ಹುಡುಗಿ ನಿಮ್ಮನ್ನು ನೋಡಿ ಹೀಗೆ ಮಾಡಿದರೆ ಅದರ ಅರ್ಥ ಏನು ಗೊತ್ತಾ?
ಪ್ರೀತಿ ಪ್ರತಿಯೊಬ್ಬರ ಜೀವನದಲ್ಲಿ ಒಂದು ಸುಂದರ ಅನುಭವವನ್ನು ನೀಡುತ್ತದೆ. ಇದು ಗಂಡು ಹಾಗೂ ಹೆಣ್ಣಿನ ನಡುವೆ ಇರುವ ಒಂದು ನಂಬಿಕೆ, ವಿಶ್ವಾಸದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹದಿಹರಿಯದವರ ನಡುವೆ ಹೆಚ್ಚಾಗಿ ಪ್ರೀತಿ ಕಂಡು ಬರುತ್ತಿದೆ. ಆದರೆ ಕೆಲವರು ಇದನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ನೋಟ, ಹಾವಭಾವ, ಸನ್ನೆ ಮೂಲಕ ವ್ಯಕ್ತಪಡಿಸುತ್ತಾರೆ. ಇವುಗಳನ್ನು ಬಾಯಿಯಿಂದ ಹೇಳದೇ ತಿಳಿಯಬೇಕಾದ ಮಾತುಗಳು ಎನ್ನಲಾಗುತ್ತದೆ.
ಹಾಗಾದರೆ ಮಾತಿನಲ್ಲಿ ಹೇಳಲಾಗದ ಗಂಡು ಹೆಣ್ಣಿನ ನಡುವೆ ನಡೆಯುವ ಸನ್ನೆಯ ಮಾತುಗಳನ್ನು ಅರಿಯುವುದು ಹೇಗೆ? ಯಾವ ಸನ್ನೆ ಯಾವ ಅರ್ಥವನ್ನು ಕೊಡುತ್ತದೆ. ಪ್ರೀತಿಯಲ್ಲಿರುವ ಹುಡುಗಿ ತನ್ನ ಪ್ರೇಮಿಗೆ ಮಾಡುವ ಪ್ರಮುಖ ಸನ್ನೆಗಳು ಯಾವವು? ಆ ಸನ್ನೆಗಳ ಅರ್ಥವೇನು? ಪ್ರೇಮ ಪ್ರಸ್ತಾಪಕ್ಕೂ ಮುನ್ನ ಒಂದು ಹುಡುಗಿ ತನ್ನ ಪ್ರೇಮಿಯನ್ನು ಕಂಡಾಗ ಹೇಗೆಲ್ಲಾ ವರ್ತಿಸಬಹುದು ಎಂದು ತಿಳಿಯೋಣ.

*ನಗುಮುಖ
ಸಾಮಾನ್ಯವಾಗಿ ನಾವು ಯಾರನ್ನೇ ನೋಡಿದರೂ ನಗುನಗುತ್ತಾ ಮಾತನಾಡಿಸುತ್ತೇವೆ. ಆದರೆ ನಿಮ್ಮನ್ನು ಪ್ರೀತಿಸುವವರು ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಿಮ್ಮನ್ನು ನೋಡಿ ಅವರು ನಗಲೂ ಕೂಡ ಮುಜುಗರಗೊಳ್ಳುತ್ತಾರೆ. ಜೊತೆಗೆ ಈ ರೀತಿಯ ಹುಡುಯ ಭಾವನೆ ಆಕೆಯ ಪ್ರೇಮಿಗೆ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ಪ್ರೀತಿಸುವ ಹುಡುಗಿ ನಗುತ್ತಾಳೆ ಆದರೆ ಅದು ಯಾರ ಕಣ್ಣಿಗೂ ಕಾಣಿಸುವುದಿಲ್ಲ ಬದಲಿಗೆ ಪ್ರೀತಿ ಮಾಡುವ ಆಕೆಯ ಪ್ರೇಮಿಗೆ ಮಾತ್ರ ಕಾಣಿಸುತ್ತದೆ. ಆ ರೀತಿಯಲ್ಲಿ ಮುಖದ ಭಾವ ಆಕೆಯಲ್ಲಿ ಬದಲಾಗುತ್ತದೆ.
