Get Updates
Get notified of breaking news, exclusive insights, and must-see stories!

ಉಡುಪಿ ಕೃಷ್ಣಮಠ ದ್ವಾರಕೆಗೆ ರೂಪಕ

ರೀಕೃಷ್ಣ ಮಠದಲ್ಲಿ ಚಿನ್ನ ಬೆಳ್ಳಿಯ ಹಬ್ಬಗಳ ಸಾಲು ಆರಂಭವಾಗುತ್ತಿದೆ. ಶ್ರೀಮಂತಿಕೆ ಗರ್ಭಗುಡಿಯಿಂದ ಅಂಗಣಕ್ಕಿಳಿದಿದೆ ಎಂದರೂ ಸರಿ. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಪರ್ಯಾಯ ಅವಧಿ ಕೊನೆಗೊಳ್ಳುವ ಮುನ್ನ ಕೃಷ್ಣ ದೇವರಿಗೆ ಚಿನ್ನದ ಗೋವಿನ ಮೂರ್ತಿ ಸಮರ್ಪಿಸಲು ಪಣತೊಟ್ಟಿದ್ದಾರೆ.

ಸ್ವಾಮೀಜಿಗಳ ಪ್ರಕಾರ, ಈಗಾಗಲೇ ಇರುವ ಗೋವಿನ ಬೆಳ್ಳಿ ವಿಗ್ರಹಕ್ಕೆ ಚಿನ್ನದ ಹಾಳೆಯನ್ನು ಹೊದೆಸುವ ಈ ಕಾರ್ಯಕ್ಕೆ ಸುಮಾರು ಒಂದುವರೆ ಕೆ. ಜಿ. ಚಿನ್ನದ ಅಗತ್ಯವಿದೆ. ಒಟ್ಟು ಖರ್ಚು ಐದು ಲಕ್ಷ ರೂಪಾಯಿ ಮಾತ್ರ. ಸುಮಾರು 10ರಿಂದ 12 ಮಂದಿ ಭಕ್ತರು ಈ ಕಾರ್ಯಕ್ಕೆ ಚಿನ್ನವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಮತ್ತೆ ಹಣದ ರೂಪದಲ್ಲಿ ದಾನ ನೀಡುವವು ಸಾಲುಗಟ್ಟುತ್ತಿದ್ದಾರೆ.

ಉಡುಪಿಯಲ್ಲಿ ಗೋವಿಗೆ (ದನ) ಪವಿತ್ರ ಸ್ಥಾನವಿದೆ. ದೇವಸ್ಥಾನದ ವಿಶಾಲವಾದ ಗೋಶಾಲೆಯಲ್ಲಿ ಗೋವುಗಳಿಗೆ ಊಟ ಹಾಕದೇ ಯಾವ ಅನ್ನ ಸಂತರ್ಪಣೆಯೂ ದೇವಸ್ಥಾನದಲ್ಲಿ ನಡೆಯುವುದಿಲ್ಲ . ದನಗಾಹಿ ಬಾಲಕ ಕೃಷ್ಣನ ಬಾಲ್ಯವೆಲ್ಲ ಸಂದುದು ನಂದಗೋಕುಲದಲ್ಲಿ ಗೋಪಾಲಕನ ಬಿರುದಿನೊಂದಿಗೇ ತಾನೇ ? ಈ ಹಿನ್ನೆಲೆಯಲ್ಲಿ ಕೃಷ್ಣ ಮೂರ್ತಿಯ ಮುಂದಿರುವ ಗೋವಿಗೆ ಚಿನ್ನದ ಮುಚ್ಚಿಗೆ.

ಶ್ರೀಗಳು ಸಂಕಲ್ಪ ಮಾಡಿರುವ ಈ ಕಾರ್ಯವನ್ನು ಸಂಪೂರ್ಣವಾಗಿಸಲು ಕಟಿಬದ್ಧರಾಗಿ ನಿಂತಿರುವವರು ಕೋಣಿ ವಾಸುದೇವ ಶೇಟ್‌. ಅವರ ಪ್ರಕಾರ ಅಗತ್ಯವಿರುವ ಕಚ್ಚಾ ಮಾಲು, ಚಿನ್ನವನ್ನು ಕೊಟ್ಟ ಒಂದು ತಿಂಗಳೊಳಗೆ ಈ ಗೋಮೂರ್ತಿಗೆ ಚಿನ್ನ ತೊಡಿಸುವ ಕೆಲಸ ಮುಗಿಯುತ್ತದೆ. ಎಷ್ಟು ಚಿನ್ನ ಬೇಕಾಗುತ್ತದೆ ಎಂದು ಅಂದಾಜು ಹೇಳುವುದು ಕಷ್ಟವಾಗುತ್ತದೆ. ಒಂದೂಮುಕ್ಕಾಲರಿಂದ ಎರಡೂವರೆ ಕೆಜಿ ಚಿನ್ನ ಬೇಕಾಗಲೂಬಹುದು. ಇದು ದೇವರ ಕೆಲಸವಾದ್ದರಿಂದ ಅಕ್ಕಸಾಲಿಗನ ಮಾತು ನಂಬಬಹುದು ಅಲ್ವಾ ? ಹಾಗಾದಲ್ಲಿ ವಿಶ್ವೇಶತೀರ್ಥರು ಇನ್ನಷ್ಟು ಕಾಸು ಬಿಚ್ಚಬೇಕಾದೀತು.

