕ ಕಡಿತ
* ಸೆಲ್ ಫೋನ್ ಗಳು ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ

2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು( ಸಮಯ 12.15 ಗಂಟೆ)

* 5 ಲಕ್ಷ ವಿದ್ಯಾರ್ಥಿಗಳ ಸಾಲ ಯೋಜನೆ.
* ಮಹಿಳಾ ಸಾಕ್ಷರತೆಗೆ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ.
* 46 ಲಕ್ಷ ಬಿಪಿಎಲ್ ಮಂದಿಗೆ ಆರೋಗ್ಯ ವಿಮೆ.
* ಮಾಜಿ ಯೋಧರಿಗೆ ಪಿಂಚಣಿ ಹೆಚ್ಚಳ.
* ಅರೆಸೇನಾಪಡೆಗಳ ಯೋಧರಿಗೆ 1 ಲಕ್ಷ ಗಹಗಳ ನಿರ್ಮಾಣ.
* ಹೊಸ ಐಐಟಿ ಸ್ಥಾಪನೆಗೆ 450 ಕೋಟಿ ರುಪಾಯಿ ಅನುದಾನ.
* ಅಸಂಘಟಿಕ ವಲಯದ ಸಾಮಾಜಿಕ ಭದ್ರತೆ.
* ಮಾಜಿ ಯೋಧರ ಪಿಂಚಣಿ ಹೆಚ್ಚಳ.
* ಕಾಮನ್ ವೆಲ್ತ್ ಗೇಮ್ಸ್ ಗೆ 3470 ಕೋಟಿ ರುಪಾಯಿ.
* ಶ್ರೀಲಂಕಾ ತಮಿಳರ ನೆರವಿಗೆ 500 ಕೋಟಿ ರುಪಾಯಿ.
* ಪ್ರಧಾನಮಂತ್ರಿ ಗ್ರಾಮೀಣಾಭಿವೃದ್ದಿ ಯೋಜನೆ ಜಾರಿ.
* ನೂತನ ಐಐಟಿ. ಎಐಐಟಿ ಸ್ಥಾಪನೆಗೆ 2313 ಕೋಟಿ ರುಪಾಯಿ.
* ಪ್ರತಿಯೊಬ್ಬರಿಗೂ ವರ್ಷದೊಳಗೆ ರಾಷ್ಟ್ರೀಯ ಗುರುತಿನ ಚೀಟಿ.
* ಪೊಲೀಸ್ ಇಲಾಖೆ ಅಧುನೀಕರಣಕ್ಕೆ 480 ಕೋಟಿ ರುಪಾಯಿ.
* ರೈತರಿಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ .
* ಅಲ್ಪಸಂಖ್ಯಾತರ ಸಚಿವಾಲಯದಕ್ಕೆ 1740 ಕೋಟಿ ರುಪಾಯಿ.
* ಕಾರ್ಪೋರೆಟ್ ತೆರಿಗೆಯಲ್ಲಿ ಬದಲಾವಣೆ ಇಲ್ಲ.
* ರಕ್ಷಣಾ ವಲಯಕ್ಕೆ 1,41 ಲಕ್ಷ ಕೋಟಿ ರುಪಾಯಿ.
* ಐಲಾ ಪ್ರವಾಹದ ಪರಿಹಾರಕ್ಕೆ 1 ಕೋಟಿ .
* 45 ದಿನಗಳಲ್ಲಿ ನೂತನ ತೆರಿಗೆ ನೀತಿ ಜಾರಿ.
* ಬೆಂಗಳೂರಿನಲ್ಲಿ ಕೇಂದ್ರೀಯ ತೆರಿಗೆ ಕೇಂದ್ರ ಸ್ಥಾಪನೆ.
* ನೇರ ತೆರಿಗೆ ಸರ್ ಚಾರ್ಜ್ ರದ್ದು.
* ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳ.
* ಹಿರಿಯ ನಾಗರಿಕರ ಆದಾಯ ಮಿತಿ 2.4 ಲಕ್ಷ ರುಪಾಯ ಏರಿಕೆ.
* ಆದಾಯ ತೆರಿಗೆ ಮಿತಿ 1.6 ಲಕ್ಷ ಹೆಚ್ಚಳ.
* ಮಹಿಳೆಯರ ಆದಾಯ ಮಿತಿ 1.9 ಲಕ್ಷ ರುಪಾಯಿ ಹೆಚ್ಚಳ.
* ಯೋಜನೆಯೇತರ ಗಾತ್ರ 6. 94 ಲಕ್ಷ ಕೋಟಿ ರುಪಾಯಿ.
* ಫ್ರಿಂಜ್ ಬೆನಿಫಿಟ್ ತೆರಿಗೆ ರದ್ದು.
* ಪ್ರಥಮ ಬಾರಿಗೆ 10 ಲಕ್ಷ ಕೋಟಿ ರುಪಾಯಿ ದಾಟಿದ ಕೇಂದ್ರ ಬಜೆಟ್.

