Propose Day 2023: ಪ್ರೇಮಿಗಳ ವಾರದ 2ನೇ ದಿನ ಪ್ರಪೋಸ್ ಡೇ ವಿಶೇಷತೆ ಏನು?
ಪ್ರಪೋಸ್ ಡೇ 2023: ಪ್ರಪೋಸ್ ಡೇ ದಿನಾಂಕ, ಪ್ರಪೋಸ್ ಡೇ ಪ್ರಾಮುಖ್ಯತೆ, ಪ್ರೇಮ ಪ್ರಸ್ತಾಪದ ದಿನದ ಶುಭಾಶಯಗಳು ಮತ್ತು ಪ್ರಪೋಸ್ ಡೇ ಉಡುಗೊರೆ ನೀಡುವ ಐಡಿಯಾಗಳು ಇಲ್ಲಿದೆ.
ಪ್ರಪೋಸ್ ಡೇ ಎಂಬುದು ಪ್ರೇಮಿಗಳ ವಾರದ ಎರಡನೇ ದಿನವಾಗಿದೆ. ಇದನ್ನು ಫೆಬ್ರವರಿ 8, 2023 ರಂದು ಆಚರಿಸಲಾಗುತ್ತದೆ. ಪ್ರೇಮಿಗಳ ವಾರ ಫೆಬ್ರವರಿ 7 ರಂದು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನ ಅಂದರೆ ಫೆಬ್ರವರಿ 8ರಂದು ಜನ ತಮ್ಮ ಪ್ರೀತಿ ಪಾತ್ರರಿಗೆ ಪ್ರೇಮ ಪ್ರಸ್ತಾಪಕ್ಕೆ ಮುನ್ನುಡಿಯಾಗಿ ಉಡುಗೊರೆಗಳನ್ನು ನೀಡುತ್ತಾರೆ. ಫೆಬ್ರವರಿ 7ರಂದು ಗುಲಾಬಿ ಕೊಡುವ ಮೂಲಕ ಆರಂಭವಾಗಿ ನಂತರ ಅಂದರೆ ಫೆಬ್ರವರಿ 8ರಂದು ಪ್ರೇಮ ಪ್ರಸ್ತಾಪದ ಮುನ್ನುಡಿಯಾಗಿ ಪ್ರೇಮಿಗೆ ಹಲವಾರು ಉಡುಗೊರೆ ನೀಡುವ ಮೂಲಕ ಮುಂದುವರೆಯುತ್ತದೆ. ಪ್ರಪೋಸ್ ಡೇ ಅನ್ನು ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನೀಡುವ ಮೂಲಕ ಆಚರಿಸಲಾಗುತ್ತದೆ.
ಈ ದಿನ ಹಲವಾರು ಪ್ರೇಮಿಗಳು ತಮಗೆ ಇಷ್ಟವಾಗುವಂತೆ ಕಳೆಯುತ್ತಾರೆ. ಕೆಲವರು ಉಡುಗೊರೆ ನೀಡುವ ಮೂಲಕ, ಸಿನಿಮಾಗಳಿಗೆ ಹೋಗುವ ಮೂಲಕ ಅಥವಾ ಸಂಗಾತಿ ನೆಚ್ಚಿನ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ಆಚರಿಸುತ್ತಾರೆ. ಕಾರ್ಡ್ ನೀಡುವುದು, ಅಡುಗೆ ಮಾಡುವುದು, ಶಾಪಿಂಗ್ ಹೋಗುವುದು ಹೀಗೆ ವಿಭಿನ್ನವಾಗಿ ಪ್ರೇಮ ಪ್ರಸ್ತಾಪವನ್ನು ಮಾಡಲಾಗುತ್ತದೆ.
