Kiss Day 2023: ಪ್ರೇಮಿಗಳ ವಾರದ 7ನೇ ದಿನ ಕಿಸ್ ಡೇ ವಿಶೇಷತೆ ಏನು?
ಕಿಸ್ ಡೇ 2023: ಕಿಸ್ ಡೇ ದಿನಾಂಕ, ಕಿಸ್ ಡೇ ಪ್ರಾಮುಖ್ಯತೆ, ಪ್ರೇಮ ಪ್ರಸ್ತಾಪದ ದಿನದ ಶುಭಾಶಯಗಳು ಮತ್ತು ಕಿಸ್ ಡೇ ಉಡುಗೊರೆ ನೀಡುವ ಐಡಿಯಾಗಳು ಇಲ್ಲಿದೆ.
ಪ್ರೇಮಿಗಳು ತುಂಬಾ ಕಾತುರದಿಂದ ಕಾಯುತ್ತಿರುವ ಪ್ರೇಮಿಗಳ ದಿನ ಬಂದೇ ಬಿಡ್ತು. ಈ ದಿನಕ್ಕಾಗಿ ಎದುರು ನೋಡುತ್ತಿರುವ ಎಲ್ಲಾ ಪ್ರೇಮಿಗಳಿಗೂ ಕಿಸ್ ಡೇ ಶುಭಾಶಯಗಳು. ಇಂದು ಕಿಸ್ ಡೇಯನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ವಾರದ ಏಳನೇ ದಿನ ಅಂದರೆ ಫೆಬ್ರವರಿ 13ರಂದು ಕಿಸ್ ಡೇ ಆಚರಿಸಲಾಗುತ್ತದೆ.
ಪ್ರೇಮಿಗಳ ದಿನ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಫೆಬ್ರವರಿ 8 ಪ್ರಪೋಸ್ ಡೇ, ಫೆಬ್ರವರಿ 9 ಚಾಕೊಲೇಟ್ ಡೇ, ಫೆಬ್ರವರಿ 10 ಟೆಡ್ಡಿ ಡೇ, ಫೆಬ್ರವರಿ 11 ಪ್ರಾಮಿಸ್ ಡೇ, ಫೆಬ್ರವರಿ 12 ಹಗ್ ಡೇ ಮತ್ತು ಫೆಬ್ರವರಿ 13 ಕಿಸ್ ಡೇ, ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ವೀಕ್‌ನ ಪ್ರತಿ ದಿನ ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರೀತಿಯಲ್ಲಿರುವವರು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳು ಮತ್ತು ಅವರೊಂದಿಗೆ ಸ್ಮರಣೀಯ ಸಮಯವನ್ನು ಆನಂದಿಸುತ್ತಾರೆ.
ಇತಿಹಾಸ ಮತ್ತು ಮಹತ್ವ:
ಪ್ರೀತಿಯಲ್ಲಿರುವವರು ಈ ದಿನದಂದು ಚುಂಬನದ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ಇದರ ಮೂಲಕ ತಮ್ಮ ಸಂಗಾತಿಗೆ ಪ್ರೀತಿಯನ್ನು ತೋರಿಸುತ್ತಾರೆ. ಯಾರನ್ನಾದರೂ ಪ್ರೀತಿಸುವಂತವರು ನೀವಾಗಿದ್ದರೆ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಾಯುತ್ತಿದ್ದರೆ ಈ ದಿನ ಉತ್ತಮ ಸಮಯ.

ಕಿಸ್ ಎನ್ನುವುದು ನಿಮ್ಮ ಪ್ರೀತಿಪಾತ್ರರಿಗೆ ನೀವು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ಕಿಸ್ ಡೇ ಜನರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯವನ್ನು ಕಳೆಯಲು ಮತ್ತು ತಮ್ಮ ಪ್ರೀತಿಪಾತ್ರರ ಜೊತೆ ಚುಂಬನದೊಂದಿಗೆ ಒಂದು ಕ್ಷಣ ಕಳೆಯಲು ಪ್ರೇರೇಪಿಸುತ್ತದೆ.
ಶುಭಾಶಯಗಳು:-
*ಮುತ್ತು ಎಲ್ಲಾ ಚಿಂತೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹ್ಯಾಪಿ ಕಿಸ್ ಡೇ.
*ನನ್ನ ತುಟಿಗಳಿಗೆ ನಿನ್ನಿಂದ ಒಂದು ಸಿಹಿ ಮುತ್ತುಗಿಂತ ದೊಡ್ಡ ಉಡುಗೊರೆ ಇಲ್ಲ. ಹ್ಯಾಪಿ ಕಿಸ್ ಡೇ!
*ಕೆಲವೊಮ್ಮೆ ನಾನು ನಿನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳನ್ನು ಹುಡುಕಲು ವಿಫಲನಾಗುತ್ತೇನೆ; ಅದಕ್ಕಾಗಿಯೇ ನಾನು ಪದಗಳಿಗಿಂತ ಚುಂಬನಕ್ಕೆ ಆದ್ಯತೆ ನೀಡುತ್ತೇನೆ. ಈ ದಿನ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
*ಚುಂಬನವು ನಮ್ಮನ್ನು ಮತ್ತೆ ಮತ್ತೆ ಪ್ರೀತಿಸುವಂತೆ ಮಾಡುತ್ತದೆ ಮತ್ತು ಪರಸ್ಪರರ ದೃಷ್ಟಿಯಲ್ಲಿ ನಮ್ಮನ್ನು ಶಾಶ್ವತವಾಗಿ ದೋಷರಹಿತರನ್ನಾಗಿ ಮಾಡುತ್ತದೆ. ಹ್ಯಾಪಿ ಕಿಸ್ ಡೇ.
*ಚುಂಬನ ಇಡೀ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ.












Click it and Unblock the Notifications