ಮಿಸಸ್ ಕೇರಳ ಬ್ಯೂಟಿಯ ಬ್ಯಾಗ್‌ನಲ್ಲಿ ಸಿಕ್ಕ ಆ ವಸ್ತುವಿನ ಬೆಲೆ ಕೇಳಿದ್ರೆ ನಿಮ್ಮ ತಲೆತಿರುಗುತ್ತೆ
ಗ್ಲಾಮರ್ ದುನಿಯಾದಲ್ಲಿ ಮಿಂಚುತ್ತಿದ್ದ ಆ ಸುಂದರಿ ಬ್ಯಾಂಕಾಕ್‌ನಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಎಲ್ಲರ ಕಣ್ಣು ಆಕೆಯ ಮೇಲೆಯೇ ಇತ್ತು. ಆದರೆ ನೋಡನೋಡುತ್ತಿದ್ದಂತೆ ಅಲ್ಲಿ ನಡೆದಿದ್ದೇ ಬೇರೆ. ಬ್ಯಾಂಕಾಕ್‌ನಿಂದ ಈಕೆ ಖಾಲಿ ಕೈಯಲ್ಲಿ ಬಂದಿರಲಿಲ್ಲ. ಬದಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಹೈಕ್ವಾಲಿಟಿ ಮಾದಕ ವಸ್ತುವನ್ನು ಭಾರತಕ್ಕೆ ಸಾಗಿಸುತ್ತಿದ್ದಳು ಎಂಬ ವಿಚಾರವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 28 ವರ್ಷದ ಪ್ರಸಿದ್ಧ ಮಾಡೆಲ್ ಹಾಗೂ ಮಾಜಿ ಸೌಂದರ್ಯ ಸ್ಪರ್ಧಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಬಂಧಿತ ಮಹಿಳೆಯನ್ನು ಮಾಡೆಲ್ ಹರ್ಷ ಸನ್ನಿ ಎಂದು ಗುರುತಿಸಲಾಗಿದೆ. ಈಕೆ 2025ರ 'ಮಿಸಸ್ ಕೇರಳ' ಸೌಂದರ್ಯ ಸ್ಪರ್ಧೆಯ ಸ್ಪರ್ಧಿಯಾಗಿದ್ದರು ಎಂದು ತಿಳಿದುಬಂದಿದೆ.
ಸಿಕ್ಕಿಬಿದ್ದಿದ್ದು ಹೇಗೆ?
ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹರ್ಷ ಸನ್ನಿ ಜೂನ್ 10 ಮತ್ತು 11ರ ಮಧ್ಯರಾತ್ರಿ ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನ (TG-351) ಮುಖಾಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮತ್ತು ಕಣ್ಗಾವಲು ನಡೆಸುತ್ತಿದ್ದ ಸಂದರ್ಭದಲ್ಲಿ ಈಕೆಯ ನಡವಳಿಕೆ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿಸಿದೆ. ಕೂಡಲೇ ಅಲರ್ಟ್ ಆದ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಮತ್ತು ಕಸ್ಟಮ್ಸ್ ಇಲಾಖೆಯ ಜಂಟಿ ಅಧಿಕಾರಿಗಳ ತಂಡ ಆಕೆಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದೆ.