ಪ್ರೇಮಿಗಳ ದಿನವನ್ನು ನೀವು ಮೆಚ್ಚುವ ಮತ್ತು ಪ್ರೀತಿಸುವವರಲ್ಲಿ ಪ್ರೀತಿ ಮತ್ತು ವಾತ್ಸಲ್ಯವನ್ನು ಹರಡಲು ಆಚರಿಸಲಾಗುತ್ತದೆ. ಜೊತೆಗೆ ಜೀವನದುದ್ದಕ್ಕೂ ನಿಮ್ಮ ಸುತ್ತಲೂ ಅವರು ಇರಬೇಕೆಂದು ಬಯಸುತ್ತಾರೆ. ಪ್ರೇಮಿಗಳ ವಾರದ ಪಟ್ಟಿಯಲ್ಲಿ ಎರಡನೇ ದಿನವು ಅತ್ಯಂತ ರೋಮ್ಯಾಂಟಿಕ್ ದಿನವಾಗಿದೆ. ಇದನ್ನು 'ಪ್ರಪೋಸ್ ಡೇ' ಎಂದು ಕರೆಯಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

ಪ್ರಪೋಸ್ ಡೇ 2023 ಇತಿಹಾಸ
ಒಂದು ಹುಡುಗ ಹುಡುಗಿ ನಡುವೆ ಪ್ರೀತಿ ಹುಟ್ಟಿದ್ದರೆ ಅದನ್ನು ಪ್ರಸ್ತಾಪಿಸಲು ಇದೊಂದು ಉತ್ತಮ ದಿನವಾಗಿದೆ. ತಮ್ಮ ಪ್ರೇಮ ವಿಚಾರವನ್ನು ಒಂದೇ ದಿನದಲ್ಲಿ ಪ್ರಸ್ತಾಪಿಸದೇ ಪ್ರೇಮಿಯ ಮನಸ್ಸನ್ನು ಸೆಳೆಯಲು ಇದೊಂದು ಅಡಿಪಾಯದ ದಿನ ಅಂತಲೇ ಹೇಳಬಹುದು. ಫೆಬ್ರವರಿ 7ರಂದು ಗುಲಾಬಿ ಕೊಡುವ ಮೂಲಕ ತಮ್ಮ ಪ್ರೇಮ ವಿಚಾರಕ್ಕೆ ಮುನ್ನುಡಿ ಬರೆಯುವ ಪ್ರೇಮಿಗಳು ಈ ದಿನ (ಫೆಬ್ರವರಿ 8) ಪ್ರೇಮಿಗೆ ಹಲವಾರು ಉಡುಗೊರೆಗಳನ್ನು ನೀಡುವ ಮೂಲಕ ಸೆಳೆಯುತ್ತಾರೆ. ಇದು ಕೇವಲ ಉಡುಗೊರೆಗಳನ್ನು ನೀಡುವ ದಿನವಲ್ಲ. ಬದಲಿಗೆ ಪ್ರೇಮಿಗೆ ಇಷ್ಟವಾಗುವ, ನೆಚ್ಚಿನ ವಸ್ತುಗಳು ಅಥವಾ ವಿಚಾರಗಳು ತಮಗೆಷ್ಟು ಅರ್ಥವಾಗಿವೆ ಎನ್ನುವ ಒಂದು ಸಣ್ಣ ಪರೀಕ್ಷೆ ಅಷ್ಟೆ. ಆ ಒಂದು ಉಡುಗೊರೆ ನೀಡುವ ಮೂಲಕ ಪ್ರೇಮಿಯ ಮನಸ್ಸಿಗೆ ಒಂದು ಹೆಜ್ಜೆ ಮುಂದೆ ಹತ್ತಿರುವಾಗುವುದು.

