ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ರಲ್ಲಿ ಅಧಿಕ ಸಂಬಳ ಕೊಡುವ ಬೇಡಿಕೆಯ ಟಾಪ್‌ 20 ವೃತ್ತಿಗಳು ಇವು

|
Google Oneindia Kannada News

ಬೆಂಗಳೂರು, ಜನವರಿ 10: 2022ನೇ ವರ್ಷವು ಟೆಕ್‌ ವಲಯದ ಉದ್ಯೋಗಿಗಳ ಪಾಲಿಗೆ ನಿಜಕ್ಕೂ ದುಸ್ವಪ್ನದಂತೆ ಭಾಸವಾಗಿದೆ. ಇದಕ್ಕೆ ಕಾರಣ ಸಾವಿರಾರು ಉದ್ಯೋಗಿಗಳು ದೊಡ್ಡ ದೊಡ್ಡ ಕಂಪೆನಿಗಳಿಂದ ವಜಾಗೊಳ್ಳಲ್ಪಟ್ಟಿದ್ದಾರೆ. ಇದರಿಂದ ಅವರಿಗೆ ಉದ್ಯೋಗ ಭದ್ರತೆಯ ಪ್ರಶ್ನೆ ಈಗ ಎದುರಾಗಿದೆ. 2023ರಲ್ಲಿ ಉದ್ಯೋಗಿಗಳ ವಜಾ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅದರೂ 2023ರಲ್ಲಿ ಬೇಡಿಕೆ ಇರುವ ಉದ್ಯೋಗಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ.

ಮೆಟಾ ಫ್ಲಾಟ್‌ಫಾಮ್ಸ್‌ ಇಂಕ್‌, ಸೇಲ್ಸ್‌ ಪೋರ್ಸ್ ಇಂಕ್‌ ಮತ್ತು ಅಮೆಜಾನ್‌ನಂತಹ ಪ್ರಮುಖ ಟೆಕ್ ಕಂಪೆನಿಗಳಲ್ಲಿ ಉನ್ನತ ಉದ್ಯೋಗಿಗಳನ್ನು ಶ್ರೇಣಿಯನ್ನೂ ನೋಡದೆ ವಜಾ ಮಾಡಲಾಗಿದೆ. ಇದರ ಹೊರತಾಗಿಯೂ ಸಾಫ್ಟ್‌ವೇರ್ ಡೆವಲಪರ್ ಹುದ್ದೆಯು ಕಳೆದ ವರ್ಷ ಐದನೇ ಸ್ಥಾನದಿಂದ 2023ರ ಅತ್ಯುತ್ತಮ ಉದ್ಯೋಗಗಳ ಯುಎಸ್‌ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಕೆಲಸ ಖಾಲಿ ಇದೆ. ಜ.23ರ ತನಕ ಅರ್ಜಿ ಹಾಕಿಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಕೆಲಸ ಖಾಲಿ ಇದೆ. ಜ.23ರ ತನಕ ಅರ್ಜಿ ಹಾಕಿ

ಬೇಡಿಕೆ, ಬೆಳವಣಿಗೆ, ಸರಾಸರಿ ವೇತನ, ಉದ್ಯೋಗ ದರ, ಭವಿಷ್ಯದ ಉದ್ಯೋಗ ನಿರೀಕ್ಷೆಗಳು, ಒತ್ತಡದ ಮಟ್ಟ ಮತ್ತು ಜೀವನದ ಸಮತೋಲನ ಹೀಗೆ ನೇಮಕವಾಗುವ ಉದ್ಯೋಗಗಳನ್ನು ಶ್ರೇಣೀಕರಿಸಲು ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್‌ನ ಡೇಟಾವನ್ನು ಯುಎಸ್‌ ನ್ಯೂಸ್ ವಿಶ್ಲೇಷಿಸಿದೆ.

Top 20 In-demand Careers in 2023

2023ರಲ್ಲಿ ಉದ್ಯೋಗ ಭದ್ರತೆಯು ಮನಸ್ಸಿನಲ್ಲಿ ಕಾಡುತ್ತಲೇ ಇದೆ. ಆರ್ಥಿಕ ಹಿಂಜರಿತದ ಭಯಗಳು ಹೆಚ್ಚಾಗುತ್ತಿದ್ದಂತೆ ಮತ್ತು ಮತ್ತಷ್ಟು ವಜಾಗೊಳಿಸುವ ಬೆದರಿಕೆಯು ಹೆಚ್ಚುತ್ತಿರುವಂತೆ ಹೆಚ್ಚು ಉದ್ಯೋಗ ಭದ್ರತೆಯ ವಲಯಗಳನ್ನು ನೋಡುತ್ತಿರುವ ಕೆಲವರಿಗೆ ದೊಡ್ಡ ತಂತ್ರಜ್ಞಾನದ ಭರವಸೆಯು ತನ್ನ ಮೊದಲ ನಂಬಿಕೆಯನ್ನು ಕಳೆದುಕೊಳ್ಳಲ್ಪಟ್ಟಿದೆ.

