ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಬ್ ಮುಖರ್ಜಿ ಆತ್ಮಚರಿತ್ರೆ ವಿವಾದ: ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಂತೆ ಮಕ್ಕಳ ಕಿತ್ತಾಟ!

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಂತೆ ಭಾರತದ 13ನೇ ರಾಷ್ಟ್ರಪತಿ, ಬಹುಮುಖ ಪ್ರತಿಭೆ ದಿವಂಗತ ಪ್ರಣಬ್ ಮುಖರ್ಜಿಯವರ ಆತ್ಮಚರಿತ್ರೆ 'ದಿ ಪ್ರೆಸಿಡೆನ್ಶಿಯಲ್ ಇಯರ್ಸ್' ವಿವಾದಕ್ಕೆ ಸಿಲುಕಿದೆ.

ಈಗಾಗಲೇ ಆತ್ಮಚರಿತ್ರೆಯು ಜನವರಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ರೂಪಾ ಪಬ್ಲಿಕೇಷನ್ ಪ್ರಕಟಿಸಿದೆ. ಆದರೆ ಪ್ರಣಬ್ ಮುಖರ್ಜಿಯವರ ಮಗ ಅಭಿಜಿತ್ ಮುಖರ್ಜಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಬ್ಲಿಶರ್ಸ್ ಕೆಲವು 'ಪ್ರೇರಿತ ಆಯ್ದ ಭಾಗಗಳನ್ನು'' ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಟ್ವೀಟ್ ಮಾಡಿರುವ ಅಭಿಜಿತ್ ಮುಖರ್ಜಿ ಅಂತಿಮ ಕೃತಿ ಪ್ರಕಟಗೊಳ್ಳುವ ಮೊದಲು ಅದನ್ನು ಪಡೆಯಲು ಬಯಸುತ್ತೇನೆ ಎಂದಿದ್ದಾರೆ. ಆದರೆ ಮತ್ತೊಂದರೆ ಅಭಿಜಿತ್ ಅವರ ಸಹೋದರಿ ಶರ್ಮಿಷ್ಠ ಮುಖರ್ಜಿರವರು ಆತ್ಮಚರಿತ್ರೆ ಪಬ್ಲಿಶರ್ಸ್ ಪರ ನಿಂತಿದ್ದು, ಅಭಿಜಿತ್‌ ಹೇಳಿಕೆಯನ್ನು ವಿರೋಧಿಸಿದ್ದಾರೆ.

Pranab Mukherjees Children Spar Over Publishing His Memoir

ಒಡಹುಟ್ಟಿದ ಇಬ್ಬರೂ ಕೂಡ ತಮ್ಮ ತಂದೆಯ ಆತ್ಮಚರಿತ್ರೆಯನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಂಗಳವಾರ, ಪುಸ್ತಕದ ಕೆಲವು ಪ್ರೇರಿತ ಆಯ್ದ ಭಾಗಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ ಎಂದು ಆರೋಪಿಸಿದ ಅಭಿಜಿತ್ ಮುಖರ್ಜಿ ಅವರು ಹೀಗೆ ಟ್ವೀಟ್ ಮಾಡಿದ್ದರು.

"ನನ್ನ ತಂದೆ ಇನ್ನಿಲ್ಲದ ಕಾರಣ, ನಾನು ಅವರ ಮಗನಾಗಿರುವುದರಿಂದ ಪುಸ್ತಕ ಪ್ರಕಟಣೆಗೂ ಮೊದಲು ಅಂತಿಮ ನಕಲಿನ ಕೃತಿ ಪಡೆಯಲು ಬಯಸುತ್ತೇನೆ . ನನ್ನ ತಂದೆ ಇಂದು ಜೀವಂತವಾಗಿದ್ದರೆ, ಅವರೂ ಸಹ ಅದೇ ರೀತಿ ಮಾಡುತ್ತಿದ್ದರು '' ಎಂದು ಅಭಿಜಿತ್ ಟ್ವೀಟ್ ಮಾಡಿದ್ದಾರೆ.

ಇನ್ನು ಮತ್ತೊಂದು ಟ್ವೀಟ್‌ನಲ್ಲಿ ರೂಪಾ ಪಬ್ಲಿಕೇಶನ್‌ ಟ್ಯಾಗ್ ಮಾಡಿರುವ ಅಭಿಜಿತ್ '' ನಾನು, ದಿ ಪ್ರೆಸಿಡೆನ್ಶಿಯಲ್ ಇಯರ್ಸ್" ಆತ್ಮಚರಿತ್ರೆಯ ಲೇಖಕರ ಪುತ್ರ, ಆತ್ಮಚರಿತ್ರೆಯ ಪ್ರಕಟಣೆಯನ್ನು ನಿಲ್ಲಿಸುವಂತೆ ವಿನಂತಿಸುತ್ತೇನೆ ಮತ್ತು ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ಪ್ರೇರಿತ ಆಯ್ದ ಭಾಗಗಳು ನಮ್ಮ ಒಪ್ಪಿಗೆ ಇಲ್ಲದೆ ವರದಿಯಾಗಿವೆ'' ಎಂದು ಹೇಳಿದ್ದಾರೆ

ಮೂರನೆಯ ಟ್ವೀಟ್‌ನಲ್ಲಿ, ಅಭಿಜಿತ್ ಮುಖರ್ಜಿ ತನ್ನ ಲಿಖಿತ ಒಪ್ಪಿಗೆಯಿಲ್ಲದೆ ಪುಸ್ತಕದ ಪ್ರಕಟಣೆಯನ್ನು ತಕ್ಷಣವೆ ನಿಲ್ಲಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಮತ್ತು ಈ ಕುರಿತಾಗಿ ತಾನು ನಿಮಗೆ ವಿವರವಾದ ಪತ್ರವನ್ನು ಕಳುಹಿಸಿದ್ದೇನೆ, ಶೀಘ್ರವೇ ಅದು ನಿಮಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಈ ಸರಣಿ ಟ್ವೀಟ್‌ಗಳ ನಂತರ, ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಕೂಡ ಟ್ವೀಟ್ ಮಾಡಿದ್ದಾರೆ. ಪುಸ್ತಕದ ಪ್ರಕಟಣೆಯಲ್ಲಿ "ಅನಗತ್ಯ ಅಡೆತಡೆಗಳನ್ನು" ಸೃಷ್ಟಿಸದಿರಲು ತನ್ನ ಸಹೋದರ (ಅಭಿಜಿತ್) ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

"ದಿ ಪ್ರೆಸಿಡೆನ್ಶಿಯಲ್ ಇಯರ್ಸ್ ಎಂಬ ಆತ್ಮಚರಿತ್ರೆಯ ಲೇಖಕರ ಪುತ್ರಿ ನಾನು, ನಮ್ಮ ತಂದೆ ಬರೆದ ಕೊನೆಯ ಪುಸ್ತಕದ ಪ್ರಕಟಣೆಯಲ್ಲಿ ಯಾವುದೇ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸದಂತೆ ನನ್ನ ಸಹೋದರ ಅಭಿಜಿತ್ ಮುಖರ್ಜಿ ಅವರನ್ನು ವಿನಂತಿಸುತ್ತೇನೆ. ಅವರು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಹಸ್ತಪ್ರತಿಯನ್ನು ಪೂರ್ಣಗೊಳಿಸಿದ್ದಾರೆ "ಎಂದು ಅವರು ಬರೆದಿದ್ದಾರೆ .

ಆತ್ಮಚರಿತ್ರೆಯ ಕುರಿತು ಮಾತನಾಡಿದ ಅವರು, ಅಂತಿಮ ಡ್ರಾಫ್ಟ್‌ನಲ್ಲಿ ತನ್ನ ತಂದೆಯ ಕೈಬರಹದ ಟಿಪ್ಪಣಿಗಳು ಮತ್ತು ಕಾಮೆಂಟ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರದೇ ಆದವು ಮತ್ತು ಯಾವುದೇ ಅಗ್ಗದ ಪ್ರಚಾರಕ್ಕಾಗಿ ಅದನ್ನು ಪ್ರಕಟಿಸುವುದನ್ನು ತಡೆಯಲು ಯಾರೂ ಪ್ರಯತ್ನಿಸಬಾರದು. ಅದು ನಮ್ಮ ಅಗಲಿದ ತಂದೆಗೆ ದೊಡ್ಡ ಅಪಚಾರವಾಗಿದೆ ಎಂದು ಹೇಳಿದ್ದಾರೆ.

English summary
Former President Pranab Mukherjee's son Abhijit Mukherjee has asked the publisher to immediately stop publication of the memoir, while his daughter Sharmishta Mukherjee opposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X