ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ಮತದಾನಕ್ಕೆ ಕೊಂಚ ನಿರುತ್ಸಾಹ!

By Staff
|
Google Oneindia Kannada News

ಬೆಂಗಳೂರು, ಏ.30: ಮತದಾನ ಬಹಿಷ್ಕಾರ, ಅಲ್ಲಲ್ಲಿ ಎಲಕ್ಟ್ರಾನಿಕ್ ಮತಯಂತ್ರಗಳು ಕೈಕೊಟ್ಟಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಮಧ್ಯಾಹ್ನದ ಹೊತ್ತಿಗೆ ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಒಟ್ಟಾರೆ 25.38ರಷ್ಟು ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೊನೆಯ ಹಂತದ ಮತದಾನ ಮುಂದುವರೆಯುತ್ತಿದೆ.

ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಮತದಾನ ಬಿರುಸಾಗಿ ನಡೆಯಿತು. ಮಾಜಿ ಪ್ರಧಾನಿ ದೇವೇಗೌಡರ ಕಣ ಹಾಸನದಲ್ಲಿ ಮತದಾರರು ಕೊಂಚ ನಿರುತ್ಸಾಹ ತೋರಿಸಿದ್ದಾರೆ. ಇದುವರೆಗೂ ಹಾಸನದಲ್ಲಿ ಶೇ.28ರಷ್ಟು ಮತದಾನ ದಾಖಲಾಗಿದೆ.

ಬಾಗಲಕೋಟೆ, ಹಾವೇರಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಮಂಡ್ಯ, ಮೈಸೂರು ಮತ್ತು ಚಾಮರಾಜ ನಗರ(ಮೀಸಲು)ದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. 11 ಕ್ಷೇತ್ರಗಳಲ್ಲಿನ ಶೇಕಡಾವಾರು ಮತದಾನ ಹೀಗಿದೆ. ಬಾಗಲಕೋಟೆ ಶೇ.24, ಹಾವೇರಿ ಶೇ. 21.54, ಧಾರವಾಡ ಶೇ. 21.04, ದಾವಣಗೆರೆ ಶೇ. 25, ಶಿವಮೊಗ್ಗ ಶೇ.26.6, ಉಡುಪಿ -ಚಿಕ್ಕಮಗಳೂರು ಶೇ. 28.41, ಹಾಸನ ಶೇ.28, ದಕ್ಷಿಣ ಕನ್ನಡ ಶೇ. 38, ಮಂಡ್ಯ ಶೇ.20, ಮೈಸೂರು ಶೇ.24, ಚಾಮರಾಜನಗರ ಶೇ.22.65.

(ದಟ್ಸ್ ಕನ್ನಡ ವಾರ್ತೆ)
11 ಗಂಟೆಗೆ ಒಟ್ಟಾರೆ ಶೇ.13.1ರಷ್ಟು ಮತದಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X