• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದು ನೆಹರೂ ಬದಲು ಇಂದಿರಾಗಾಂಧಿ ಪ್ರಧಾನಿಯಾಗಿದ್ದರೆ, ನೇಪಾಳ ಭಾರತದ ಭಾಗವಾಗುತ್ತಿತ್ತು: ಪ್ರಣಬ್ ಮುಖರ್ಜಿ

|

ನವದೆಹಲಿ, ಜನವರಿ 06: ಅಂದು ನೆಹರೂ ಬದಲು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೆ ನೇಪಾಳವು ಭಾರತದ ಭಾಗವಾಗಿರುತ್ತಿತ್ತು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಅವರ ಆತ್ಮಚರಿತ್ರೆ ದಿ ಪ್ರೆಸಿಡೆನ್ಷಿಯಲ್ ಇಯರ್ಸ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.ಅದರಲ್ಲಿ ಅಂದು ಜವಾಹರ್‌ಲಾಲ್ ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನೇಪಾಳದ ರಾಜ ತ್ರಿಭುವನ್ ಬೀರ್ ಬಿಕ್ರಮ್ ಸಿಂಗ್ ಶಾಹ್ ನೇಪಾಳವನ್ನು ಭಾರತಕ್ಕೆ ಸೇರಿಸುವ ಮಾತನ್ನು ಮುಂದಿಟ್ಟಿದ್ದರು. ಆದರೆ ನೆಹರೂ ಅದನ್ನು ತಿರಸ್ಕರಿಸಿದ್ದರು. ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೇ ಖಂಡಿತವಾಗಿಯೂ ನೇಪಾಳ ಭಾರತದ ಭಾಗವಾಗಿರುತ್ತಿತ್ತು ಎಂದು ಮುಖರ್ಜಿ ಬರೆದಿದ್ದಾರೆ.

ಪ್ರಣಬ್ ಮುಖರ್ಜಿ ಆತ್ಮಚರಿತ್ರೆ ವಿವಾದ: ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಂತೆ ಮಕ್ಕಳ ಕಿತ್ತಾಟ!

ಪ್ರತಿಯೊಬ್ಬ ಪ್ರಧಾನಿಗೂ ತನ್ನದೇ ಆದ ಕಾರ್ಯಶೈಲಿ ಇರುತ್ತದೆ. ಲಾಲ್ಬಹದ್ದೂರ್ ಶಾಸ್ತ್ರಿ ನೆಹರೂ ಅವರಿಗಿಂತ ವಿಭಿನ್ನವಾಗಿದ್ದರು.

ಅವರು ತಮ್ಮ ಆತ್ಮಚರಿತ್ರೆಯಲ್ಲಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಿನ್ನಮತೀಯರ ಮಾತುಗಳನ್ನು ಖಂಡಿತವಾಗಿಯೂ ಕೇಳಬೇಕು, ಸಂಸತ್ತಿನಲ್ಲಿ ಹೆಚ್ಚೆಚ್ಚು ಮಾತನಾಡಬೇಕು, ವಿರೋಧ ಪಕ್ಷದವರಿಗೆ ಮನದಟ್ಟು ಮಾಡಲು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಲು ಸಂಸತ್ತಿನ ವೇದಿಕೆಯನ್ನು ಅವರು ಸರಿಯಾಗಿ ಬಳಸಿಕೊಂಡು ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದಿದ್ದಾರೆ.

ಪ್ರಧಾನ ಮಂತ್ರಿಯವರು ಈಗ ತಮ್ಮ ಎರಡನೇ ಅವಧಿಯಲ್ಲಿ ತಮ್ಮ ಹಿಂದಿನ ಪ್ರಧಾನ ಮಂತ್ರಿಗಳ ಕಾರ್ಯವೈಖರಿಯಿಂದ ಸ್ಪೂರ್ತಿ ಪಡೆದುಕೊಂಡು ಪ್ರಬಲ ನಾಯಕತ್ವ ನೀಡಿ, ತಮ್ಮ ಇರುವಿಕೆಯನ್ನು ಸಂಸತ್ತಿನಲ್ಲಿ ತೋರಿಸಿಕೊಡುವ ಮೂಲಕ ಮೊದಲ ಅವಧಿಯಲ್ಲಿ ಆದಂತೆ ಸಂಸತ್ತಿನ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಬರೆದಿದ್ದಾರೆ.

ಪ್ರಧಾನಿ ಭೌತಿಕವಾಗಿ ಸಂಸತ್ತಿನಲ್ಲಿ ಹಾಜರಿದ್ದರೂ ಅದರಿಂದ ಸಾಕಷ್ಟು ಬದಲಾವಣೆಯನ್ನು ತರಬಹುದು, ಅದು ಜವಹರಲಾಲ್ ಆಗಿರಲಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅಥವಾ ಡಾ ಮನಮೋಹನ್ ಸಿಂಗ್ ಅವರಾಗಿರಲಿ ಪ್ರತಿಯೊಬ್ಬರೂ ಮಾಜಿ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ತಮ್ಮ ಇರುವಿಕೆಯ ಅಗತ್ಯವನ್ನು ತೋರಿಸಿಕೊಟ್ಟಿದ್ದಾರೆ.

English summary
Former Prime Minister Jawaharlal Nehru rejected Nepal’s king Tribhuvan Bir Bikram Shah's offer that the Himalayan nation be made a province of India, late President Pranab Mukherjee says in his much-talked-about autobiography, 'The Presidential Years'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X