Miyazaki Mango: ‘ಮರದ ಕೆಳಗೇ ಮಲಗುತ್ತೇನೆ' ₹3 ಲಕ್ಷ ಮೌಲ್ಯದ ಮಾವಿಗೆ ರೈತನ ಕಾವಲು

ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ರೈತನೊಬ್ಬ ಅಪರೂಪದ ಜಪಾನಿನ 'ಮಿಯಾಜಾಕಿ' ಮಾವಿನ ತಳಿಯನ್ನು ಯಶಸ್ವಿಯಾಗಿ ಬೆಳೆದು ಸುದ್ದಿಯಲ್ಲಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಈ ಹಣ್ಣಿನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು ₹3 ಲಕ್ಷವರೆಗೆ ಮಾರಾಟವಾಗುತ್ತದೆ ಎಂದು ವರದಿಯಾಗಿದೆ. ಆದರೆ ಇದು ರೈತರಿಗೆ ಸಂತೋಷದ ಸಂಗತಿಯಾಗಿದ್ದರೂ, ಈಗ ದೇಬಾ ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ಇಷ್ಟೊಂದು ದುಬಾರಿ ಹಣ್ಣನ್ನು ಹೇಗೆ ಮಾರಾಟ ಮಾಡಬೇಕು ಎಂಬುದೇ ಅವರಿಗೆ ತಿಳಿದಿಲ್ಲ. ಹೀಗಾಗಿ ಸದ್ಯ ಅವರು ಮಾವು ಕಳವಾಗುವ ಭಯದಿಂದ ಮರದ ಬಳಿಯೇ ರಾತ್ರಿ ನಿದ್ದೆ ಬಿಟ್ಟು ಕಾವಲು ಕಾಯುತ್ತಿದ್ದಾರೆ.

ತಮಾಸಾ ಗ್ರಾಮದ ದೇಬಾ ಪದಿಯಾಮಿ ಎಂಬ ರೈತ ಸುಮಾರು ನಾಲ್ಕು ವರ್ಷಗಳ ಹಿಂದೆ ಸಮಾಜಸೇವಕರೊಬ್ಬರಿಂದ ಈ ಮಾವಿನ ಸಸಿಯನ್ನು ಪಡೆದಿದ್ದರು. ಹಲವು ವರ್ಷಗಳ ಶ್ರಮ, ಆರೈಕೆ ಮತ್ತು ಸಹನೆಯ ನಂತರ ಇದೀಗ ಮರದಲ್ಲಿ ಹಣ್ಣುಗಳು ಕಾಣಿಸಿಕೊಳ್ಳಲು ಆರಂಭವಾಗಿದೆ.

Miyazaki Mango

ಈ ಅಪರೂಪದ ಮಾವಿನ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲೂ ಭಾರೀ ಕುತೂಹಲ ಮೂಡಿದೆ. ಹಣ್ಣಿನ ಬೆಲೆ ಲಕ್ಷಾಂತರ ರೂಪಾಯಿ ಇರುವುದರಿಂದ ಮರ ಮತ್ತು ಹಣ್ಣುಗಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ ಎಂದು ರೈತ ತಿಳಿಸಿದ್ದಾರೆ.

ಮಿಯಾಜಾಕಿ ಮಾವು ಯಾಕೆ ಇಷ್ಟು ವಿಶೇಷ?

ಭಾರತದಲ್ಲಿ ಸಾಮಾನ್ಯವಾಗಿ ಮಾವು ಅದರದೆ ಆದ ಸಿಹಿ ಮತ್ತು ರಸದ ರುಚಿಗೆ ಪ್ರಸಿದ್ಧವಾಗಿದೆ. ಆದರೆ ಜಪಾನ್‌ನ ಮಿಯಾಜಾಕಿ ಮಾವು ಸಂಪೂರ್ಣ ವಿಭಿನ್ನ ತಳಿಯಾಗಿದೆ. ಈ ಮಾವು ತನ್ನ ಗಾಢ ಕೆಂಪು ಬಣ್ಣ, ವಿಶಿಷ್ಟ ರುಚಿ ಮತ್ತು ಅಪರೂಪದ ಗುಣದಿಂದ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಸಾಮಾನ್ಯ ಹಳದಿ ಬಣ್ಣದ ಮಾವಿನ ಹಣ್ಣಿನಂತಲ್ಲ , ಮಿಯಾಜಾಕಿ ಮಾವು ಪಕ್ವವಾದಾಗ ಹೊಳೆಯುವ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ.

