• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುನ್ನನ್ನ ನೆನಪು.. ನಾ ಮರೆಯುವ ಮುನ್ನ..

By ರಕ್ಷಾ ಕಟ್ಟೆಬಳಗುಳಿ
|

ಅದು ಕೇವಲ ಅಟ್ರಾಕ್ಷನ್ ಆಗಿದ್ರೆ ಇಷ್ಟೊತ್ತಿಗೆ ನಾನ್ ಆವ್ನ ಮರೀಬೇಕಿತ್ತು. ಹತ್ತು ವರ್ಷ ಆದ ಮೇಲು ಆ ನೆನಪುಗಳು ನನ್ನನ್ನ ಕಾಡ್ತಿವೆ ಅಂದ್ರೆ ಅದು ಅಟ್ರಾಕ್ಷನ್ ಆಗ್ಲಿಕ್ಕೆ ಸಾಧ್ಯನೇ ಇಲ್ಲ. ಹೌದು, ಅವ್ನು ನನ್ ಎದೆ ಅಂಗಳದಲ್ಲಿ ಇಂದಿಗು ಎಂದೆಂದಿಗೂ ನಗುವ ಚಂದದ ಚಂದಿರ.. ಅವ್ನೆ ಮುನ್ನ.. ಅಪ್ಪ ಅಮ್ಮ ಅಂಟಿ ಎಲ್ರು ಅವ್ನಾ ಮುನ್ನ ಅಂತಿದ್ರು. ನಾನು ಹಾಗೆ ಕರಿತ್ತಿದೆ ಆದ್ರೆ ಸ್ಕೂಲ್‌ನಲ್ಲಿ ಮಾತ್ರ ಮನೋಹರ್ ಅಂತಾ ಹೆಸರಿಟ್ಟೆ ಕರೀತಿದೆ.

ನಮ್ಮ ಮನೆ ಪಕ್ಕದಲ್ಲೆ ಇದ್ದ ಮನೋಹರ್ ನನ್ ಕ್ಲಾಸ್‌ಮೇಟ್. ತುಂಬಾ ಚೆನ್ನಾಗಿ ಓದುತ್ತಿದ್ದ. ಫಸ್ಟ್ ಸ್ಟಾಂಡರ್ಡ್‌ನಿಂದ್ಲು ಅವ್ನು ನಾನು ಒಂದೇ ಸ್ಕೂಲ್. ಟ್ಯೂಷನ್ ಸಹ ಒಂದೇ ಕಡೆ. ನಾವು ಹೈಸ್ಕೂಲ್ ಸಹ ಒಟ್ಟಿಗೆ ಸೇರ‍್ಕೊಂಡ್ವಿ. ಅದು ಮೈಸೂರ್‌ನ ಜೆಎಸ್‌ಎಸ್ ಹೈಸ್ಕೂಲ್. ನಮ್ದು ಕಲ್ಮಶವಿಲ್ಲದ ಸ್ನೇಹ ಅಷ್ಟೆ. ಮನೆ ಒಂದೆ ಕಡೆ ಇದ್ದಿದ್ರಿಂದ ಒಟ್ಟಿಗೆ ಸ್ಕೂಲ್‌ಗೆ ಹೋಗ್ತಿದ್ವಿ..

ಅವ್ನು ಹೈಸ್ಕೂಲ್‌ಗೆ ಸೈಕಲ್ ತೆಗೆದುಕೊಂಡ.. ಅಲ್ಲಿವರೆಗೂ ರೋಡ್ ಉದ್ದಕ್ಕೂ ಕಿತ್ತಾಡ್ಕೊಂಡು ನಡೆದುಕೊಂಡು ಹೋಗ್ತಿದ್ದ ನಾವು ಬೇರೆ ಬೇರೆ ಆದ್ವಿ. ಲಲಿತ ಮಹಲ್ ರೋಡ್‌ನಲ್ಲಿ ಸಿಹಿ ಹುಣಸೆ ಹಣ್ಣು, ಸೀಬೆ ಎಲ್ಲ ಕದ್ದು ತಿನ್ನೋ ಅವಕಾಶ ಕಳೆದುಕೊಂಡ್ವಿ. ಬಂಗಾರಪ್ಪ ಸಿಎಂ ಆಗಿದ್ದ ಕಾಲ ಅದು. ಆ ಸಮಯದಲ್ಲಿ 'ತುತ್ತುತ್ತು ತುತ್ತುತ್ತಾರ ಬಂಗಾರಪ್ಪನ ಚೂಡಿದಾರ' ಅಂತಾ ಹಾಡ್ತಾ ರಸ್ತೆಯಲ್ಲಿ ನಡೆದು ಬರ‍್ತಿದ್ವಿ. ಆ ಎಲ್ಲ ಕ್ಷಣಗಳನ್ನ ಆ ಸೈಕಲ್ ಕಸಿದುಕೊಂಡಿತ್ತು.

