Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು

Vasudhendra: ಕರ್ನಾಟಕ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಿಲ್ಲ. ಹಿಂದಿ ಭಾಷೆಯ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಹೇಳಿದೆ. ಆದರೆ, ಈ ವಿಚಾರ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಬರಹಗಾರ, ಪ್ರಕಾಶಕ ವಸುಧೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಇದೀಗ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

ಬರಹಗಾರ, ಪ್ರಕಾಶಕ ವಸುಧೇಂದ್ರ ಹೇಳಿದ್ದೇನು

ಹಿಂದಿ ಭಾಷೆ ವಿಷಯದ ಅಂಕ ಪರಿಗಣಿಸುವುದಿಲ್ಲ ಅಥವಾ ಮೂರನೇ ಭಾಷೆಯನ್ನು ಗ್ರೇಸ್ ಮಾರ್ಕ್ಸ್‌ ನೀಡಲಾಗುವುದು ಎಂದು ರಾಜ್ಯ ಸರ್ಕಾರವು ಹೇಳಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ತಿಳಿದ ಬಹುತೇಕ ಗೆಳೆಯರು ಪರರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳೆಲ್ಲಾ ಮೂರನೇ ಭಾಷೆಯಾಗಿ "ಕನ್ನಡ" ವನ್ನು ಕಷ್ಟ ಪಟ್ಟು, ಮನೆಪಾಠ ಹೇಳಿಸಿಕೊಂಡು ಕಲಿಯುತ್ತಾರೆ. ಈಗ ಅವರೆಲ್ಲಾ ಕನ್ನಡ ಕಲಿಯುವ ಅವಶ್ಯಕತೆಯೇ ಇಲ್ಲವೆ? ಅಥವಾ ಮೊದಲೆರಡು ಭಾಷೆಯಲ್ಲಿ ಕನ್ನಡ ಕಡ್ಡಾಯವೆಂಬ ನಿಯಮವಿದೆಯೆ ? ಎಂದು ಪ್ರಶ್ನೆ ಮಾಡಿದ್ದಾರೆ.

Vasudhendra

ಇದಕ್ಕೆ ನೆಟ್ಟಿಗರು ಹೇಳಿದ್ದೇನು ?

ಇದಕ್ಕೆ ಮಹೇಶ್ ಮಠಪತಿ ಎನ್ನುವವರು, ನೇರವಾಗಿ ಹೇಳಿ ಹಿಂದಿ ತೆಗೆಯಬಾರದಿತ್ತು ಎಂದು 1 ಲಕ್ಷ ವಿಧ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದಾರೆ, ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಮುಂದೆ ಎಂದಿದ್ದಾರೆ. ಹರಿಪ್ರಸಾದ್ ಎನ್ನುವವರು, ಕರ್ನಾಟಕದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯಬಹುದೇ ಹೊರತು ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಗೋಪಾಲ ಕೃಷ್ಣ ಎನ್ನುವವರು, ಸರ್ಕಾರದ ನಿರ್ಣಯ ತಪ್ಪು. ಕನ್ನಡ ಬಲಗೊಳ್ಳುವುದಲ್ಲ, ಇನ್ನೂ ಬಲಗುಂದುತ್ತದೆ, ಇದರಿಂದಾಗಿ! ಕನ್ನಡ ಮಾತೃಭಾಷೆ ಇರುವ ಮಕ್ಕಳು ಹಿಂದಿಯನ್ನು ಪ್ರಥಮ ಭಾಷೆಯಾಗಿ, ಇಂಗ್ಲಿಷ್ ಅನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ಅವರು ತೃತೀಯ ಭಾಷೆಯಾಗಿ ಕನ್ನಡವನ್ನು ಕಲಿಯುತ್ತಿದ್ದಾರೆ, ಅವರು ಇನ್ನು ಕನ್ನಡವನ್ನು ಗಂಭೀರವಾಗಿ ಪರಿಗಣಿಸಲಾರರು. ಅನ್ಯ ಭಾಷೀಯರೂ ಅಷ್ಟೇ ಎಂದಿದ್ದಾರೆ.

ದಯಾನಂದ್ ಎನ್ನುವವರು, ತಮಿಳುನಾಡು, ಚೆನ್ನೈ, ಕೊಯ್ಮೆಂತ್ತರುನಲ್ಲಿ ನಮ್ಮ ರಾಜ್ಯಕಿಂತ ಹೆಚ್ಚು ಉತ್ತರ ಭಾರತೀಯರು ಇದ್ದಾರೆ, ಅವರಿಗೆ ಅನ್ವಯ ಆಗಿರುವ ಆಗೇ ಇಲ್ಲೂ ಆಗ್ಗುತ್ತೆ. ವಾಸ್ತವಾಗಿ ನೆನ್ನೆ ಕರ್ನಾಟಕ ಸರ್ಕಾರ ಕೊಡೆ ಮಾಡಿರುವ ಸೌಲಭ್ಯ ಕನ್ನಡದ ಮಕ್ಕಳಿಗೆ ಅಷ್ಟೇ.ಉತ್ತರ ಭಾರತೀಯ, ಅನ್ಯ ಭಾಷೆಯಯವರ ಮಕ್ಕಳಿಗೆ ಅಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+