Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್‌ನಲ್ಲಿ: ರಾಜಾರಾಂ ತಲ್ಲೂರು ಬರಹ
Kannada Vs Hindi: ಭಾಷಾ ಶಿಕ್ಷಣ - ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್‌ನಲ್ಲಿ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಭಾಷಾ ಶಿಕ್ಷಣ - ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್‌ನಲ್ಲಿ Gayathri HN ಅವರು ಹಿಂದಿಯಂತೆಯೇ ಇಂಗ್ಲಿಷ್ ಕಲಿಕೆಯನ್ನು ಮರುಯೋಚನೆಗೆ ಒಡ್ಡಬೇಕೆಂಬ ಸಲಹೆ ಮುಂದಿಟ್ಟಿದ್ದಾರೆ. ಬಹಳ ತಾರ್ಕಿಕ ಸಲಹೆ ಇದು. ಅದಕ್ಕೆ ಪೂರಕವಾಗಿ, ನಾನು ಕಂಡುಕೊಂಡ ಮೂರು ಸಂಗತಿಗಳು:

1. ನಮ್ಮ ಶಿಕ್ಷಣ "ಒಳಗೊಳ್ಳುವಿಕೆ"ಗೆ ಹೆಚ್ಚಿನ ಮಹತ್ವ ಕೊಟ್ಟ ಕಾರಣದಿಂದಾಗಿ, ಮತ್ತು ಅಲ್ಲಿಂದೀಚೆಗೆ ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತಾ ಬಂದ ಕಾರಣಕ್ಕೆ ನಾವು ಇಲ್ಲಿಗೆ ತಲುಪಿದ್ದೇವೆ ಎಂಬುದು ನನ್ನ ಅನ್ನಿಸಿಕೆ. ಇಲ್ಲಿ ಒಳಗೊಳ್ಳುವಿಕೆಯನ್ನು ನಾನು ಕನ್ನಡದ ಸಂದರ್ಭದಲ್ಲೇ ಸ್ವಲ್ಪ ವಿವರಿಸಬೇಕು. ಕುಂದಾಪ್ರ ಕನ್ನಡ ತಾಯ್ನುಡಿ ಆಗಿರುವ ನನಗೆ ಪಠ್ಯಪುಸ್ತಕದ ಕನ್ನಡವು ಸಾಹಿತ್ಯ, ಸಾಮಾಜಿಕ ಮತ್ತಿತರ ಹತ್ತು ಹಲವು ವಲಯಗಳ ಬಾಗಿಲು ತೆರೆದುಕೊಟ್ಟಿದೆ. ಆದರೆ ಕನ್ನಡದ "ವ್ಯಾಕರಣ" ಮಾತ್ರ, ಈವತ್ತಿಗೂ ಕಬ್ಬಿಣದ ಕಡಲೆ. ಭಾಷೆ ನನಗೆ ಸಂವಹನದ ದಾರಿಯೇ ಹೊರತು ವ್ಯಾಕರಣ ಬದ್ಧತೆಗೆ, ಶ್ರೇಷ್ಠತೆಗೆ ಹಾದಿ ಅಲ್ಲವೇ ಅಲ್ಲ. ಆದರೆ, ನಮ್ಮ ಕನ್ನಡ ಭಾಷಾ ಶಿಕ್ಷಣವು ಸಂವಹನ ಕಲಿಕೆಯ ಹಾದಿ ಬಿಟ್ಟು, ಎಲ್ಲವನ್ನೂ ಒಳಗೊಳ್ಳುವ (ಹೆಚ್ಚಿನಂಶ ಎಲ್ಲರನ್ನೂ ಕನ್ನಡ ಪಂಡಿತ/ಸಾಹಿತಿ ಮಾಡುವ), ಪ್ರಾತಿನಿಧಿಕತೆಯ ಚೌಚೌಬಾತ್ ತಿನ್ನಿಸುವುದರಲ್ಲೇ ವ್ಯಸ್ತವಾಗಿದೆ. ಇದರೊಂದಿಗೆ ಶಿಕ್ಷಣ ಮಾಧ್ಯಮದ ಪ್ರಶ್ನೆ ಮತ್ತಿತರ ಹಲವು ಸಂಗತಿಗಳು ಸೇರಿಕೊಂಡು, ಈವತ್ತು ಕನ್ನಡ ಭಾಷೆ ಹೊರತುಪಡಿಸಿ, ಬೇರೆ ಸ್ನಾತಕೋತ್ತರ ಪದವೀಧರರಿಗೆ (ಅದೂ ಕನ್ನಡವೇ ತಾಯ್ನುಡಿ ಆಗಿರುವವರಿಗೆ) ಕನ್ನಡದಲ್ಲಿ ಸ್ಪಷ್ಟ ಸಂವಹನ ಮಾಡಬಲ್ಲ ಹತ್ತು ವಾಕ್ಯ ಬರೆಯುವುದು ತೀರಾ ಕಷ್ಟ ಆಗಿದೆ. ಇದು