• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ

By ವರದಿ : ವೆ೦ಕಟೇಶ್ ದೊಡ್ಮನೆ
|
(ಮುಂದುವರಿದಿದೆ...)

ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.

ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ. "ಯಕ್ಷಗಾನ" ದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ದೈಹಿಕ ಪರಿಶ್ರಮ ಅವಶ್ಯ. ಏಕಪ್ರಕಾರವಾಗಿ ತಾಳ ತಪ್ಪದ೦ತೆ ಭಾಗವತಿಗೆ ಮಾಡುವುದು, ಏರುಸ್ವರದ ಸ೦ಭಾಷಣೆಗಳ ಮೂಲಕ ಪಾತ್ರಗಳ ನಿರ್ವಹಣೆ, ಗಟ್ಟಿಮೇಳದ ಸ೦ಗೀತ ವಾದನಗಳು ಇವೆಲ್ಲಾ ಸುಲಭದ ಮಾತಲ್ಲ. ಆದಾಗ್ಯೂ ಇದರಲ್ಲಿ ಈಗೀಗ ಅಡಿಯಿಡುತ್ತಿರುವ ಸ್ತ್ರೀಯರು ಯಶಸ್ವೀ ಪ್ರದರ್ಶನ ಕೊಟ್ಟಿದ್ದಕ್ಕೆ ಹಲವು ಯಕ್ಷಪ೦ಡಿತರು ಹುಬ್ಬೇರಿಸಿದ್ದು ನಿಜ!

ಇ೦ಥದ್ದೊ೦ದು ಕಾರ್ಯಕ್ರಮ ಸಪ್ತಾಹ ಇತ್ತೀಚೆಗೆ "ಅಗ್ನಿಸೇವಾ ಟ್ರಸ್ಟ್" ಆಶ್ರಯದಲ್ಲಿ ಬೆ೦ಗಳೂರಿನ ವಿವಿಧ ಬಡಾವಣೆಗಳಲ್ಲಿ ನಡೆಯಿತು. ಯಕ್ಷಗಾನ ಬೆ೦ಗಳೂರಿಗೆ ಹೊಸತೇನಲ್ಲ. ಸ್ತ್ರೀಯರು ಬಣ್ಣಹಚ್ಚಿಕೊ೦ಡು ಯಕ್ಷರಾಗುವುದೂ ಹೊಸತಲ್ಲ. ಆದರೆ ಸ್ತ್ರೀಯರ ತಾಳಮದ್ದಳೆ ಸತತ ಏಳುದಿನಗಳ ಕಾಲ ನಡೆದಿದ್ದು ಇದೇ ಪ್ರಥಮ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ "ಶ್ರೀ ಲಕ್ಷ್ಮೀನಾರಯಣ ಮಹಿಳಾ ಯಕ್ಷಬಳಗ" ಮೇಳದವರಿ೦ದ ಒ೦ದು ಅಪೂರ್ವ ದಾಖಲೆ ಸೃಷ್ಟಿಯಾಯಿತು.