ಕನಕ ನವಗ್ರಹ ಕಿಂಡಿ
ಸ್ವರ್ಣ ಸಂಭ್ರಮ ಇಲ್ಲಿಗೇ ನಿಲ್ಲುವುದಿಲ್ಲ. ಕನಕ ನವಗ್ರಹ ಕಿಂಡಿಯ ಬಗ್ಗೆ ಉಡುಪಿಯಲ್ಲಿ ಪುಕಾರು ತಪ್ಪಿದ್ದೇ ಇಲ್ಲ. ಕನಕ ಮಠವನ್ನೇ ನಿರ್ಮಿಸಿ ಉಡುಪಿ ಮಠಗಳು ಸಾಮಾಜಿಕ ಸಮಾನತೆಯನ್ನು ತೋರಿಸಿಕೊಡಬೇಕೆಂದು ಮೌನ ಆಂದೋಲನಗಳು, ಪ್ರತ್ಯಕ್ಷ ಟೀಕೆಗಳು ಕೇಳಿ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕನಕನ ಕಿಂಡಿಗೂ ಚಿನ್ನದ ಸೊಬಗು ತೊಡಿಸುವ ಯೋಜನೆ ಶ್ರೀಗಳ ಮುಂದಿದೆ. ಈ ಕಾರ್ಯಕ್ಕೆ ಸಂಕಲ್ಪ ಮಾಡಿದವರು ಬೆಂಗಳೂರಿನ ಶ್ರೀಮಂತ ಉದ್ಯಮಿ ವಿಜಯ ಮಲ್ಯ.

ಡಿಸೆಂಬರ್‌ 18 ಮಲ್ಯರ ಹುಟ್ಟು ಹಬ್ಬವಂತೆ. ಅದೇ ದಿನದಂದು ಮಲ್ಯ ಅವರು ಕನಕ ಕಿಂಡಿಗೆ ಚಿನ್ನದ ಹೊದಿಕೆ ಅರ್ಪಿಸಿ ಉತ್ತರೋತ್ತರ ಅಭಿವೃದ್ಧಿಗೆ ಕೃಷ್ಣ ಮಠದಲ್ಲಿ ಬೇಡಿಕೆ ಸಲ್ಲಿಸುವ ನಿರೀಕ್ಷೆಯಿದೆ.

ಕೃಷ್ಣ ದೇವರ ಮೂರ್ತಿಯ ಪಕ್ಕದಲ್ಲಿ ಜಯ ವಿಜಯರ ಮೂರ್ತಿಯ ಮಂಟಪ ಇದೆ. ದೇವಳ ಪೂರ್ತಿ ಚಿನ್ನ ವಜ್ರಗಳ ಬಗ್ಗೆ ತಲೆ ಕೆಡಿಸಿಕೊಂಡಿರುವಾಗ ಜಯವಿಜಯರ ಕಪ್ಪು ಕಲ್ಲಿನ ಮಂಟಪ, ಹಿತ್ತಾಳೆ ಹೊದಿಕೆಗಳನ್ನು ಹಾಗೆಯೇ ಬಿಡಲಾಗದು. ಇವೆಲ್ಲವೂ ಈ ವರ್ಷ ಬೆಳ್ಳಿಮಯವಾಗಲಿವೆ. ಮುಂದಿನ ಪರ್ಯಾಯ ಪೀಠವೇರುವ ಪಲಿಮಾರು ಸ್ವಾಮಿಗಳು ಈ ಕಾರ್ಯಕ್ರಮಗಳ ಮುಂದಿನ ಹಂತವಾಗಿ ಕೃಷ್ಣನಿಗೆ ವಜ್ರದ ಕವಚ ತೊಡಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+