ವಧುವನ್ನು ಸಿಂಗರಿಸಿದ್ದ ಮೇಕಪ್ ಮ್ಯಾನಿಗೆ ಐಫೋನ್ ಗಿಫ್ಟ್ ಕೊಟ್ಟ ವರ!!
ಚಪ್ಪರ, ಮಹೂರ್ತ, ಆರತಕ್ಷತೆ ಮತ್ತು ಮೊದಲ ರಾತ್ರಿಯನ್ನು ವಧು-ವರರು ಸುಖವಾಗಿಯೇ ಕಳೆದಿದ್ದರು. ಮರುದಿನ ಎದ್ದವನೇ ವರ, ವಧುವಿಗೆ ಮೇಕಪ್ ಮಾಡಿದ್ದ ಮೇಕಪ್ ಮ್ಯಾನಿಗೆ ಫೋನ್ ಮಾಡಿ, ನಿನಗೆ ಗಿಫ್ಟ್ ಕೊಡಬೇಕಾಗಿದೆ ಅರ್ಜೆಂಟಾಗಿ ಅಂಗಡಿಗೆ ಬಾ ಎಂದ.
ಅಂಗಡಿಗೆ ಹೋದ ವರ, ಐಫೋನ್ 7ಪ್ಲಸ್ ಬಾಕ್ಸ್ ಅನ್ನು ಕೊಟ್ಟ. ಐಫೋನ್ ಬಾಕ್ಸ್ ನೋಡಿದ ಅಂಗಡಿಯವ ಖುಷಿಯಿಂದ ಬಾಕ್ಸ್ ತೆಗೆದಾಗ ಅದರಲ್ಲಿ ಹಳೆಯ ನೋಕಿಯಾ 1100 ಹ್ಯಾಂಡ್ ಸೆಟ್ ಇತ್ತು. ಇದನ್ನು ನೋಡಿ, ಅಂಗಡಿಯವನ ಮುಖ, ಮುದುಕಿಗೆ ಲಿಫ್ಟಿಕ್ ಹಾಕಿದಂತಾಗಿತ್ತು..
ಅವನ ಮುಖ ನೋಡಿ ನಗುತ್ತಾ ವರ ಹೇಳಿದ... ಮಹೂರ್ತ, ಆರತಕ್ಷತೆಯ ವೇಳೆ ನಿನ್ನ ಮೇಕಪ್ ನಿಂದ ನನ್ನ ಹೆಂಡತಿಯ ಮುಖವೂ ಐಪೋನ್ ನಂತೇ ಇತ್ತಪ್ಪಾ.., ಮೊದಲ ರಾತ್ರಿಯಲ್ಲೇ ಗೊತ್ತಾಗಿದ್ದು.. ಅದು ಮೇಕಪ್ ಮಾಡಿದ ನೋಕಿಯಾ ಅಂತಾ..

ಟೀಚರ್: ಮಕ್ಕಳೇ.. ನಿಮ್ಮ ಕ್ಯಾರೆಕ್ಟರ್ ಚೆನ್ನಾಗಿ ಇರಬೇಕು ಅಂದ್ರೆ, ಎಲ್ಲಾ ಹೆಂಗಸರನ್ನು ನಿಮ್ಮ ಅಮ್ಮ ಅಂತಾ ತಿಳ್ಕೋಬೇಕು...
ಗುಂಡ: ಮೇಡಂ..ಎಲ್ಲರನ್ನು ಅಮ್ಮ ಅಂತ ತಿಳ್ಕೊಂಡ್ರೆ ನಮ್ಮಪ್ಪನ ಕ್ಯಾರೆಕ್ಟರ್ ಹಾಳಾಗಲ್ವ ಮಿಸ್..
--
ಹೆಂಡ್ತಿ ತನ್ನ ಕೈ ಬೆರಳ ಸನ್ನೆಯಿಂದ ಗಂಡನನ್ನು ಕರೆದಳು. ಸೋಫಾದಲ್ಲಿ ಕೂತಿದ್ದ ಗಂಡ ಎದ್ದು ಬಂದ.
ಗಂಡ : ಏನ್ ಹೇಳು.?
ಹೆಂಡ್ತಿ : ಏನಿಲ್ಲ, ನನ್ ಬೆರಳಲ್ಲಿರೋ ಶಕ್ತಿ ಎಷ್ಟು ಅಂತ ಟೆಸ್ಟ್ ಮಾಡ್ತಿದ್ದೆ ಅಷ್ಟೆ...!











Click it and Unblock the Notifications