*ನೀವು ಕಂಡಾಗ ಆಗುವ ಬದಲಾವಣೆ
ಒಂದು ಹುಡುಗಿ ತಾನು ಪ್ರೀತಿಸುವವರನ್ನು ಕಂಡಾಗ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅಂದರೆ ಆಕೆ ಬೇರೆಯವರ ಕಡೆಗೆ ನೋಡಲು ಇಚ್ಚಿಸುವುದಿಲ್ಲ. ಬೇರೆಯವರ ಮಾತು ಆಕೆಯ ಕಿವಿಗೆ ಬೀಳುವುದಿಲ್ಲ. ಬೇರೆಯವರೊಂದಿಗೆ ಇದ್ದರೂ ದೂರದಲ್ಲಿರುವ ತನ್ನ ಪ್ರೇಮಿಯ ಯೋಚನೆಯಲ್ಲಿ ಆಕೆ ಮುಳುಗಿರುತ್ತಾಳೆ. ಆಕೆಯ ಮನಸ್ಸು ತನ್ನ ಪ್ರೇಮಿ ಇರುವ ಸ್ಥಳದತ್ತ ಸೆಳೆಯುತ್ತಲೇ ಇರುತ್ತದೆ. ಕಣ್ಣು ಆಕೆಯ ಪ್ರೇಮಿಯತ್ತ ಹಾಯುತ್ತಲೇ ಇರುತ್ತದೆ. ಆಕೆಯ ಇಂಥಹ ಹೇಳಲಾಗದ ಮಾತುಗಳು ಆಕೆಯ ಪ್ರೇಮಿಗಲ್ಲದೇ ಬೇರೆಯಾರಿಗೂ ಅರ್ಥವಾಗುವುದಿಲ್ಲ.
*ಮಾತಿನಲ್ಲಿ ಆಗುವ ಬದಲಾವಣೆ
ಸಾಮಾನ್ಯವಾಗಿ ಪ್ರೀತಿಸುವ ಹುಡುಗಿಯರು ತನ್ನ ಪ್ರೇಮಿಯನ್ನು ಕಂಡಾಗ ತುಂಬಾ ಮಾತನಾಡಬೇಕು ಅಂದುಕೊಂಡಿರುತ್ತಾರೆ. ಆದರೆ ಅದು ಅವರಿಗೆ ಸಾಧ್ಯವಾಗುವುದಿಲ್ಲ. ಪ್ರೇಮ ಪ್ರಸ್ತಾಪಕ್ಕೂ ಮುನ್ನ ಒಂದು ಹುಡುಗಿ ತನ್ನ ಪ್ರೇಮಿಯನ್ನು ಕಂಡಾಗ ಹೀಗೆಲ್ಲಾ ವರ್ತಿಸಬಹುದು. ತಮ್ಮ ಸ್ನೇಹಿತರು ಮಾತನಾಡಲು ಮುಂದಾದರೆ ಅದನ್ನು ತಡೆಯುವುದು, ತನ್ನ ಪ್ರೇಮಿ ಮಾತನಾಡಲು ಅವಕಾಶ ಕಲ್ಪಿಸುವುದು. ಆಕೆ ತನ್ನ ಪ್ರೇಮಿಯ ಮಾತು ಆಲಿಸುವಾಗ ಆಕೆಯ ಮುಖದಲ್ಲಿ ಆಗುವ ಬದಲಾವಣೆಗಳು ಸೂಕ್ಷ್ಮವಾಗಿ ನೋಡಿದರೆ ಅರ್ಥವಾಗುತ್ತದೆ. ಇಂತಹ ಬದಲಾವಣೆಗಳು ಸ್ನೇಹಿತರಲ್ಲಿ ನೀವು ಕಾಣುವುದು ತುಂಬಾ ವಿರಳ.