ಪ್ರಪೋಸ್ ಡೇ 2023 ಮಹತ್ವ
ಈ ಮೂಲಕ ಹೊಸ ಸಂಬಂಧವನ್ನು ಪ್ರಾರಂಭಿಸಲು, ವಿಶೇಷ ಭಾವನೆ ಮೂಡಿಸಲು ಇದು ಪರಿಪೂರ್ಣ ದಿನವಾಗಿದೆ. ನಿಮಗೆ ಇಷ್ಟವಾದದ್ದು ಅಥವಾ ಸಂಗಾತಿಗೆ ಇಷ್ಟವಾದದ್ದನ್ನು ಸ್ಪಷ್ಟಪಡಿಸಲು ಇದು ಅತ್ಯುತ್ತಮ ದಿನವಾಗಿದೆ. ಆದರೆ ಪ್ರೇಮಿಗಳು ಮಾತ್ರ ಈ ದಿನವನ್ನು ಆಚರಿಸುವುದಿಲ್ಲ. ವಿವಾಹಿತ ದಂಪತಿಗಳೂ ಈ ದಿನವನ್ನು ಆಚರಿಸುತ್ತಾರೆ. ಈ ಮೂಲಕ ತಮ್ಮ ಆರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಟ್ಟಿನಲ್ಲಿ ಈ ದಿನ ಪ್ರೇಮ ಪ್ರಸ್ತಾಪಕ್ಕೆ ಮುನ್ನುಡಿ ಬರೆಯುವ ಅಥವಾ ಸಂಗಾತಿಯ ಮೇಲಿನ ಪ್ರೀತಿಯನ್ನು ಪ್ರಸ್ತುತಪಡಿಸುವ ದಿನಾವಗಿದೆ.
ಈ ದಿನವನ್ನು ಆಚರಿಸಲು ಹಲವಾರು ಪ್ರೇಮಿಗಳು ಮತ್ತು ದಂಪತಿಗಳು ನೆಚ್ಚಿನ ರೆಸ್ಟೋರೆಂಟ್, ನೆಚ್ಚಿನ ಬೀಚ್, ಮೂನ್‌ಲೈಟ್ ಡಿನ್ನರ್, ಗೇಮ್ಸ್ ಇತ್ಯಾದಿಗಳನ್ನು ಆಯೋಜಿಸುತ್ತಾರೆ.

ಗುಲಾಬಿ ದಿನದ ಶುಭಾಶಯಗಳು
ಇವತ್ತು ನಿಮ್ಮ ನೆಚ್ಚಿನವರಿಗೆ ರೋಸ್ ಕೊಟ್ಟು ಮನದ ಮಾತುಗಳನ್ನು ಹೇಳಿಕೊಳ್ಳುವ ದಿನ. ಫೆಬ್ರವರಿ 7 ರಂದು ಆಚರಿಸುವ ಗುಲಾಬಿ ದಿನಕ್ಕೆ ತನ್ನದೇ ಆದ ವಿಶೇಷತೆ ಇದೆ. ಈ ದಿನವನ್ನು ವಿಶ್ವ ಗುಲಾಬಿ ದಿನ ಎಂದೂ ಆಚರಿಸಲಾಗುತ್ತದೆ. ಗುಲಾಬಿ ದಿನದಂದು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಂದು ಗುಲಾಬಿಗಳ ಬಣ್ಣಕ್ಕೂ ಒಂದೊಂದು ಅರ್ಥವಿದೆ. ಅದೇನೆಂದು ನೋಡೋಣ.

ಪ್ರತೀ ಗುಲಾಬಿಗಳ ಬಣ್ಣಕ್ಕೂ ಒಂದೊಂದು ಅರ್ಥ
1. ಕೆಂಪು ಗುಲಾಬಿ
ಕೆಂಪು ಗುಲಾಬಿ ಎಲ್ಲಕ್ಕಿಂತ ಹೆಚ್ಚು ಇಷ್ಟಪಡುವ ಹೂವಾಗಿದೆ. ಇದು ಪ್ರೀತಿಯನ್ನು ಪ್ರತಿನಿಧಿಸುತ್ತದೆ. ನಿಜವಾದ ಪ್ರೀತಿಯನ್ನು ಹೆಚ್ಚಾಗಿ ಕೆಂಪು ಗುಲಾಬಿಗಳು ಪ್ರತಿನಿಧಿಸುತ್ತವೆ.