ಸ್ವಲ್ಪ ದಿನಕ್ಕೆ ಡಬಲ್ ರೈಡಿಂಗ್ ಕಲ್ತಾ ಮುನ್ನ. ನನ್ನ ಸಹ ಸ್ಕೂಲ್‌ಗೆ ಕರ‍್ಕೊಂಡು ಹೋಗೋಕೆ ಶುರು ಮಾಡ್ದಾ. ಆಗ ನಾನು ಎಂಟನೇ ಕ್ಲಾಸ್. ಅವತ್ತು ನಮ್ಮಿಬ್ಬರ ಮನಸ್ಸಿಗೆ ಸ್ನೇಹಕ್ಕೆ ಆಗ್ಲಿ ಪ್ರೀತಿ ಪ್ರೇಮಕ್ಕಾಗ್ಲಿ ಸರಿಯಾದ ಅರ್ಥ ತಿಳಿದಿರಲಿಲ್ಲ. ವೀ ಆರ್ ಜಸ್ಟ್ ನೈಬರ‍್ಸ್ ಅಷ್ಟೆ. ನಮ್ಮ ಅಕ್ಕ ಪಕ್ಕದವ್ರು ಯಾವತ್ತೂ ನಮ್ಮಿಬ್ಬರ ಬಗ್ಗೆ ಏನು ಹೇಳಲ್ಲಿಲ್ಲ. ಆದ್ರೆ ನಮ್ಮ ಸ್ಕೂಲ್‌ನಲ್ಲಿದ್ದ ಸೀನಿಯರ‍್ಸ್, ಮೀನ್ಸ್ ಅಣ್ಣಂದಿರು ಮುನ್ನನ ರೇಗಿಸೋಕೆ ಶುರು ಮಾಡಿದ್ರಂತೆ. ಏನ್ ಮಗ ಮದುವೆಯಾಗೋ ಹುಡಿಗಿಗೇ ಈಗ್ಲಿಂದ್ಲೇ ಸೇವೆ ಮಾಡ್ತಿದ್ದೀಯಾ ಅಂತಾ. ಅವರು ಹಾಗಂದಿದ್ದೇ ತಡ, ಮುನ್ನ ಮಾರನೇ ದಿನದಿಂದ್ಲೇ ನನ್ ಕರ‍್ಕೊಂಡು ಹೊಗೋದನ್ನ ನಿಲ್ಲಿಸ್ಬಿಟ್ಟ. ಆದ್ರೆ ನನ್ ಸ್ಕೂಲ್ ಬ್ಯಾಗ್ ಮಾತ್ರ ತಗೊಂಡ್ ಹೋಗ್ತಿದ್ದ.

ಸೀನಿಯರ್ ಹೇಳಿದ್ದು ಕೇಳಿ ನನಗೂ ಬೇಜಾರಾಯ್ತು. ನಾನು ಮುನ್ನ ಹತ್ರ ಮಾತಾಡೋದನ್ನೇ ಕಡಿಮೆ ಮಾಡ್ಬಿಟ್ಟೆ. ಮೊದಲಿನಿಂದ್ಲು ನಾವು ಅನವಶ್ಯಕವಾಗಿ ಏನು ಮಾತಾಡ್ತಿರ್ಲಿಲ್ಲ. ಅದಾದ ಸ್ವಲ್ಪ ದಿನದಲ್ಲಿ ಅಪ್ಪನಿಗೆ ಟ್ರಾನ್ಸ್‌ಫರ್ ಆಯ್ತು. ನಾನು ಅವತ್ತಿನಿಂದ ಇವತ್ತಿನವರೆಗೂ ಮುನ್ನನ ಮತ್ತೆ ನೋಡಿಲ್ಲ. ಆದ್ರೆ ಮುನ್ನನ ನೆನಪು ಮಾತ್ರ ಇಂದಿಗೂ ಕಾಡುತ್ತೆ. ತಿಳಿಕೆಂಪು ಬಣ್ಣದ ಅವ್ನು ನಿಜಕ್ಕು ಸುಂದರವಾಗಿದ್ದ. ಅವನ ನಗು ತುಂಬ ಮುಗ್ದವಾಗಿರುತ್ತಿತ್ತು. ಅವರಮ್ಮ ಯಾವಾಗ್ಲು ಅವನನ್ನ ಹೆಣ್ಗ ಅಂತಾ ಬೈಯ್ತಿದ್ರು. ನಾನು ಅವರ ಮನೆಗೆ ಹೋದ್ರೆ ತುಂಬಾ ಚೆನ್ನಾಗಿ ನೋಡ್ಕೊತಿದ್ರು. ನನ್ ಸೊಸೆಯಾಗ್ತೀಯ ಅಂತಾ ಮುದ್ದು ಮಾಡ್ತಿದ್ರು.