*ಕಾಳಜಿ
ಕಾಳಜಿ ಸಾಮಾನ್ಯವಾಗಿ ಎಲ್ಲರ ಮೇಲೆ ಎಲ್ಲರಿಗೂ ಇರುತ್ತದೆ. ಪೋಷಕರು-ಮಕ್ಕಳ ನಡುವೆ, ಶಿಕ್ಷಕರು ವಿದ್ಯಾರ್ಥಿಗಳ ನಡುವೆ, ಅಲ್ಲದೆ ಸ್ನೇಹಿತರು ಕೂಡ ಕಾಳಜಿ ವಹಿಸುತ್ತಾರೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗಿ ತೋರುವ ಕಾಳಜಿ ಎಲ್ಲರಿಗಿಂತ ವಿಶೇಷವಾಗಿರುತ್ತದೆ. ಅದು ತೋರಿಕೆಗೆ ಕೆಲವೊಮ್ಮೆ ಕಾಣಿಸಬಹುದು ಅಥವಾ ಕಾಣಿಸದೇ ಇರಬಹುದು. ಇದನ್ನು ಗುರುತಿಸುವುದು ಕೂಡ ಕಷ್ಟ ಸಾಧ್ಯ. ಆದರೆ ಅವರ ಹಾವಭಾವದಲ್ಲಿನ ಬದಲಾವಣೆಗಳಿಂದ ಕೊಂಚ ತಿಳಿದುಕೊಳ್ಳಬಹುದು. ಹೆಚ್ಚು ಪ್ರೇಮಿ ಬಗ್ಗೆ ತಿಳಿಯುವ ಆಸಕ್ತಿ ತೋರುವುದು. ಪ್ರಶ್ನೆ ಮಾಡುವುದು, ಹೆಚ್ಚು ಅದರ ಬಗ್ಗೆ ಮಾತನಾಡುವುದು, ಹೆಚ್ಚು ಅದರ ಬಗ್ಗೆ ಯೋಚಿಸುವುದು, ಹೆಚ್ಚು ಉತ್ಸಾಹ ತೋರುವುದು ಇವೆಲ್ಲ ಒಬ್ಬ ಪ್ರೀತಿಸುವ ಹುಡುಗಿ ತನ್ನ ಪ್ರೇಮಿಗೆ ತೋರುವ ಕಾಳಜಿಗಳಾಗಿರುತ್ತವೆ. ಕೆಲವೊಮ್ಮೆ ಇವೆಲ್ಲ ಮಾಡದೆಯೂ ಆಕೆ ತನ್ನ ಪ್ರೇಮಿಯ ಬಗ್ಗೆ ಕಾಳಜಿ ವಹಿಸಬಹುದು. ಇದು ಕೆಲವೊಮ್ಮೆ ಸೂಕ್ಷ್ಮವಾಗಿಯೂ ಇರುತ್ತದೆ.
*ಸನ್ನೆ
ಸನ್ನೆ ಅನ್ನೋ ಪದ ಎರಡಕ್ಷರದಿಂದ ಕೂಡಿದ್ದರೂ ಅದರ ಪ್ರಯೋಗದ ಹಿಂದೆ ಹುಡುಕಿದಷ್ಟು ಅರ್ಥಗಳು ಸಿಗುತ್ತಾ ಹೋಗುತ್ತವೆ. ವಿಶೇಷವಾಗಿ ಪ್ರೇಮಿಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕಣ್ಣು ಹುಬ್ಬು ಮೇಲೆತ್ತುವುದು, ದಿಟ್ಟಿಸಿ ನೋಡುವುದು, ಮುಗುಳು ನಗುವುದು, ಪ್ರೇಮಿಯನ್ನು ಬಿಟ್ಟು ಬೇರೆಡೆ ನೋಡುವುದು, ಮಂಕಾಗುವುದು, ಸಂತೋಷದಿಂದ ಇರುವುದು ಕೂಡ ಸನ್ನೆಯೇ ಆಗಿದೆ. ಈ ಸನ್ನೆಗಳು ಒಂದೊಂದು ಒಂದು ಅರ್ಥವನ್ನು ಹೊಂದಿರುತ್ತವೆ. ಬಾಯಿಯನ್ನು ಅತ್ತಿಂದ ಇತ್ತ ತಿರುಗಿಸುವುದು, ಕಣ್ಣು ಅತ್ತಿಂದ ಇತ್ತ ಹಾಯಿಸುವುದು ಇವೆಲ್ಲವೂ ಆಯಾ ಸಂದರ್ಭಕ್ಕೆ ಅನುಸಾರವಾಗಿ ಅರ್ಥವನ್ನು ನೀಡುತ್ತವೆ.
ಹೀಗೆ ಒಬ್ಬ ಹುಡುಗಿ ತನ್ನ ಪ್ರೇಮಿಯನ್ನು ಕಂಡಾಗ ವರ್ತಿಸಬಹುದು. ಮಾತಿನಲ್ಲಿ ಹೇಳದೆ ಮನದಾಳದ ಮಾತುಗಳನ್ನು ಸನ್ನೆಯ ಮೂಲಕ ಹೇಳಬಹುದು. ಅದು ಎಲ್ಲರಿಗೂ ಅರ್ಥವಾಗಬೆಂಕೆದಿಲ್ಲ. ಆದರೆ ಆಕೆಯ ಪ್ರೇಮಿಯು ಆಕೆಯನ್ನು ಪ್ರೀತಿಸುತ್ತಿದ್ದರೆ ಖಂಡತವಾಗಿ ಈ ಎಲ್ಲಾ ರೀತಿಯ ಬದಲಾವಣೆಗಳು ಆತನಿಗೆ ಅರ್ಥವಾಗುತ್ತವೆ.












Click it and Unblock the Notifications