ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಪದ್ಯ : ಮಕ್ಕಳಿಗೂ, ಮಕ್ಕಳಂಥವರಿಗೂ

By Staff
|
Google Oneindia Kannada News
  • ಚಂದ್ರಗೌಡ ಕುಲಕರ್ಣಿ, ಕಡದಳ್ಳಿ, ತಾಳೀಕೋಟೆ
    [email protected]
ಒಗಟು ಬಿಡಿಸೋ ಜಾಣ ?

ಅಕ್ಷರವು ಮೂರುಂಟು
ಕುಳಿತಾವ ಅಡಗಿ!
ಅರ್ಥವನು ಹೇಳ್ಯಾವ
ಹಿರಿದಾದ ಗಡಿಗಿ !

ಶಿವನೆಂದು ನೂಡಿತಾವ
ಒಂದ್‌-ಎರಡು ಸೇರಿ !
ದಿನಕರನ ಕರಿತಾವ
ಕೊನೆಯೆರಡು ಸೇರಿ !

ಒಂದನೆಯ ಅಕ್ಷರಕೆ
ಕೊನೆದೊಂದು ಕೂಡಿ !
ಯಜ್ಞಕ್ಕೆ ಕೊಡುವಂಥ
ತುಪ್ಪವದು ನೋಡಿ !

ತಿಮ್ರುವು ಮಡ್ದ್ಯಾಗ
ಅಗಲಿಕೆಯ ಅರ್ಥ !
ಪದ ಹುಡುಕಿ ಕೊಡಬೇಕು
ಜಾಣರೆ ತುರ್ತ !

***

ಹಾಲಹಸುಳೆ

ಎಳೆಯ ಕಂಗಳ ಹೊಳೆವ ನೋಟಕೆ
ಚಂದ್ರಕಳೆ ಸಮ ಬಾರದು !
ಹಾಲ ಹಸುಳೆಯ ಜೋಲು ಜೊಲ್ಲಿಗೆ
ಜೇನು ಹನಿ ಸಮವೆನಿಸದು !

ಮಧುರ ಕಂಠದ ಇಂಪು ಗಾನವ
ಕೇಳಿ ಕೋಗಿಲೆ ಹಾಡದು !
ಉಲಿವ ಗೆಜ್ಜೆಯ ಬೆಡಗಿನಾಟಾವ
ನೋಡಿ ನವಿಲು ಕುಣಿಯದು !

ತುಂಟ ಭಾವದ ಅರಳು ನಗುವಿಗೆ
ಹೂಚೆಲುವು ಸಮದೋರದು !
ತೊದಲು ನುಡಿಯನು ಕೇಳಿ ಗಿಳಿಯು
ಮೌನ ತಾಳಿ ಬಿಡುವುದು !

ಚಂದ್ರ ಕೋಗಿಲೆ ಜೇನು ಹೂ ಗಿಳಿ
ನವಿಲು ಒಟ್ಟಿಗೆ ಸೇರಿಯೆ !
ಪುಟ್ಟಕಂದನ ಮೇಲೆ ಸ್ಪರ್ಧೆಯ
ಹೂಡಿ ತಾವೆ ಸೋತಿವೆ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X