CarryMen: ಶಾಪಿಂಗ್‌ಗೆ ಬಾಯ್‌ಫ್ರೆಂಡ್ ಸಿಗಲಿಲ್ವಾ, ಈಗ ಇನ್ಮುಂದೆ ‘ಕ್ಯಾರಿಮೆನ್’ ಸಿಗ್ತಾರೆ, ಏನಿದು ಸೇವೆ - ವೈರಲ್ ವಿಡಿಯೋ

CarryMen: ನೀವೆಲ್ಲಾದರೂ ಶಾಪಿಂಗ್‌ಗೆ ಹೋಗಬೇಕಾ, ಒಬ್ಬರೇ ಹೋಗೋದು ಕಷ್ಟ ಆಗ್ತಿದ್ಯಾ ಯಾರಾದರೂ ಜೊತೆಗಿದ್ದರೆ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಸುಲಭವಾಗುತ್ತಿತ್ತು. ಯಾರಾದರೂ ಜೊತೆಗಿದ್ದರೆ ಲೊಕೇಶನ್ ನೋಡುವುದಕ್ಕೆ ಅನುಕೂಲವಾಗುತ್ತಿತ್ತು ಎಂದು ಹಲವು ಬಾರಿ ಅನಿಸುವುದು ಇದೆ. ಆದರೆ ಇನ್ಮುಂದೆ ನೀವು ಯಾರೂ ಇಲ್ವಾಲ್ಲ ಅಂತ ಅಂದುಕೊಳ್ಳುವುದು ಬೇಡ. ಇನ್ಮುಂದೆ ನೀವು ಎಲ್ಲಿಯಾದರೂ ಶಾಪಿಂಗ್‌ಗೆ ಹೋಗಬೇಕು ಅಂತ ಅಂದುಕೊಂಡರೂ ನಿಮಗೆ ಸಹಾಯ ಮಾಡುವುದಕ್ಕೆ ಜನ ಸಿಗುತ್ತಾರೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ದೆಹಲಿ ಮೂಲದ ಸ್ಟಾರ್ಟ್‌ಅಪ್‌ವೊಂದು ಹೊಸ ಶಾಪಿಂಗ್ ಸಹಾಯ ಸೇವೆಯನ್ನು ಪರಿಚಯಿಸಿದೆ. ಜನಸಂದಣಿ ಇರುವ ಸ್ಥಳೀಯ ಮಾರುಕಟ್ಟೆಗಳಲ್ಲಿ ವಸ್ತುಗಳ ಖರೀದಿಗೆ ಹೋಗುವ ವೇಳೆ ಎದುರಾಗುವ ದೈಹಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದೆ. ಗ್ರಾಹಕರು ಖರೀದಿಸಿದ ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗುವುದು ಹಾಗೂ ಜನನಿಬಿಡ ವ್ಯಾಪಾರ ಪ್ರದೇಶಗಳಲ್ಲಿ ಸುಲಭವಾಗಿ ನಡೆದುಕೊಂಡು ಹೋಗುವುದಕ್ಕೆ ಸಹಾಯ ಮಾಡುವ ವ್ಯವಸ್ಥೆಯನ್ನು ಈ ಸೇವೆ ಒಳಗೊಂಡಿದೆ.

CarryMen

ಕ್ಯಾರಿಮೆನ್ ಎಂದು ಕರೆಯಲ್ಪಡುವ ಈ ಸೇವೆಯು ಸರಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಹೊಸ ಸೇವೆಯಲ್ಲಿ ತರಬೇತಿ ಪಡೆದ ಸಹಾಯಕರು ಮಾರುಕಟ್ಟೆಗಳಲ್ಲಿ ನಿಮ್ಮೊಂದಿಗೆ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಬರುತ್ತಾರೆ. ಖರೀದಿ ಮಾಡಿದ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಸಹಾಯ ಮಾಡುತ್ತಾರೆ. ಸರತಿ ಸಾಲುಗಳಲ್ಲಿ ನಿಂತುಕೊಂಡು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮತ್ತು ಶಾಪಿಂಗ್ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