ನನ್ನ ಪ್ರಕಾರ, "ಒಳಗೊಳ್ಳುವಿಕೆಯ ಪಠ್ಯಕ್ರಮದ" ವೈಫಲ್ಯ. ಎಲ್ಲರನ್ನೂ ಕನ್ನಡ ಪಂಡಿತರನ್ನಾಗಿ ಮಾಡುವ ಬದಲು, ಪಾಂಡಿತ್ಯಾಸಕ್ತರನ್ನು/ಸಾಹಿತ್ಯಾಸಕ್ತರನ್ನು ಹೊರತುಪಡಿಸಿ, ಉಳಿದವರಿಗೆ ಕನ್ನಡ ಸಂವಹನಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿಟ್ಟಿನಲ್ಲಿ ಪಠ್ಯಕ್ರಮಗಳು ಬದಲಾದರೆ, ಈವತ್ತಿನ ಬದಲಾದ ಸನ್ನಿವೇಶಕ್ಕೆ ಅನುಕೂಲಕರ.
2. ಇಂಗ್ಲಿಷ್ ನನಗೆ ಅನ್ನದ ಭಾಷೆ. ಜಗತ್ತಿನ ಎಲ್ಲೆಡೆಯಿಂದ ನನಗೆ ಪ್ರತಿದಿನ ಇಂಗ್ಲಿಷ್‌ನಲ್ಲಿ ನೂರಾರು ವ್ಯಾವಹಾರಿಕ ಇ-ಮೇಲ್‌ಗಳು ಬರುತ್ತವೆ. ನಾನು ಗಮನಿಸಿದ ಒಂದು ಕುತೂಹಲಕರ ಸಂಗತಿ ಎಂದರೆ, ಪ್ರತೀ ದೇಶದ ಇಂಗ್ಲೀಷಿಗೆ ಅದರದೇ ಶೈಲಿ-ಲಯ ಇತ್ಯಾದಿಗಳಿವೆ. ಸ್ವತಃ ಬ್ರಿಟನ್ನಿನಿಂದ (ಇಂಗ್ಲಿಷ್ ತಾಯ್ನುಡಿ ಆಗಿರುವ ಭಾಷಾ ಪರಿಣತರು) ಬರುವ ಹಲವು ಇಮೇಲ್‌ಗಳು ಎಷ್ಟು ಸೂಕ್ಷ್ಮವಾಗಿ ಸಂವಹಿಸಬಲ್ಲವು ಎಂದರೆ, ನನಗಂತೂ ಕನ್ನಡದಲ್ಲೇ ಸಂಕೀರ್ಣವಾದ ವಾಕ್ಯರಚನೆಗಳನ್ನು ಓದಿದಂತೆ ಭಾಸ ಆಗುತ್ತದೆ. ಆ ಮೇಲ್‌ಗಳಲ್ಲಿ ನಾವಿಲ್ಲಿ ಕಲಿತ ತಥಾಕಥಿತ "ಗ್ರಾಮರ್" ನಿಯಮಗಳಿರುವುದಿಲ್ಲ. ಆದರೆ, ಅವು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ನಾನೇನು ಹೇಳುತ್ತಿದ್ದೇನೆ ಎಂಬುದು ಅರ್ಥವಾಗಲು, ನನಗೆ ಕಳೆದವಾರ ಬಂದ ಒಂದು ಬ್ರಿಟಿಷ್ ಇಮೇಲ್‌ನಿಂದ ಸಣ್ಣದೊಂದು ಉದಾಹರಣೆ: Please find the XXXX and the XXXXX attached. Below you can also find the video Storyboards which include the transcript that should fully correspond with the attached XXXXX - please note that the XXXXX cannot be edited in any way and the consistency with the Storyboards needs to be completely maintained, as they have now been reviewed and signed off by the client. These have been reviewed and signed off by you during our initial XXXXXXXXX, so we're not expecting any edits to be needed.
ಇದನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ, ಇಂಗ್ಲಿಷ್ ಮಾಧ್ಯಮದ ಹೊರತಾಗಿಯೂ, ನೂರಕ್ಕೆ 90 ಮಂದಿಗೆ ಇಂಗ್ಲಿಷ್ ಗ್ರಾಮರ್ ಈವತ್ತಿಗೂ ಕಬ್ಬಿಣದ ಕಡಲೆ. ಸಂವಹನ ಬಿಟ್ಟು ಶುದ್ಧ ಬ್ರಿಟಿಷ್ ಇಂಗ್ಲಿಷ್ ಗ್ರಾಮರ್ ಕಡೆ ಹೆಚ್ಚು ಒತ್ತುಕೊಟ್ಟದ್ದರ ಫಲ ಇದು. ಅತ್ತ ಕನ್ನಡವೂ ಇಲ್ಲದ-ಇತ್ತ ಇಂಗ್ಲಿಷೂ ಇಲ್ಲದ - ಒಟ್ಟಾರೆ ಭಾಷೆ ಇಲ್ಲದ - ಜನಾಂಗವೊಂದು ಸೃಷ್ಟಿ ಆಗಿದೆ. ಈಗಲೂ ಈ ಕಾಲದ ಆವಶ್ಯಕತೆಗಳಿಗೆ ಎಚ್ಚೆತ್ತುಕೊಳ್ಳದಿದ್ದರೆ, ಮುಕ್ಕಾಲು ನುಂಗಿರುವ AI, ಭಾಷೆಗೆ ಸಂಬಂಧಿಸಿದ ಬಹುತೇಕ ಎಲ್ಲವನ್ನೂ ಪೂರ್ಣ ನುಂಗಿಕೊಂಡು ಹೋಗಲಿದೆ. (ಈ ಕಾರಣಕ್ಕಾಗಿ ನಾನು ಗಾಯತ್ರಿ ಅವರ ನಿಲುವು ತಾರ್ಕಿಕವಾದುದು, ಪರಿಶೀಲನಾ ಯೋಗ್ಯ ಎನ್ನುತ್ತೇನೆ.)
3. ಭಾಷೆ ಕಲಿಕೆಯ ಪ್ರಶ್ನೆ ಬಂದಾಗ (ಅದು ಇಂಗ್ಲಿಷ್, ಹಿಂದಿ, ಸಂಸ್ಕೃತ, ಮರಾಠಿ, ಗುಜರಾತಿ, ಬೆಂಗಾಲಿ... ಯಾವುದೇ ಇರಲಿ), ಸಂವಹನ ಮತ್ತು ಭಾಷೆಯ ಆಳ ಪಾಂಡಿತ್ಯ ಕಲಿಕೆಯ ನಡುವೆ ಸ್ಪಷ್ಟ ವಿಭಜನೆ ಮತ್ತು ಉದ್ದೇಶದ ಫೈನ್‌ಟ್ಯೂನಿಂಗ್ ನಮ್ಮ ಶಿಕ್ಷಣ ವ್ಯವಸ್ಥೆಯ ಒಳಗೇ ಆಗಬೇಕಾದುದು ಅಗತ್ಯವಿದೆ. ಪರಭಾಷೆಗಳವರು ಕರ್ನಾಟಕಕ್ಕೆ ಬಂದಾಗ ನಾವು ಹೇಗೆ ಅವರಿಗೆ ವ್ಯಾವಹಾರಿಕ ಕನ್ನಡ ಕಲಿಸುವುದು ಸಾಧ್ಯವಾಗುತ್ತದೆಯೋ, ಅದೇ ಲಾಜಿಕ್ ಎಲ್ಲ ಭಾಷಾ ಕಲಿಕೆಗಳಿಗೂ ಅನ್ವಯವಾಗಲಿ. ಈ ಹಿನ್ನೆಲೆಯಲ್ಲಿ, ಹಿಂದಿ ಕುರಿತು ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ. ಆದರೆ, ಅದು ಆರಂಭದ ಹೆಜ್ಜೆ. ನಾನು ಮೇಲೆ ವಿವರಿಸಿದಂತಹ ಒಂದು ಫೈನ್‌ಟ್ಯೂನಿಂಗ್ ಕೂಡ ಭಾಷಾ ಕಲಿಕೆಗೆ ಸಂಬಂಧಿಸಿ ಅಗತ್ಯವಿದೆ.
-
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
SSLC: ಹಿಂದಿ ಪರೀಕ್ಷೆಯಲ್ಲಿ ಅಂಕ ಲೆಕ್ಕಕ್ಕೆ ಇಲ್ಲ: ವಿದ್ಯಾರ್ಥಿಗಳ ಹೊರೆ ಇಳಿಕೆ, ಸರ್ಕಾರದ ನಿರ್ಧಾರಕ್ಕೆ ಬೆಂಬಲ ಕೊಟ್ಟ ಕರವೇ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು











Click it and Unblock the Notifications