ಪ್ರೀತಿ ನಿರಾಕಾರಿಸಿದ್ದಕ್ಕೆ ಬಾಲಕಿಗೆ 14 ಬಾರಿ ಇರಿದು ಸಾವನ್ನಪ್ಪಿದ ಆರೋಪಿ

ತಿರುಚ್ಚಿ, ಜೂನ್ 1: ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 22 ವರ್ಷದ ಯುವಕ ಆಕೆಯನ್ನು 14 ಬಾರಿ ಇರಿದಿದ್ದಾನೆ. ಆರೋಪಿ ವ್ಯಕ್ತಿಯನ್ನು ಕೇಶವನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕುತ್ತಿದ್ದಾಗ ಆತನೂ ಕೂಡ ಶವವಾಗಿ ಪತ್ತೆಯಾಗಿದ್ದಾನೆ. ತಿರುಚ್ಚಿಯ ಅತಿಕುಲಂ ನಿವಾಸಿಯಾಗಿರುವ ಬಾಲಕಿ 11ನೇ ತರಗತಿಯಲ್ಲಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿ ಸಂತ್ರಸ್ತೆ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ಕೇಶವನ್ ರೈಲ್ವೇ ಮೇಲ್ಸೇತುವೆ ಬಳಿ ಆಕೆಯನ್ನು ತಡೆದಿದ್ದಾನೆ.

ಕೇಶವನ್ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಜೂನ್ 2021ರಲ್ಲಿ ಅದೇ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಕೇಶವನ್ ಅವರನ್ನು ಈಗಾಗಲೇ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅವರು ಈತ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಬಾಲಕಿಗೆ 14 ಬಾರಿ ಇರಿದ ಕೇಶವನ್

ಬಾಲಕಿಗೆ 14 ಬಾರಿ ಇರಿದ ಕೇಶವನ್

ಚೂರಿ ಇರಿತದ ದಿನ ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಕೇಶವನ್ ಬಾಲಕಿ ಆತನ ಪ್ರೀತಿ ನಿರಾಕರಿಸಿದಾಗ ಚಾಕುವಿನಿಂದ ಇರಿದಿದ್ದಾನೆ. ಜೊತೆಗೆ ಬಾಲಕಿ ಸಹಾಯಕ್ಕಾಗಿ ಕೂಗುವಾಗ ಕೇಶವನ್ ಆಕೆಗೆ 14 ಬಾರಿ ಇರಿದಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಬಾಲಕಿ ಕೆಳಗೆ ಬಿದ್ದಿರುವುದನ್ನು ಕಂಡ ಪ್ರಯಾಣಿಕರು ಆಕೆಯ ದೇಹದಿಂದ ರಕ್ತ ಹರಿಯುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಶವವಾಗಿ ಪತ್ತೆಯಾದ ಆರೋಪಿ

ಶವವಾಗಿ ಪತ್ತೆಯಾದ ಆರೋಪಿ

ಆರೋಪಿಯನ್ನು ತಿರುಚ್ಚಿಯ ಪೋತಮೆಟ್ಟುಪಟ್ಟಿ ನಿವಾಸಿ ಕೇಶವನ್ ಎಂದು ಗುರುತಿಸಿರುವ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪದ ಅಪ್ರಾಪ್ತ ಬಾಲಕಿಗೆ ಕೇಶವನ್ 14 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮೂರು ವಿಶೇಷ ತಂಡಗಳು ಶೋಧ ನಡೆಸುತ್ತಿದ್ದವು. ಮಂಗಳವಾರ ರಾತ್ರಿ ರೈಲ್ವೆ ಹಳಿ ಮೇಲೆ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

ಘಟನೆಯನ್ನು ಖಂಡಿಸಿದ ಜೋತಿಮಣಿ

ಘಟನೆ ಕುರಿತು ಟ್ವೀಟ್ ಮಾಡಿರುವ ಕರೂರಿನ ಕಾಂಗ್ರೆಸ್ ಸಂಸದೆ ಜೋತಿಮಣಿ, ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ 14 ಬಾರಿ ಇರಿದಿರುವ ಸುದ್ದಿ ಕೇಳಿ ಆಘಾತವಾಯಿತು. ಕೇಶವನ್‌ನನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

ತಂದೆಯಿಂದ ಶವವನ್ನು ಗುರುತಿಸಿದ ಪೊಲೀಸರು

ತಂದೆಯಿಂದ ಶವವನ್ನು ಗುರುತಿಸಿದ ಪೊಲೀಸರು

ಕೇಶವನ್ ಎಂದು ಗುರುತಿಸಲಾದ ಆರೋಪಿಯನ್ನು ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿದಾಗ, ಮನಪ್ಪರೈ ಬಳಿಯ ರೈಲ್ವೆ ಹಳಿಗಳ ಮೇಲೆ ಶವವಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಶವದ ಬಳಿಯಿಂದ ಮೊಬೈಲ್ ಅನ್ನು ಪಡೆದುಕೊಂಡರು ಮತ್ತು ಕೇಶವನ ತಂದೆಯನ್ನು ಕರೆತಂದರು. ತಂದೆಯಿಂದ ಅದು ಕೇಶವ್ ಶವ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+