ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತಿ ಬೇಕಿದ್ದರೆ ಭಾರತದ ವಿರುದ್ಧ ದನಿಯೆತ್ತಿ!

By * ಮತ್ತೂರು ರಘು, ಮತ್ತೂರು
|
Google Oneindia Kannada News

Arundhati Roy, Indian novelist
ದೇಶದ್ರೋಹಿ ಕೆಲಸಗಳನ್ನು ಮಾಡಿದರೂ ಸೌಖ್ಯವಾಗಿ ಇರಲು ಸಾಧ್ಯವಿರುವ ದೇಶ ಎಂದರೆ ಭಾರತ ಒಂದೇ ಎಂದು ಯಾರಿಗಾದರೂ ಅನ್ನಿಸದಿದ್ದರೆ ಆಶ್ಚರ್ಯ ಪಡಬೇಕು! ಭಾರತದ ಮೇಲೆ ಆಕ್ರಮಣ ಮಾಡಿದವರೂ ಭಾರತದಲ್ಲಿ ಆರಾಮಾಗಿರಬಹುದು, ಭಾರತವನ್ನು ಕೊಳ್ಳೆ ಹೊಡೆದವರೂ ಭಾರತದಲ್ಲಿ ಆರಾಮಾಗಿರಬಹುದು, ಭಾರತದ ವಿರುದ್ಧ ಹೇಳಿಕೆ ನೀಡಿದರೂ ಅವರಿಗೆ ಭವ್ಯ ಸ್ವಾಗತ ಸಿಗುತ್ತೆ ನಮ್ಮ ಈ ಭಾರತದಲ್ಲಿ...!

ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್, ಸಂವಿಧಾನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಅಂತಹವರು ಹುಲುಸಾಗಿರುವಾಗ ನಾನು ಯಾರಿಗೆ ಕಮ್ಮಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕಿ (ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕಾದಂಬರಿಗೆ ಬೂಕರ್ ಪ್ರಶಸ್ತಿ) ಅರುಂಧತಿ ರಾಯ್ ತಮ್ಮ ಹೆಜ್ಜೆ ಇಟ್ಟಿದ್ದಾರೆ, ಅಷ್ಟೇ ಅಲ್ಲ, ಮುಂದೆ ಇನ್ನು ದೊಡ್ಡ ದೊಡ್ಡ ಹೆಜ್ಜೆಯನ್ನು ಇಡಲಿದ್ದಾರೆ ಎಂದು ಸಾಬೀತು ಮಾಡಿದ್ದಾರೆ. ಇಂತಹ ಹೆಣ್ಣು(?) ಮಕ್ಕಳನ್ನು ಪಡೆದ ಭಾರತ ಮಾತೆ ನೀನೆ ಧನ್ಯ!

ಪ್ರಸಿದ್ಧಿಯನ್ನು ಪಡೆಯುವ ಸಲುವಾಗಿ ಒಂದು ಸೂತ್ರವಿದೆ. ನಿಮಗೆ ಅಂತಾರಾಷ್ಟ್ರೀಯ ಖ್ಯಾತಿ ಏನಾದರು ಬೇಕಾದಲ್ಲಿ ಭಾರತದ ವಿರುದ್ಧ ಮಾತೆತ್ತಿ ಅಥವಾ ಪುಸ್ತಕ ಬರೆಯಿರಿ ಅಥವಾ ನಮ್ಮ ಈ ಆಧುನಿಕ ಭಾರತದ ಒಳಗೆ ನಿಮಗೇನಾದರೂ ಪ್ರಸಿದ್ಧಿ ಬೇಕಾದಲ್ಲಿ ಹಿಂದೂಗಳ ವಿರುದ್ಧ ದನಿಯೆತ್ತಿ ಎಂದು. ತಕ್ಷಣದಲ್ಲಿ ಪ್ರಸಿದ್ಧಿ ಪಡೆದ ಬಹುತೇಕ ಎಲ್ಲ ಪಿಪಾಸುಗಳೂ ಇದೆ ಗುಂಪಿಗೆ ಸೇರಿದವರಾಗಿದ್ದಾರೆ, ಪರೀಕ್ಷಿಸಿ ನೋಡಿ.

ಸಂವಿಧಾನದ 370ನೇ ವಿಧಿಯ ಕಾರಣದಿಂದಾಗಿ ಇಡೀ ಕಾಶ್ಮೀರ ಬಹುತೇಕ ಪರಕೀಯವಾಗಿಯೇ ಉಳಿದಿರುವಂತಹ ಪರಿಸ್ಥಿತಿಯಲ್ಲಿ ಭಾರತೀಯ ನಾರಿ ಅರುಂಧತಿ ರಾಯ್ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದರೂ, ದೇಶದ್ರೋಹದಾಪಾದನೆಯಡಿ ಬಂಧಿಸುವ ಅವಕಾಶವಿದ್ದರೂ, 'ಇಂತಹವರು ಮುಂದೊಂದು ದಿನ ನಮಗೂ ಸಹಾಯಕ್ಕೆ ಬರಬಹುದು' ಎಂಬ ದೂರಾಲೋಚನೆ(!)ಯಡಿ ಕೇಂದ್ರ ಸರಕಾರ ಸಮಸ್ಯೆಯನ್ನು ಹೆಚ್ಚಾಗಿಸುವುದು ಬೇಡ ಎಂಬ ಜಾಣ್ಮೆಯಲ್ಲಿ ಪರಿಸ್ಥಿಯನ್ನು ನಿಭಾಯಿಸುತ್ತಿದೆ!

ಎಲ್ಲ ಪಕ್ಷಗಳೂ, ಎಲ್ಲ ರಾಜಕಾರಣಿಗಳೂ ರಾಷ್ಟ್ರಹಿತದ ವಿಷಯದಲ್ಲಿ ಎಂದಿಗೆ ಒಂದಾಗುವರೋ, ಅಂದಿನಿಂದ ಹೆಚ್ಚುಗೊಳ್ಳುವ ಭಾರತದ ಅಭ್ಯುದಯದ ವೇಗವನ್ನು ನಿಯಂತ್ರಿಸಲೂ ಯಾವ ಅಂತಾರಾಷ್ಟ್ರೀಯ ತಂತ್ರಗಳಿಂದಲೂ ಸಾಧ್ಯವಿಲ್ಲ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X