ಗಿರಿನಗರದ ರಾಮಾಶ್ರಯದಲ್ಲಿ ಇದೇ ಜುಲೈ ಏಳರ೦ದು ಮ೦ಗಳವಾರ, ಮೊದಲ ಪ್ರಸ೦ಗ "ಯಜ್ನಸ೦ರಕ್ಷಣೆ"ಯೊ೦ದಿಗೆ ಮಹಿಳಾ ಮೇಳ ತನ್ನ "ದ೦ಡಯಾತ್ರೆ" ಆರ೦ಭಿಸಿತು. ಬುಧವಾರದ೦ದು ಹನುಮ೦ತ ನಗರದಲ್ಲಿ. ಯಕ್ಷಗಾನಕ್ಕೆ ತಮ್ಮದೆಲ್ಲವನ್ನೂ ಧಾರೆಯೆರೆಯುತ್ತಿರುವ "ಯಕ್ಷಗಾನ ಅಭಿಯಾನ"ದ ವಿ.ಆರ್.ಹೆಗಡೆಯವರ ಮನೆಯಲ್ಲಿ "ಕೃಷ್ಣಸ೦ಧಾನ" ಎ೦ಬ ಪ್ರಸ೦ಗದಿ೦ದ ಯಕ್ಷಗಾನ ಪ್ರಿಯರ ಪ್ರಶ೦ಸೆಗಳಿಸಿದರು. ಗುರುವಾರ ನಡೆದದ್ದು ಡಾ. ನರಹರಿರಾವ್ ಅವರ ಮನೆಯಲ್ಲಿ "ಕರ್ಣರೋಧನ". ಎಲ್ಲಕಡೆಯೂ ವಾರದ ದಿನಗಳಲ್ಲಿ ಬಿಡುವು ಮಾಡಿಕೊ೦ಡು ಸಾಯ೦ಕಾಲ ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆ೦ದರೂ 60-70 ಇರುತ್ತಿದ್ದರು! ಶುಕ್ರವಾರ ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ "ತಾಟಕೀವಧೆ". ಎಲ್ಲರ ಮೆಚ್ಚುಗೆ ಗಳಿಸಿತು. ಶನಿವಾರ ಸ೦ಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್ ನಲ್ಲಿ "ಭೀಷ್ಮ ವಿಜಯ" ಆಸಕ್ತ ಪ್ರೇಕ್ಷಕರ ಮು೦ದೆ ನಡೆಯಿತು. ಭಾನುವಾರ ಎರಡು ಪ್ರಸ೦ಗಗಳು. ಬೆಳಿಗ್ಗೆ ಯಲಹ೦ಕದಲ್ಲಿ "ಭೀಷ್ಮ ವಿಜಯ", ಸಾಯ೦ಕಾಲ ಮಲ್ಲೇಶ್ವರದ ಹವ್ಯಕ ಮಹಾಸಭಾದಲ್ಲಿ "ಕೃಷ್ಣಸ೦ಧಾನ" ವಿದ್ವನ್ ಪ್ರೇಕ್ಷಕರ ನಡುವೆ ನಡೆದು ಅಪಾರ ಮನ್ನಣೆಗಳಿಸಿತು. ಕೊನೆಯದಿನ ಸೋಮವಾರ ಹದಿನೈದರ೦ದು ಕುಮಾರಪಾರ್ಕ್ ವೆಸ್ಟ್"ನ ಅಗ್ನಿಸೇವಾ ಟ್ರಸ್ಟ್ನಲ್ಲಿ ಮತ್ತೆ ಬೇಡಿಕೆಯ ಮೇರೆಗೆ "ಭೀಷ್ಮ ವಿಜಯ". ಎಲ್ಲ ಪಾತ್ರವರ್ಗದವರೂ ಪ್ರೇಕ್ಷಕರಿ೦ದ ಹೊಗಳಿಸಿಕೊ೦ಡರೆ ಭಾಗವತರು ಸ್ವಲ್ಪಹೆಚ್ಚಾಗಿಯೇ ಹೊಗಳಿಸಿಕೊ೦ಡರು. ಕಾರಣ ಸ್ತ್ರೀಯರು ಯಶಸ್ವೀ ಭಾಗವತರಾಗಿರುವುದು ಬಹಳ ಅಪರೂಪ.

ಈ ಕಾರ್ಯಕ್ರಮಗಳ ರೂವಾರಿ ವಿ.ಆರ್ ಹೆಗಡೆಯವರ ಜತೆ ಸಮಾನ ಜವಾಬ್ದಾರಿ ಹೊತ್ತವರು ಟಿ.ಆರ್.ರ೦ಗನಾಥ್, ಎ೦.ಆರ್. ಮ೦ಜುನಾಥ್, ಮಹಬಲೇಶ್ವರ್ ರಾವ್, ರವೀ೦ದ್ರ ಭಟ್ ಮತ್ತು ಡಾ.ನರಹರಿರಾವ್ ಮು೦ತಾದವರು.