ಬ್ಯಾಗ್‌ನಲ್ಲಿತ್ತು 12 ವ್ಯಾಕ್ಯೂಮ್ ಪ್ಯಾಕೆಟ್‌ಗಳು
ಅಧಿಕಾರಿಗಳು ಆಕೆಯ ಟ್ರಾಲಿ ಬ್ಯಾಗ್ ಅನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ, ಅದರೊಳಗೆ ಅತ್ಯಂತ ಜಾಗರೂಕತೆಯಿಂದ ಬಚ್ಚಿಡಲಾಗಿದ್ದ 12 ವ್ಯಾಕ್ಯೂಮ್-ಸೀಲ್ಡ್ ಪ್ಲಾಸ್ಟಿಕ್ ಕವರ್‌ಗಳು ಪತ್ತೆಯಾಗಿವೆ. ಆ ಕವರ್‌ಗಳನ್ನು ಬಿಚ್ಚಿ ನೋಡಿದಾಗ ಹಸಿರು ಬಣ್ಣದ ಪದಾರ್ಥ ಕಂಡುಬಂದಿದೆ. ತಕ್ಷಣವೇ ಸ್ಥಳದಲ್ಲೇ ಎನ್‌ಡಿಪಿಎಸ್ ಕಿಟ್ ಬಳಸಿ ರಾಸಾಯನಿಕ ಪರೀಕ್ಷೆ ನಡೆಸಿದಾಗ, ಅದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೊಂದಿರುವ ಉನ್ನತ ಗುಣಮಟ್ಟದ 'ಹೈಡ್ರೋಪೋನಿಕ್ ಮರಿಜುವಾನಾ' (ಗಾಂಜಾ) ಎಂಬುದು ದೃಢಪಟ್ಟಿದೆ.
11.82 ಕೋಟಿ ಮೌಲ್ಯದ ಗಾಂಜಾ
ಆಕೆಯ ಬ್ಯಾಗ್‌ನಿಂದ ವಶಪಡಿಸಿಕೊಳ್ಳಲಾದ ಒಟ್ಟು 11 ಕೆ.ಜಿಗೂ ಅಧಿಕ ತೂಕದ ಈ ಹೈಡ್ರೋಪೋನಿಕ್ ಗಾಂಜಾದ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 11.82 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ನಿಷೇಧಿತ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಸಾಗಣೆ (ಸ್ಮಗ್ಲಿಂಗ್) ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಇಲಾಖೆಯು ಹರ್ಷ ಸನ್ನಿ ಅವರನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮುಂಬೈನ ಫೋರ್ಟ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಷ್ಟು ದೊಡ್ಡ ಪ್ರಮಾಣದ ಕೋಟ್ಯಂತರ ಮೌಲ್ಯದ ಡ್ರಗ್ಸ್ ಅನ್ನು ಮುಂಬೈ ಅಥವಾ ದೇಶದ ಬೇರೆ ಯಾವ ಭಾಗಕ್ಕೆ ತಲುಪಿಸಲು ಸ್ಕೆಚ್ ಹಾಕಲಾಗಿತ್ತು? ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಡ್ರಗ್ ಜಾಲ ಯಾವುದು? ಎಂಬ ಬಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ.
ಬಂಧಿತ ಮಾಡೆಲ್ ಹರ್ಷ ಸನ್ನಿ ಅವರನ್ನು ಮುಂಬೈನ ಫೋರ್ಟ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಸದ್ಯ ಆರೋಪಿಯನ್ನು ಜೈಲಿಗಟ್ಟಿರುವ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಬ್ಯಾಂಕಾಕ್‌ನಿಂದ ತರಲಾಗಿದ್ದ ಈ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಮುಂಬೈ ನಗರದ ಯಾವ ಡ್ರಗ್ ಮಾಫಿಯಾ ಕೈಗೆ ತಲುಪಿಸಬೇಕಿತ್ತು? ಅಥವಾ ದೇಶದ ಬೇರೆ ಯಾವ ಮೆಟ್ರೋ ಸಿಟಿಗಳಿಗೆ ಇದನ್ನು ಸಾಗಿಸಲು ಸ್ಕೆಚ್ ಹಾಕಲಾಗಿತ್ತು? ಎಂಬ ನಿಟ್ಟಿನಲ್ಲಿ ಕಸ್ಟಮ್ಸ್ ಮತ್ತು ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ಜಂಟಿಯಾಗಿ ಜಾಲ ಬೀಸಿವೆ. ಈ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ದಂಧೆಯ ಹಿಂದಿರುವ ಅಸಲಿ ಕಿಂಗ್‌ಪಿನ್ ಯಾರು ಎಂಬುದು ಇಷ್ಟರಲ್ಲೇ ಬಯಲಾಗಬೇಕಿದೆ.













Click it and Unblock the Notifications