2. ಆರೆಂಜ್ ರೋಸ್
ಕಿತ್ತಳೆ ಬಣ್ಣ ಉಗ್ರ ಬಯಕೆಯನ್ನು ಪ್ರತಿನಿಧಿಸುತ್ತದೆ. ಈ ವರ್ಣರಂಜಿತ ಹೂವುಗಳು ಉತ್ಸಾಹಭರಿತ ಹೇಳಿಕೆಯನ್ನು ನೀಡುತ್ತವೆ. ಕಿತ್ತಳೆ ಬಣ್ಣವು ಬಯಕೆಯನ್ನು ಪ್ರತಿನಿಧಿಸುತ್ತದೆ. ಈ ವರ್ಣರಂಜಿತ ಹೂವುಗಳು ಉತ್ಸಾಹಭರಿತ ಪ್ರೀತಿಯನ್ನು ಸೂಚಿಸುತ್ತದೆ. ನೀವು ನಿರ್ದಿಷ್ಟ ವ್ಯಕ್ತಿಯ ಮೇಲೆ ತೀವ್ರವಾದ ಬಯಕೆಯನ್ನು ಹೊಂದಿದ್ದರೆ, ಕಿತ್ತಳೆ ಬಣ್ಣದ ರೋಸ್ ಕೊಡಿ.
3. ಗುಲಾಬಿ ಬಣ್ಣದ ಗುಲಾಬಿ
ಗುಲಾಬಿ ತಮ್ಮ ಜೀವನದ ಮಾದರಿಗಳನ್ನು ಪ್ರಸ್ತುತಪಡಿಸಬಹುದು. ಗುಲಾಬಿ ಬಣ್ಣ ಮೆಚ್ಚುಗೆ, ಉತ್ಸಾಹ ಮತ್ತು ಕೃತಜ್ಞತೆಯನ್ನು ಸಹ ಸೂಚಿಸುತ್ತದೆ.
4. ಪೀಚ್ ರೋಸ್
ನಿಮ್ಮ ಪ್ರೀತಿಯ ಪ್ರಸ್ತಾಪವಾಗಿ ಇತರರಿಗೆ ಪೀಚ್ ಗುಲಾಬಿಯನ್ನು ಕಳುಹಿಸಿ. ಇದು ತಪ್ಪೊಪ್ಪಿಗೆಯ ಮೊದಲ ಹೆಜ್ಜೆಯಾಗಿರಬಹುದು.
5. ಹಳದಿ ಗುಲಾಬಿ
ಒಬ್ಬ ವ್ಯಕ್ತಿಯು ಪ್ರೀತಿಯ ಆಟಕ್ಕೆ ಕಾಲಿಡಲು ಇದು ಮೊದಲ ಹೆಜ್ಜೆಯಾಗಿದೆ. ಹಳದಿ ಗುಲಾಬಿಯೊಂದಿಗೆ ಪ್ರಾರಂಭಿಸಿ, ಅದು ಸ್ನೇಹದ ಸಂಕೇತವಾಗಿದೆ.ಹೊಸದಾಗಿ, ಮೊದಲನೆಯ ಬಾರಿ ಪ್ರೀತಿಯನ್ನು ಮಾಡುತ್ತಾ ಇದ್ರೆ ನೀವು ಈ ಹಳದಿ ಬಣ್ಣದ ಗುಲಾಬಿಯನ್ನು ಕೊಟ್ಟು ಪ್ರಪೋಸ್ ಮಾಡಿ. ಹಳದಿಯು ಪ್ರೀತಿ ಮತ್ತು ಸತ್ಯದ ಸಂಕೇತ.
6. ಲ್ಯಾವೆಂಡರ್ ರೋಸ್
ಅಪರೂಪದ ಹೂವು. ನೇರಳೆ ಹೂವುಗಳು ಮೋಡಿಮಾಡುವಿಕೆಯನ್ನು ಪ್ರಸ್ತಾಪಿಸುತ್ತವೆ. ಈ ಬಣ್ಣ "ಮೊದಲ ನೋಟದಲ್ಲೇ ಪ್ರೀತಿಯ" ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಮಾಡಬಹುದು.
7. ಬಿಳಿ ಗುಲಾಬಿ
ಮುಗ್ಧತೆ ಮತ್ತು ಶುದ್ಧತೆಯ ಪ್ರಾತಿನಿಧ್ಯವೆಂದರೆ ಬಿಳಿ ಗುಲಾಬಿ. ಬಿಳಿ ಗುಲಾಬಿಗಳು ಕೇವಲ ಸುಂದರವಲ್ಲ, ಆದರೆ ಅವು ಜೀವನದಲ್ಲಿ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತವೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications