• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲನ ಹೊಳೆಯಲ್ಲಿ ತೇಲಿಬಂದ ಜಾಲ

By Staff
|

Thou hath nor youth nor age,

as if it were a after dinner sleep

dreaming of both

-T. S. Elliot

ಮುಷ್ಟಿಗಾಗಲೀ ಸಮಷ್ಟಿಗಾಗಲೀ ಗ್ರಹಿಕೆಗೆ ಸಿಗದ ಕಾಲ ಮತ್ತೊಂದು ಸುದೀರ್ಘ ಸುತ್ತನ್ನು ಮುಗಿಸಿದೆ. ನಿಸರ್ಗವೇ ಕೊಟ್ಟ ಚಿಗುರು, ಅರಳಸಿದ ಹೂವು , ಕೆರಳಿಸಿದ ಭಾವಗಳು ಮತ್ತೆ ಪ್ರಕೃತಿಯ ಮರೆಯ ಸೇರಿವೆ. ಚಳಿಗಾಲ ಉದುರಿಸಿದ ಬಣ್ಣಬಣ್ಣದ ಎಲೆಗಳು ಚಿಟ್ಟೆಗಳಂತೆ ಮತ್ತೆ ಮರವ ಸೇರಿ ಹೊಸ ಹೊಳಪಲ್ಲಿ ಮಿನುಗುತ್ತಿವೆ.

ಅದು ಯುಗಾದಿ.

ಯುಗಾದಿ ಜತೆಗೆ ವಸಂತನಿದ್ದಾನೆ. ವಸಂತನಿಗೆ ಕೋಗಿಲೆ ಹಿನ್ನೆಲೆ ಗಾಯಕ. ಅವನ ಸ್ವಾಗತಕ್ಕೆ ಪ್ರಕೃತಿಯಷ್ಟೇ ಸಿಂಗಾರಗೊಂಡರೆ ಸಾಕೆ? ನಾವೂ ಸನ್ನದ್ಧರಾಗಬೇಡವೇ?

ಆದರೆ ಹೇಗೆ? ವರ್ಷಕ್ಕೊಮ್ಮೆ ಬರುವ ಯುಗಾದಿ ಯುಗಯುಗಗಳಿಂದ ಬಂದು ಹೋಗುತ್ತಲೇ ಇವೆ. ನಾವು ಬಾಗಿಲಿಗೊಂದು ತೋರಣ ಕಟ್ಟಿ, ಬೇವುಬೆಲ್ಲಗಳ ಜತೆ ಸಂತೋಷ ಹಂಚಿಕೊಂಡು ಒಬ್ಬಟ್ಟಿನ ಜತೆ ಸಂಭ್ರಮಿಸುತ್ತೇವೆ ನಿಜ. ಆದರೆ ಅಷ್ಟೇ ಸಾಕೇ?

ಕಾಲ ಒಂದು ಸಣ್ಣ ತಿರುಗಾಟ ಪೂರೈಸಿ ಮತ್ತೆ ಮನೆ ಬಾಗಿಲಿಗೆ ಬರುವಷ್ಟರಲ್ಲಿ ಏನೆಲ್ಲ ನಡೆದು ಹೋಗಿರುತ್ತದೆ . ಕಾಲದ ಹೊಳೆ ನಿರಂತರ ಅನ್ನುತ್ತಾರೆ. ದಡದಲ್ಲಿ ನಾವಿದ್ದೇವೆ, ಬೆಸ್ತರ ಹಾಗೆ. ಅಮೂಲ್ಯ ಕ್ಷಣಗಳನ್ನು ಹಿಡಿಯುವುದಕ್ಕೆ ಬಲೆ ಬೀಸುತ್ತಾ !

ಆದರೆ, ಬೆಳ್ಳಿಮೀನುಗಳು ಬಲೆಗೆ ಬೀಳುವುದೇ ಇಲ್ಲ. ಅವು ಕಾಲದ ಹೊಳೆಯಲ್ಲಿದ್ದಾಗಲೆ ಸೊಗಸು. ಬಲೆ ಬೀಸಿ ಹಿಡಿದೊಡನೆ ಉಸಿರುಗಟ್ಟಿ ಸಾಯುತ್ತವೆ, ಕೊಳೆಯುತ್ತವೆ. ಅವುಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಮತ್ತೊಂದು ಮೀನಿನ ಹುಡುಕಾಟಕ್ಕೆ ಮನಸು ಹಾಯುತ್ತದೆ.ಇದೇ ಕಾಲನ ಕರುಣೆ. ನಮ್ಮನ್ನು ನಿರಂತರ ಹುಡುಕಾಟದಲ್ಲಿ , ನಿತ್ಯ ಕುತೂಹಲದಲ್ಲಿ, ಬಟ್ಟ ಬೆರಗಲ್ಲಿ, ಕಥಾ ಕೌತುಕದಲ್ಲಿ ನಿಲ್ಲಿಸುವ ಕಾಲ ತನ್ನ ತೆಕ್ಕೆಯಲ್ಲಿರುವ ಒಂದೊಂದೇ ಗುಟ್ಟುಗಳನ್ನು ಕಾಲಕಾಲಕ್ಕೆ ಕೊಡುತ್ತಾ ಹೋಗುತ್ತದೆ. ಚಾಳೀಸ ಕೊಟ್ಟವನೇ ಕನ್ನಡಕವನ್ನೂ ಕೊಡುತ್ತಾನೆ.