ದೆಹಲಿಯ ಲಜಪತ್ ನಗರ, ಸರೋಜಿನಿ ನಗರ ಮತ್ತು ಚಾಂದನಿ ಚೌಕ್‌ನಂತಹ ಜನನಿಬಿಡ ಮಾರುಕಟ್ಟೆಗಳಿಗೆ ಭೇಟಿ ನೀಡುವ ಈ ಸಂಸ್ಥೆಯ ಸಂಸ್ಥಾಪಕರ ವೈಯಕ್ತಿಕ ಅನುಭವಗಳಿಂದ ಈ ಸ್ಟಾರ್ಟ್‌ಅಪ್ ಕಲ್ಪನೆ ಹುಟ್ಟಿಕೊಂಡಿದೆ. ಅಲ್ಲಿ ಶಾಪಿಂಗ್ ಮಾಡುವಾಗ ಹೆಚ್ಚು ಸಮಯ ನಡೆಯಬೇಕು. ಭಾರವಾದ ಚೀಲಗಳು ಮತ್ತು ಜನದಟ್ಟಣೆಯಿಂದ ಕೂಡಿದ ಪ್ರದೇಶವಿರುತ್ತದೆ.

ದೆಹಲಿಯಲ್ಲಿ ಬೆಳೆದ ಸಂಸ್ಥಾಪಕರು, ಶಾಪಿಂಗ್ ಜನಪ್ರಿಯ ಚಟುವಟಿಕೆಯಾಗಿ ಉಳಿದಿದ್ದರೂ, ಶಾಪಿಂಗ್‌ನಲ್ಲಿರುವ ದೈಹಿಕ ಪರಿಶ್ರಮದ ಅನುಭವದ ಬಗ್ಗೆ ತಿಳಿದುಕೊಂಡಿದ್ದರು. ಇಂಡಿಯಾ ಟುಡೇ ವರದಿಯ ಪ್ರಕಾರ, ಜನರು ಶಾಪಿಂಗ್ ಮಾಡುವುದನ್ನು ಆನಂದಿಸುತ್ತಿದ್ದರೂ, ಜನದಟ್ಟಣೆಯ ಸ್ಥಳಗಳಲ್ಲಿ ನಡೆದಾಡುವಾಗ ಮತ್ತು ಏಕಕಾಲದಲ್ಲಿ ಹಲವು ಚೀಲಗಳನ್ನು ಹೊತ್ತುಕೊಂಡು ಹೋಗುವ ದೈಹಿಕ ಒತ್ತಡವನ್ನು ಅವರು ಇಷ್ಟಪಡುವುದಿಲ್ಲ ಎಂದು ಸ್ಟಾರ್ಟ್‌ ಅಪ್ ಪ್ರಾರಂಭಿಸಿದವರು ಹೇಳಿದ್ದಾರೆ.

CarryMen: ಕ್ಯಾರಿಮೆನ್ ಸೇವೆಗೆ ಗಂಟೆಗೆ 149 ರೂ. ಶುಲ್ಕ

ಕ್ಯಾರಿಮೆನ್ ಗಂಟೆಗೆ 149 ರೂ. ಶುಲ್ಕ ವಿಧಿಸುತ್ತದೆ. ಗ್ರಾಹಕರು ಎರಡು, ಮೂರು ಅಥವಾ ನಾಲ್ಕು ಗಂಟೆಗಳ ಪ್ಯಾಕೇಜ್‌ಗಳ ನಡುವೆ ಆಯ್ಕೆ ಮಾಡಬಹುದು. ನಿಯೋಜಿತ ಸಹಾಯಕರು ನಿಮ್ಮ ಶಾಪಿಂಗ್‌ ಸಮಯದಲ್ಲಿ ನಿಮ್ಮೊಂದಿಗೆ ಇರುತ್ತಾರೆ.

ಬ್ಯಾಗ್‌ಗಳನ್ನು ಒಯ್ಯುತ್ತಾರೆ, ಅಂಗಡಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತಾರೆ, ಆಹಾರಕ್ಕೆ ಸರತಿ ಸಾಲಿನಲ್ಲಿ ಕಾಯುತ್ತಾರೆ, ಪಾರ್ಕಿಂಗ್ ಪ್ರದೇಶಗಳು ಅಥವಾ ಮೆಟ್ರೋ ಗೇಟ್‌ಗಳವರೆಗೆ ಸಹಾಯ ಮಾಡುತ್ತಾರೆ ಮತ್ತು ಗ್ರಾಹಕರು ಕುಳಿತು ವಿಶ್ರಾಂತಿ ಪಡೆಯುವ ಸ್ಥಳಗಳನ್ನು ಗುರುತಿಸುತ್ತಾರೆ. ಇದು ಸದ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದ್ದು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+