ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್‌ ಟಿಎಂಸಿಗೆ ಸೇರ್ಪಡೆ

|
Google Oneindia Kannada News

ಕೋಲ್ಕತ್ತಾ, ಜು.05: ಹಲವು ವಾರಗಳಿಂದ ಕೇಳಿಬರುತ್ತಿದ್ದ ಸುದ್ದಿಗಳಿಗೆ ಕೊನೆ ಹಾಡಿದ ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಕೊನೆಗೂ ಸೋಮವಾರ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದರು.

ಅಭಿಜಿತ್ ಮುಖರ್ಜಿ ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಸಂಸದರಾಗಿದ್ದು ಈಗ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನೆಡೆಯಾಗಿದೆ.

ಬಿಜೆಪಿ ತೊರೆದು ಟಿಎಂಸಿ ಸೇರಿದ ಸಾಲು ಸಾಲು ಬಿಜೆಪಿ ನಾಯಕರುಬಿಜೆಪಿ ತೊರೆದು ಟಿಎಂಸಿ ಸೇರಿದ ಸಾಲು ಸಾಲು ಬಿಜೆಪಿ ನಾಯಕರು

ಜಂಗೀಪುರದ ಮಾಜಿ ಕಾಂಗ್ರೆಸ್ ಸಂಸದರಾದ ಅಭಿಜಿತ್ ಮುಖರ್ಜಿ ಕಳೆದ ಕೆಲವು ವಾರಗಳಿಂದ ತೃಣಮೂಲ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಕಳೆದ ತಿಂಗಳು ಅಭಿಜಿತ್ ಮುಖರ್ಜಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯನ್ನು ಕೋಲ್ಕತ್ತಾದಲ್ಲಿ ಭೇಟಿ ಮಾಡಿದ್ದರು.

 Former President Pranab Mukherjees son Abhijit Mukherjee joins Trinamool Congress

ಅಭಿಜಿತ್ ಮುಖರ್ಜಿ ತಂದೆ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರು ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಾಗಿ ಎರಡು ಬಾರಿ ಗೆದಿದ್ದರು.

ತಂದೆ ಬಳಿಕ 2012 ರಲ್ಲಿ ಅಭಿಜಿತ್ ಮುಖರ್ಜಿ ಜಂಗೀಪುರ ಸಂಸದೀಯ ಕ್ಷೇತ್ರದಲ್ಲಿ ಉಪಚುನಾವಣೆಗಳನ್ನು ಗೆದ್ದರು. ಮತ್ತೆ ಆ ಕ್ಷೇತ್ರದಲ್ಲೇ 2014 ರಲ್ಲಿ ಗೆದ್ದರು. ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ.

ಮತ್ತೆ ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ಹಿಂಪಡೆದ ಕೇಂದ್ರಮತ್ತೆ ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ಹಿಂಪಡೆದ ಕೇಂದ್ರ

ಅಭಿಜಿತ್‌ ರಾಜಕೀಯವಾಗಿ ಹೆಚ್ಚಿನ ಸ್ಥಾನ ಹೊಂದಿಲ್ಲದಿದ್ದರೂ, ಟಿಎಂಸಿಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್‌ಗೆ ದೊಡ್ಡ ಮುಜುಗರ ಉಂಟು ಮಾಡಿದೆ. ಕಾಂಗ್ರೆಸ್‌ ಇತ್ತೀಚಿಗೆ ತನ್ನ ಹಲವಾರು ಕಾರ್ಯಕರ್ತರನ್ನು ಕಳೆದುಕೊಂಡಿದೆ.

 Former President Pranab Mukherjees son Abhijit Mukherjee joins Trinamool Congress

ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್‌ ಪ್ರಸಾದ್‌, ಹಿಮಂತ ಬಿಸ್ವಾ ಶರ್ಮಾ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಲು ಕಾಂಗ್ರೆಸ್ ತೊರೆದ ಪ್ರಮುಖ ನಾಯಕರು.

(ಒನ್‌ಇಂಡಿಯಾ ಸುದ್ದಿ)

English summary
In another setback for the Congress in West Bengal, late President Pranab Mukherjee’s son Abhijit Mukherjee on Monday, joined the Trinamool Congress (TMC) in Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X