Bengaluru: ಬೆಂಗಳೂರಿನ ಬೃಹತ್ ಯೋಜನೆಯಿಂದ ತಮಿಳುನಾಡಿಗೆ ಲಾಭ: ಡಿ.ಕೆ ಶಿವಕುಮಾರ್ ನಿರ್ಧಾರಕ್ಕೆ ಕನ್ನಡಿಗರ ಆಕ್ರೋಶ

Bengaluru: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಪ್ರಮುಖ ನಿರ್ಧಾರಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಹೊಸ ನಿರ್ಧಾರದಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಲಾಭವಾಗುವುದಕ್ಕಿಂತಲೂ ಇದರಿಂದ ತಮಿಳುನಾಡಿಗೇ ಹೆಚ್ಚು ಲಾಭ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ದೇಶದ 2ನೇ ಅತಿದೊಡ್ಡ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ.

ನಮ್ಮ ಬೆಂಗಳೂರಿನ ಆನೇಕಲ್‌ನಲ್ಲಿ 943.46 ಕೋಟಿ ರೂ. ವೆಚ್ಚದಲ್ಲಿ 80,000 ಆಸನಗಳ ಸಾಮರ್ಥ್ಯದ ದೇಶದ 2ನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಈ ಭವ್ಯ ಯೋಜನೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ನಾಡಿನ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಡಿ.ಕೆ ಶಿವಕುಮಾರ್ ಅವರು ಬರೆದುಕೊಂಡಿದ್ದಾರೆ. ಆದರೆ ಇದಕ್ಕೆ ಇದೀಗ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Bengaluru

ಈ ಯೋಜನೆಯಿಂದ ತಮಿಳುನಾಡಿಗೆ ಲಾಭ

ಇನ್ನು ಕರ್ನಾಟಕದ ಈ ಯೋಜನೆಯಿಂದ ಕರ್ನಾಟಕಕ್ಕಿಂತಲೂ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ ಎಂದು ಹಲವು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕಕ್ಕೆ ಉಪಯೋಗವಿಲ್ಲ ತಮಿಳುನಾಡಿಗೆ ಮಾತ್ರ ಉಪಯೋಗ ನಾವು ಮಾಡಿರುವ ಯೋಜನೆ ಎಂದು ಯತೀಶ್ ಎನ್ನುವವರು ಹೇಳಿದ್ದಾರೆ. ಮಲ್ಲೇಶ್ ಎನ್ನುವವರು ಅತೀ ದೊಡ್ಡ ಶಾಲೆ ಅತಿದೊಡ್ಡ ಆಸ್ಪತ್ರೆ, ಈ ಎರಡೇ ಬೇಕಾಗಿರೋದು ಎಂದಿದ್ದಾರೆ.

ಮಹದೇಶ್‌ ಎನ್ನುವವರು ಮೊದಲು ಬಡ ಜನರಿಗೆ ಉಚಿತ ಆರೋಗ್ಯ ಆಸ್ಪತ್ರೆಗಳನ್ನು ಕೊಡಿ ಬಡ ಜನರಿಗೆ ಬಡ ಮಕ್ಕಳಿಗೆ ಉಚಿತ ಒಳ್ಳೆಯ ಶಿಕ್ಷಣವನ್ನು ಕೊಡಿ ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಅವಕಾಶ ಇದೆ ನಂ 1 ಮಾಡಿ, ಆದರೆ ಈ ಜಾಗದಲ್ಲಿ ಕೈಗಾರಿಕೆ ಇದೆ. ಅನ್ಯ ರಾಜ್ಯದ ಗಡಿಪ್ರದೇಶ ಇದೆ. ಅಲ್ಲದೆ ಸಂಚಾರ ಒತ್ತಡವೂ ಇದೆ. ದಯವಿಟ್ಟು ನೆಲಮಂಗಲ - ತುಮಕೂರು ಮಧ್ಯೆ ಎಲ್ಲಾದರು ಮಾಡಿ ನಮ್ಮ ರಾಜ್ಯದ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ರವಿ ಸಿಕೆ ಎನ್ನುವವರು ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಕೇಂದ್ರೀಕೃತವಾಗಬಾರದು. ದೊಡ್ಡ ಯೋಜನೆಗಳು ಬೆಳವಣಿಗೆಯನ್ನು ತರುತ್ತವೆ, ಆದರೆ ನಾವು ದೀರ್ಘಾವಧಿಯ ಬಗ್ಗೆ ಯೋಚಿಸಬೇಕು ಮತ್ತು ಮೈಸೂರು, ತುಮಕೂರು, ಹುಬ್ಬಳ್ಳಿ ಮತ್ತು ಇತರ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಬೇಕು. ಬೆಂಗಳೂರು ಈಗಾಗಲೇ ಸಂಚಾರ, ನೀರು, ಮೂಲಸೌಕರ್ಯ ಮತ್ತು ಜನದಟ್ಟಣೆಯ ಸವಾಲುಗಳನ್ನು ಎದುರಿಸುತ್ತಿದೆ.

ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯು ಉದ್ಯೋಗಗಳನ್ನು ಸೃಷ್ಟಿಸಬಹುದು, ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಮತ್ತು ಒಂದು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಇಂದಿನ ಯೋಜನೆಯು ಕೇವಲ ಒಂದು ನಗರವಲ್ಲ, ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಮುಂದಿನ ಪೀಳಿಗೆಯನ್ನು ಬೆಂಬಲಿಸಬೇಕು. ಸರ್ಕಾರವು ಹೆಚ್ಚು ವಿಸ್ತೃತ ಬೆಳವಣಿಗೆಯ ಮಾದರಿಯನ್ನು ಪರಿಗಣಿಸುತ್ತದೆ ಎಂದು ಭಾವಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+