ಇದರ ವಿಶಿಷ್ಟ ಆಕಾರ ಮತ್ತು ಬಣ್ಣದ ಕಾರಣ ಕೆಲವರು ಇದನ್ನು ಡೈನೋಸಾರ್ ಮೊಟ್ಟೆಗೆ ಹೋಲಿಕೆ ಮಾಡುತ್ತಾರೆ. ವರ್ಷಗಳ ಕಾಲ ಜಪಾನ್‌ನಲ್ಲಿ ಈ ಮಾವು ಅತ್ಯಂತ ಪ್ರೀಮಿಯಂ ಹಣ್ಣಾಗಿ ಗುರುತಿಸಿಕೊಂಡಿದ್ದು, ಐಷಾರಾಮಿ ಹಣ್ಣಿನ ಮಾರುಕಟ್ಟೆಗಳು ಮತ್ತು ಹರಾಜುಗಳಲ್ಲಿ ಮಾರಾಟವಾಗುತ್ತದೆ. ಉತ್ತಮ ಗುಣಮಟ್ಟದ ಒಂದು ಮಿಯಾಜಾಕಿ ಮಾವಿನ ಬೆಲೆ ನೂರಾರು ಡಾಲರ್‌ಗಳವರೆಗೆ ಹೋಗುತ್ತದೆ ಎಂದು ವರದಿಗಳು ಹೇಳುತ್ತವೆ.

ಈ ಮಾವು ದುಬಾರಿ ಎಂಬ ಕಾರಣಕ್ಕಷ್ಟೇ ಪ್ರಸಿದ್ಧಿಯಾಗಿಲ್ಲ, ಅದರ ಗುಣಮಟ್ಟವೂ ಅದಕ್ಕೆ ದೊಡ್ಡ ಕಾರಣವಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಹಣ್ಣೂ 350 ಗ್ರಾಂಗಿಂತ ಹೆಚ್ಚು ತೂಕವಿರುತ್ತದೆ. ಇದರಲ್ಲಿ ಕನಿಷ್ಠ 15 ಶೇಕಡಾ ಸಕ್ಕರೆ ಅಂಶವಿದ್ದು, ಅತ್ಯಂತ ಸಿಹಿಯಾಗಿರುತ್ತದೆ.

ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಗಳಲ್ಲಿ ಒಂದನ್ನು ಬೆಳೆದಿದ್ದರೂ, ಈ ಹಣ್ಣುಗಳಿಗೆ ಎಷ್ಟು ಬೆಲೆ ಕೇಳಬೇಕು ಎಂಬುದೇ ದೇಬಾಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಮಿಯಾಜಾಕಿ ಮಾವಿನಂತಹ ಪ್ರೀಮಿಯಂ ಹಣ್ಣುಗಳು ತುಂಬಾ ನಾಜೂಕಾಗಿರುವುದರಿಂದ ವಿಶೇಷ ಪ್ಯಾಕಿಂಗ್‌ ಮತ್ತು ಸುರಕ್ಷಿತವಾದ ಸಾಗಣೆ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಹಣ್ಣುಗಳನ್ನು ಸಂಗ್ರಹಕರು, ಐಷಾರಾಮಿ ಹಣ್ಣಿನ ಮಳಿಗೆಗಳು, ರಫ್ತುದಾರರು ಹಾಗೂ ಹೈಎಂಡ್‌ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಖರೀದಿಸುತ್ತಾರೆ. ಅದಕ್ಕಾಗಿ ದೇಬಾ ಈಗ ಸರ್ಕಾರ ಮತ್ತು ಕೃಷಿ ತಜ್ಞರಿಂದ ಮಾರ್ಗದರ್ಶನ ಹಾಗೂ ಸಹಾಯ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+