ಅದು ಗಂಡು ಹೆತ್ತ ಎಲ್ಲ ಅಮ್ಮದಿರ ಮಾತು ಬಿಡಿ. ಆ ಬಗ್ಗೆ ನನಗೇನು ಒಲವಿರಲಿಲ್ಲ. ಆದ್ರೆ ಆ ಚಿಕ್ಕ ವಯಸ್ಸಿನಲ್ಲಿ ನಾನು ಮುನ್ನ ಓಡಾಡಿದ ಆ ರೋಡ್‌ಗಳನ್ನ ನೋಡ್ತಿದ್ರೆ ಈಗ ನನಗೆ ತಿಳಿಯದೆ ನಗು ಬರುತ್ತೆ. ಇನ್ನೊಮ್ಮೆ ಆ ಬಾಲ್ಯದ ದಿನಗಳು ಮತ್ತೆ ಬೇಕು ಅನಿಸುತ್ತೆ.. ತುಂಬಾ ಸೌಮ್ಯ ವ್ಯಕ್ತತ್ವದವನಾದ ಮುನ್ನ ಯಾರಾದ್ರು ಅಪ್ಪಿತಪ್ಪಿ ಜೋರು ಮಾತನಾಡಿದ್ರು ಅತ್ತು ಬಿಡುತ್ತಿದ್ದ. ನಾನ್ ಅವನನ್ನ ನೋಡಿದ್ದು ಒಂಭತ್ತನೇ ಕ್ಲಾಸ್‌ಗೆ ಲಾಸ್ಟ್..

ಹೀಗಿದ್ದು ಹತ್ತು ವರ್ಷಗಳಾದ್ರೂ ಇಂದಿಗೂ ಮುನ್ನನ ಆ ನೆನಪುಗಳು ಮಾತ್ರ ಸದಾ ನನಗೆ ನೆನಪಾಗುತ್ತವೆ. ಅವ್ನು ಈಗ್ಲೂ ಹಾಗೆ ಇದ್ದಾನ ಗೊತ್ತಿಲ್ಲ. ಅವರಪ್ಪ ಒಂದೆರಡು ಬಾರಿ ಸಿಕ್ಕಿದ್ರು. ಮುನ್ನ ಚೆನ್ನಾಗಿದ್ದಾನಾ ಅಂತ ಕೇಳಿದ್ದು ಬಿಟ್ರೆ ಇದುವರೆಗು ಅವನನ್ನ ನೋಡೋ ಪ್ರಯತ್ನ ಮಾಡಿಲ್ಲ. ಯಾಕಂದ್ರೆ ನನ್ನ ನೆನಪಿನಲ್ಲಿರೋ ಮುನ್ನಾನೇ ನನಗೆ ಖುಷಿ ಕೊಡ್ತಾನೆ. ಇನ್ನು ನನ್ನ ಮನಸ್ಸಿನಲ್ಲಿ ಯಾವಾಗ್ಲು ಕಾಡೋ ಒಂದು ವಿಷ್ಯಾ ಅಂದ್ರೆ ಮುನ್ನ ಸಹ ನನ್ ಬಗ್ಗೆ ಹೀಗೆ ಯೋಚಿಸಿಸ್ತಿರ‍್ತಾನ ಅಂತಾ..?

English summary
What is friendship? Many people have defined friendship in many ways. But for Raksha Kattegalaguli friendship means memory of her childhood friend, whose memory is still green in her mind, even after she saw him 10 years back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more