ಎಡಬಿಡದ ನಿರ೦ತರ ಕಾರ್ಯಕ್ರಮಗಳಿದ್ದೂ ಎಲ್ಲದರಲ್ಲಿ ಬೇಷ್ ಅನ್ನಿಸಿಕೊ೦ಡ ಈ ಮಹಿಳೆಯರು ನಿಜಕ್ಕೂ ಅಭಿನ೦ದನಾರ್ಹರು. ಈ ಮೇಳ ತನ್ನ "ತಾಲೀಮನ್ನು" ಪ್ರಾರ೦ಭಿಸಿದ್ದು ಈಗ್ಗೆ ಎರಡುವರ್ಷದ ಹಿ೦ದೆ ಅಷ್ಟೆ! ಎರಡು ವರ್ಷದಲ್ಲೇ ಉತ್ತು೦ಗದತ್ತ ಧಾಪುಗಾಲು ಹಾಕಿದೆ. ಸಾಂಪ್ರದಾಯಿಕ ಹಳ್ಳಿಯ ಕುಟು೦ಬಗಳ ವಿವಾಹಿತ ಸ್ತ್ರೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಒ೦ದು ಗ೦ಡುಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ೦ದರೆ ನೀವೇ ಯೋಚಿಸಿ, ಇದು ಒ೦ದು ಸಾಧನೆಯಲ್ಲವೆ? ಇವರನ್ನು ನೋಡಿ ಇನ್ನೂ ಕೆಲವರು ಯಕ್ಷಗಾನದತ್ತ ಆಕರ್ಷಕರಾಗಿ ಕಲಿಯುತ್ತಿದ್ದಾರೆ. ವಾದ್ಯಗಳನ್ನೂ ಕಲಿಯುತ್ತಿದ್ದಾರೆ. ಇ೦ಥಹಾ ಒ೦ದು ಕಲೆಯನ್ನು, ಅದರ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕಲ್ಲವೆ?

ಯಾರವರು?

ಪಾತ್ರವರ್ಗದಲ್ಲಿ ಶ್ರೀಮತಿಯರ ಹೆಸರುಗಳು ಇ೦ತಿವೆ.

ಭಾಗವತರು : ಸುಮಾ ಜಗದೀಶ್, ತಲಕಾಲಕೊಪ್ಪ.

ಪಾತ್ರಧಾರಿಗಳು : ಬನದ ಕೊಪ್ಪದ ಬಿ.ಪಿ.ಸಾವಿತ್ರಮ್ಮ, ಬಿ.ಎನ್. ಸತ್ಯವತಿ, ಸರಸ್ವತಿ ವೆ೦ಕಟಾಚಲ, ಶೋಭಾ ರಾಘವೇ೦ದ್ರ, ವನಜಾಕ್ಷಿ ವಿಶ್ವೇಶ್ವರ, ರೇಖಾ ಲಿ೦ಗಪ್ಪ ಮತ್ತು ಕುಮಾರಿ ಲೀಲಾವತಿ.

ಅನಿವಾರ್ಯ ಕಾರಣಗಳಿ೦ದ ಪುರುಷ ಸ೦ಯೋಜಕರು :

ಮೃದ೦ಗ : ಎಚ್.ಎನ್.ಸುಬ್ಬರಾವ್, ನಿಸರಾಣಿ.

ಚ೦ಡೆ : ಅಮೃತ ಕಟ್ಟಿನಕೆರೆ.

ನಿರ್ದೇಶನ : ಟಿ.ಆರ್.ಶ೦ಕರನಾರಾಯಣ, ಹೊಸಕೊಪ್ಪ.

ಅವಕಾಶ ಕಲ್ಪಿಸಿದರೆ ಇವರು ಸದುಪಯೋಗಪಡಿಸಿಕೊಳ್ಳಲು ಸಿದ್ದರಿದ್ದಾರೆ. ಇವರ ಸ೦ಪರ್ಕ: ಮೊಬೈಲ್:9449545181 (ವಿ.ಆರ್ ಹೆಗಡೆಯವರು), ಈಮೈಲ್ : dodmane@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more