ಈಗ ಕೊಟ್ಟಿರುವ ಹಾಗೆ. ಕಾಲ ದೇಶವನ್ನು ಮೀರುವುದಕ್ಕೊಂದು ಊರುಗೋಲು ಇಂಟರ್‌ನೆಟ್‌. ಆಕಾಶವಾಣಿ, ದೂರದರ್ಶನ ಎಂದರೆ ಬೆಕ್ಕಸ ಬೆರಗಾಗುತ್ತಿದ್ದ ಎಲ್ಲರಿಗೆ, ಹೊಸ ಬೆರಗಿನ ಹಾಗೆ- ಇಂಟರ್‌ನೆಟ್‌ - ಅಂತರ್ಜಾಲ ಒದಗಿಬಂದಿದೆ.

ಯುಗಾದಿ ಎಂದರೆ ಇದೇ... ಬಚ್ಚಿಟ್ಟ ಒಂದೊಂದನ್ನೂ ಕಾಲ ಕೈಗಿಡುತ್ತಾ ನಡೆಯುವುದು, ವಿದೂರಗಳ ಸೇರಿಸುವ ಸೇತುವೆಯಾಗುವುದು, ಕಲ್ಪನೆಗಳನ್ನು ಕೈಗೂಸಾಗಿಸಿ ಕನಸುಗಳನ್ನು ಕಣ್ಣಮುಂದಿನ ಟ್ಯಾಂಜಿಬಲ್‌ ಸಂಗತಿಯನ್ನಾಗಿಸಿ ಬೆರಗುಗೊಳಿಸುವುದು.

ಇದು ಬರಿ ಬೆರಗಷ್ಟೇ ಅಲ್ಲ, ಬೆಳಕು... ಯುಗಾದಿಯ ಹೊಸ ಬೆಳಗು. ಹೊಸ ಧ್ವನಿಯ ಅಖಂಡ ಮೊಳಗು. ಒಳಗೂ ಹೊರಗೂ ಹಬ್ಬಲಿರುವ ಈ ಸರ್ವಾಂತರ್ಯಾಮಿಯ ನವ ತಂತ್ರಜ್ಞಾನ ಇಂದಿನಿಂದ ನಿಮ್ಮ ಕಂದ. ನಿಮ್ಮ ಮನೆಯಾಳಗಾಡೊ ಮುಕುಂದ.

ಬನ್ನಿ... ನಿಮ್ಮ ಬೆರಳು ತುದಿಯ ಸ್ಪರ್ಶಕ್ಕೆ ಬೆಸಗೊಳುವ, ಮರೆಯುವ ಈ ಕನ್ನಡದ ಕಂದನನ್ನು ಬರಮಾಡಿಕೊಳ್ಳಿ. ಯುಗಾದಿಯಂದು ಯುಗಪುರುಷ ಬರುತ್ತಾನಂತೆ. ಹಾಗಂತ ಪ್ರತೀತಿ.

ಒಮ್ಮೊಮ್ಮೆ ಪ್ರತೀತಿಗಳು ನಿಜವಾಗುವುದುಂಟು.

ಹೀಗಿರುವ ಹಾಗೆ- ಕನ್ನಡದ ಕಂಪು, ಸೊಂಪು, ಇಂಪುಗಳ ಹೊತ್ತ, ಕನ್ನಡ ಪ್ರಜ್ಞೆ ಯೇ ನಮ್ಮ ವೆಬ್‌ಸೈಟ್‌. ಇದು ನಿಯತಕಾಲಿಕವಲ್ಲ, ನಿತ್ಯ ಕಾಲಿಕ . ಇಲ್ಲಿ ನಿನ್ನೆಯ ವರ್ತಮಾನವಿರುವುದಿಲ್ಲ, ಎಲ್ಲವೂ ಈ ಕ್ಷಣದ ಸತ್ಯ.

Living moment to moment ಅನ್ನುತ್ತಾರಲ್ಲ ಅದೇ ಇದು.

Timeless...ಅನಂತ.

Thank you for choosing ThatsKannada

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more