ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ

By Staff
|
Google Oneindia Kannada News

Thackeray lauds Muslim body for expelling Kasab lawyer
ಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ.

ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ ಕೃತ್ಯ ಎಸಗಿದ್ದಲ್ಲದೆ, 180ಕ್ಕೂ ಅಧಿಕ ಅಮಾಯಕರ ಸಾವಿಗೆ ಕಾರಣವಾಗಿ, ದೇಶದ ಆರ್ಥಕತೆ ಮೇಲೆ ಭಾರಿ ಪರಿಣಾಮ ಬೀರಿರುವ ಉಗ್ರನ ಪರವಾಗಿ ವಕಾಲತ್ತು ನಡೆಸುವುದು ಅತ್ಯಂತ ಹೇಯ ಕೃತ್ಯ. ಇಂಥ ವ್ಯಕ್ತಿಗಳನ್ನು ಸಮಾಜದಿಂದ ದೂರ ಇಡುವುದು ಒಳಿತು. ಜಾತಿ ಬೇಧ ಎಣಿಸದೆ ಇಸ್ಲಾಂ ಜಮಖಾನಾ ಕಜ್ಮಿಯನ್ನು ಮಂಡಳಿಯಿಂದ ಹೊರಹಾಕಿರುವುದು ಒಳ್ಳೆಯ ಬೆಳವಣಿಗೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯ ವಿರುದ್ಧ ಮುಸ್ಲಿಮರು ಸಿಡಿದೇಳಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾದ್ಯ ಎಂದು ಬಾಳಾ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಇಸ್ಲಾಂ ಜಮಖಾನಾ ತಳೆದಿರುವ ನಿಲುವು ದೇಶಕ್ಕೆ ಮಾದರಿಯಾಗುವಂಥದ್ದು, ಇದರಿಂದ ಭಯೋತ್ಪಾದನೆಯನ್ನು ತಡೆಯಬಹುದು. ಅಲ್ಲದೇ ಹಿಂದೂ-ಮುಸ್ಲಿಂ ನಡುವೆ ಇರುವ ಕಂದಕವನ್ನು ಹೋಗಲಾಡಿಸಬಹುದು ಎಂದು ಠಾಕ್ರೆ ವಿವರಿಸಿದ್ದಾರೆ. ಕಸಬ್ ನಿಗೆ ಜೈಲಿನಲ್ಲಿ ತಿರುಗಾಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್ ಪಕ್ಷದ ಧೋರಣೆಯಿಂದ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದು ಅವರು ಆರೋಪಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X