ಕಾಂಡೋಮ್ ಯುವಕನ ವಿಕೃತನ ನಗುವಿನ ರಹಸ್ಯ

ಒಬ್ಬ ಹದಿಹರೆಯದ ಯುವಕನೊಬ್ಬ ಮೆಡಿಕಲ್ ಶಾಪಿಗೆ ಬಂದು ಕಾಂಡೋಮ್ ಬೇಕೆಂದು ಕೇಳಿದ. ಇಂಥ ಯುವಕರು ಕಾಂಡೋಮ್ ಕೊಳ್ಳಲು ಬರುವುದು ಸಹಜವೆಂದು ತಿಳಿದಿದ್ದ ಅಂಗಡಿ ಮಾಲಿಕ ಅವನು ಕೇಳಿದ ಕಾಂಡೋಮ್ ಕೊಟ್ಟ. ಹಣ ಪಾವತಿಸಿದ ಬಳಿಕ ಯುವಕ ಇದ್ದಕ್ಕಿದ್ದಂತೆ ಗಹಗಹಿಸಿ ವಿಕೃತವಾಗಿ ನಗಲು ಪ್ರಾರಂಭಿಸಿದ.

ನಿನ್ನೆ ಮೊನ್ನೆ ಕೇಳಿದ ಯಾವುದೋ ಜೋಕನ್ನು ನೆನೆಸಿಕೊಂಡು ನಕ್ಕಿರಬೇಕು ಎಂದು ಅಂಗಡಿ ಮಾಲಿಕ ಸುಮ್ಮನಾದ. ಅಲ್ಲದೆ, ಅವನು ನಕ್ಕಿದ್ದರಲ್ಲಿ ಅಂಗಡಿ ಮಾಲಿಕನಿಗೆ ಅಂತಹ ವಿಶೇಷವೇನೂ ಕಂಡುಬರಲಿಲ್ಲ. ಇಂಥ ವಯಸ್ಸಿಗೆ ಬಂದ ಯುವಕರು ಏನೇನೋ ನೆನೆಸಿಕೊಂಡು ಅಥವಾ ವಿನಾಕಾರಣ ನಗುವುದು ಸಹಜ ಎಂದು ಆತ ಅಂದುಕೊಂಡ.

ಮರುದಿನ ಅದೇ ಯುವಕ ಮತ್ತೆ ಬಂದ. ಕಾಂಡೋಮ್ ಕೇಳಿ ಪಡೆದುಕೊಂಡ ಮರುಗಳಿಗೆಯಲ್ಲಿ ಮತ್ತೆ ಅಂಗಡಿ ಮಾಲಿಕನನ್ನು ನೋಡಿ ವಿಕೃತವಾಗಿ ನಗಲು ಪ್ರಾರಂಭಿಸಿದ. ಈ ಬಾರಿ ಅಂಗಡಿ ಮಾಲಿಕನಿಗೆ ಸ್ವಲ್ಪ ಆಶ್ಚರ್ಯವಾಯಿತು. ಆದರೆ, ನಗಬಾರದೆಂದು ಯಾವ ಕಾನೂನೂ ಹೇಳುವುದಿಲ್ಲವೆಂದು ಬಗೆದ ಅಂಗಡಿ ಮಾಲಿಕ ತನ್ನ ಕೆಲಸದಲ್ಲಿ ಮುಳುಗಿದ.

ಅದರ ಮರುದಿನ ಮತ್ತೆ ಅದೇ ಯುವಕ ಅದೇ ನೋಟವನ್ನು ಹೊತ್ತು ಬಂದು ಕಾಂಡೋಮ್ ಕೊಂಡ ಕ್ಷಣವೇ ಗಹಗಹಿಸಿ ನಗಲು ಪ್ರಾರಂಭಿಸಿದ. ಈ ಬಾರಿ ತೀರ ಗಲಿಬಿಲಿಗೊಳಗಾದ ಅಂಗಡಿ ಮಾಲಿಕ, ಆ ನಗುವಿನ ಹಿಂದಿನ ರಹಸ್ಯವೇನು ತಿಳಿಯಲೇಬೇಕು ಎಂದು ಅಂದುಕೊಂಡ. ಆ ಯುವಕ ತನ್ನ ಮರಳುತ್ತಿದ್ದಂತೆ ತನ್ನ ಕೆಲಸದ ಹುಡುಗನನ್ನು ಕರೆದು, ಆ ವಿಕೃತ ಯುವಕ ಎಲ್ಲಿ ಹೋಗುತ್ತಾನೆ, ಏನು ಮಾಡುತ್ತಾನೆ ತಿಳಿದುಕೊಂಡು ಬಾ ಎಂದು ಅವನನ್ನು ಛೂ ಬಿಟ್ಟ.

ಅಂಗಡಿ ಮಾಲಿಕನ ಆಜ್ಞೆಯಂತೆ ಯುವಕನನ್ನು ಹಿಂಬಾಲಿಸಿದ ಕೆಲಸದ ಹುಡುಗ ಸರಿಯಾಗಿ ಎರಡು ಗಂಟೆಯ ನಂತರ ಮೆಡಿಕಲ್ ಶಾಪಿಗೆ ಮರಳಿದ. ಮಾಲಿಕನಿಗೆ ಕುತೂಹಲವೋ ಕುತೂಹಲ. ಏನಾದರೂ ಸುಳಿವು ಸಿಕ್ಕೀತೇನೋ ಎಂಬ ತವಕದಿಂದ, ಯುವಕ ಎಲ್ಲಿ ಹೋಗಿದ್ದ, ಆತನ ನಗುವಿಗೆ ಕಾರಣವೇನಾದರೂ ಇದೆಯಾ? ಎಂದು ಕೇಳಿದ.

ಜೋಲು ಮುಖ ಹಾಕಿಕೊಂಡಿದ್ದ ಕೆಲಸದ ಹುಡುಗ, "ನಿಮ್ಮ ಮನೆಗೆ" ಎಂದು ಉತ್ತರಿಸಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+