2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು( ಸಮಯ 11.30 ಗಂಟೆ)

*ರಾಜಧನ ಸಂಗ್ರಹದಲ್ಲಿ ಹೆಚ್ಚಳ
*ವಿದೇಶಿ ಬಂಡವಾಳ ಹೆಚ್ಚಳ
*ಆಂತರಿಕ ಉಳಿತಾಯದಲ್ಲಿ ಹೆಚ್ಚಳ
*ರಾಜೀವ ಗಾಂಧಿ ಅವಾಸ್ ಯೋಜನೆಯ ಅನುದಾನ ಹೆಚ್ಚಳ
*ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಶೇ. 26 ರಷ್ಟು ಅನುದಾನ
*ದೇಶಗಳ ನಗರಗಳ ಅಭಿವೃದ್ಧಿ ಶೇ. 87 ಅನುದಾನ
*ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಯೋಜನೆ
*ನಗರದ ಪ್ರದೇಶದ ಬಡವರಿಗೆ 3973 ಕೋಟಿ ರುಪಾಯಿ ಅನುದಾನ
*ನೀರಾವರಿಗೆ 1000 ಕೋಟಿ ರುಪಾಯಿ ಅನುದಾನ
*ನೈಸರ್ಗಿಕ ಅನಿಲ ದೇಶಿಯ ಉತ್ಪಾದನೆ ದ್ವಿಗುಣ
*ಕೃಷಿಗೆ 3. 25 ಲಕ್ಷ ಕೋಟಿ ರುಪಾಯಿ ವಿನಿಯೋಗ
*ಮುಂಬೈ ಪ್ರವಾಹ ಪರಿಹಾರ ನಿರ್ವಹಣಾ ಸಂಸ್ಥೆ ಸ್ಥಾಪನೆ
*ಆದಾಯ ತೆರಿಗೆ ಪಾವತಿ ಸರಳೀಕರಣ
*ಸರಕಾರಿ ಬ್ಯಾಂಕ್ ಗಳಿಗೆ ಹೆಚ್ಚಿನ ಅನುದಾನ, ಸರಕಾರಿ ವೆಚ್ಚದ ಮೇಲೆ ಕಡಿವಾಣ
*ಯುವ ಜನಾಂಗದ ನಿರೀಕ್ಷೆಯ ಬಗ್ಗೆ ವಿಶೇಷ ಕಾಳಜಿ
*ಗೃಹ ನಿರ್ಮಾಣ ಮಂಡಳಿಗೆ ನಿಧಿ
*ಶೇ. 7 ಬಡ್ಡಿದರದಲ್ಲಿ ರೈತರಿಗೆ ಸಾಲ
*ರಾಷ್ರೀಯ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಸ್ಥಾಪನೆ
*ತೈಲ ಉತ್ಪನ್ನಗಳ ಮೇಲೆ ನಿಗಾ ವಹಿಸಲು ಸಮಿತಿ
*ಇಂದಿರಾ ಅವಾಸ್ ಯೋಜನೆಗೆ 8800 ಕೋಟಿ ರುಪಾಯಿ
*ಗ್ರಾಮೀಣ ಬ್ಯಾಂಕ್ ಗಳ ಅಭಿವೃದ್ಧಿ ಕ್ರಮ
*ರೈತರ ಸಾಲ ಮನ್ನಾ
*ಪಿಎಂಆರ್ ವೈ ಶೇ, 59 ರಷ್ಟು ಹೆಚ್ಚು ಅನುದಾನ,
*ಇಂದಿರಾ ಅವಾಸ್ ಯೋಜನೆ ಶೇ, 52 ರಷ್ಚು ಹೆಚ್ಚಳ
*ರಾಜೀವ್ ಗಾಂಧಿ ವಸತಿ ಯೋಜನೆಗೆ ಅನುದಾನ ಹೆಚ್ಚಳ
*ಸಾರ್ವಜನಿಕ ಉದ್ಯಮಗಳಿಗೆ ಸರಕಾರದ ವಿಮಾ ಸೌಲಭ್ಯ ಮುಂದುವರಿಕೆ
*ಪೊಲೀಸ್ ಇಲಾಖೆಗೆ ಸುವ್ಯವಸ್ಥೆಗೆ 2280 ಕೋಟಿ ರುಪಾಯಿ
*ಪ್ಯಾರಾಮಿಲಿಟರಿ ಪೊಲೀಸರಿಗೆ ಹೆಚ್ಚಿನ ಸಹಾಯ
*100 ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿ
*ಬಿಪಿಲ್ ಕುಟುಂಬಗಳಿಗೆ 350 ಕೋಟಿ ರುಪಾಯಿ
*3 ವರ್ಷದಲ್ಲಿ ಮಹಿಳಾ ಸಾಕ್ಷರತೆ ದ್ವಿಗುಣ ಗುರಿ
*ಉದ್ಯೋಗ ವಿನಿಮಯ ಕೇಂದ್ರ ಅನುದಾನ
*ಶೈಕ್ಷಣಿಕ ಬಡ್ಡಿ ಸಾಲಕ್ಕೆ ಸಂಪೂರ್ಣ ಸಬ್ಸಿಡಿ
*ಖಾದ್ಯ ವಸ್ತುಗಳ ನೀತಿಗೆ ಬದಲಾವಣೆ
*ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಗೆ 39,100 ಕೋಟಿ ರುಪಾಯಿಗಳು
*ಗ್ರಾಮೀಣ ವಿದ್ಯುದ್ದೀಕರಣಕ್ಕೆ 7000 ಕೋಟಿ ರುಪಾಯಿ
(ದಟ್ಸ್ ಕನ್ನಡ ವಾರ್ತೆ)

English summary
Finance Minister Pranab Mukherjee has started his Budget speech in Parliament. Thanking the voters for re-electing the Congress-led United Progressive Alliance, Mukherjee said, "It is a mandate for inclusive growth and continuity. It is a mandate that we accept.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X