8 ಹೊಸ ಸಬ್ ರಿಜಿಸ್ಟಾರ್ ಆಫೀಸ್‌ ಆರಂಭ , ಎಲ್ಲೆಲ್ಲಿ ತಿಳಿಯಿರಿ8 ಹೊಸ ಸಬ್ ರಿಜಿಸ್ಟಾರ್ ಆಫೀಸ್‌ ಆರಂಭ , ಎಲ್ಲೆಲ್ಲಿ ತಿಳಿಯಿರಿ

ಇತ್ತೀಚಿನ ಜಿಫ್‌ ರೆಕ್ರೂಟರ್‌ ಸಮೀಕ್ಷೆಯ ಪ್ರಕಾರ, ವಜಾಗೊಳ್ಳಲ್ಪಟ್ಟ ಟೆಕ್ ಕೆಲಸಗಾರರಲ್ಲಿ ಕಾಲು ಭಾಗದಷ್ಟು ಜನರು ಬೇರೆ ಉದ್ಯಮಕ್ಕೆ ತೆರಳಿದ್ದಾರೆ. ಟೆಕ್‌ ಉದ್ಯೋಗದಲ್ಲೇ ಉಳಿಯಲು ಬಯಸುವವರಿಗೆ ಅಭ್ಯರ್ಥಿಗಳು ಕುಗ್ಗುತ್ತಿರುವ ಸ್ಥಾನಗಳಿಗೆ ಸ್ಪರ್ಧಿಸುವುದರಿಂದ ಸ್ಪರ್ಧೆಯು ಬಿಸಿಯಾಗುತ್ತಿದೆ. ಟೆಕ್ ವಲಯದಲ್ಲಿ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ದೃಷ್ಟಿಕೋನವು ಸ್ವಲ್ಪಮಟ್ಟಿಗೆ ನಂಬಿಕಾರ್ಹವಲ್ಲದಿದ್ದರೂ ಬೇಡಿಕೆ ವಲಯದದ ಹೊರಗೆ ಇನ್ನೂ ಅವಕಾಶಗಳು ಹೇರಳವಾಗಿವೆ.

ಸಿಲಿಕಾನ್ ವ್ಯಾಲಿಯಲ್ಲಿ ನೌಕರರಿಗೆ ಸಂಬಳವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು, ಚಿಲ್ಲರೆ ವ್ಯಾಪಾರದವರೆಗಿನ ಸಾಂಪ್ರದಾಯಿಕ ಉದ್ಯಮಗಳಲ್ಲಿನ ವ್ಯವಹಾರಗಳು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಕೊರತೆಯನ್ನು ದೀರ್ಘಕಾಲ ಅನುಭವಿಸಿವೆ. ಆದರೆ ಈಗ ಉನ್ನತ ಪ್ರತಿಭೆಗಳನ್ನು ಸೆಳೆಯಲು ಉತ್ಸುಕವಾಗಿವೆ. ಗರಿಷ್ಠ ಉದ್ಯೋಗ ಭದ್ರತೆಗಾಗಿ ಹುಡುಕುತ್ತಿರುವವರಿಗೆ ಯುಎಸ್‌ ನ್ಯೂಸ್ ಕೆಲವುಗಳ ಪಟ್ಟಿಯನ್ನು ನೀಡಿದೆ.

ಅದರ ವರದಿಯ ಪ್ರಕಾರ, ಅತ್ಯಧಿಕ ಉದ್ಯೋಗ ಭದ್ರತೆ ಹೊಂದಿರುವ ಟಾಪ್ 20 ವೃತ್ತಿಗಳಲ್ಲಿ 13 ಆರೋಗ್ಯ ಕ್ಷೇತ್ರದಲ್ಲಿವೆ. ಇವುಗಳಲ್ಲಿ ನೋಂದಾಯಿತ ನರ್ಸ್ ಮತ್ತು ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ವ್ಯವಸ್ಥಾಪಕರಂತಹ ಉದ್ಯೋಗಗಳು ಉದ್ಯೋಗವಕಾಶದ ಭದ್ರತೆಯನ್ನು ಒಳಗೊಂಡಿವೆ ಎಂದು ಯುಎಸ್ ನ್ಯೂಸ್‌ ಎಂದು ತಿಳಿಸಿದೆ. ಅಂತಹ ಬೇಡಿಕೆ ಇರುವ ಉದ್ಯೋಗಳೆಂದರೆ, 1. ಸಾಫ್ಟ್‌ವೇರ್ ಡೆವಲಪರ್, 2. ನರ್ಸ್ ಪ್ರಾಕ್ಟೀಷನರ್, 3. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ವ್ಯವಸ್ಥಾಪಕ, 4. ವೈದ್ಯ ಸಹಾಯಕ, 5. ಮಾಹಿತಿ ಭದ್ರತಾ ವಿಶ್ಲೇಷಕ, 6. ಶಾರೀರಿಕ ಚಿಕಿತ್ಸಕ, 7. ಹಣಕಾಸು ವ್ಯವಸ್ಥಾಪಕ, 8. ಐಟಿ ಮ್ಯಾನೇಜರ್, 9. ವೆಬ್ ಡೆವಲಪರ್, 10. ದಂತವೈದ್ಯ, ಇದಲ್ಲದೆ ಉದ್ಯೋಗ ಭದ್ರತೆ ಇರುವ ಉದ್ಯೋಗಗಳಾದ 1. ಉಸಿರಾಟದ ಚಿಕಿತ್ಸಕ, 2. ವೆಬ್ ಡೆವಲಪರ್, 3. ಹೃದಯರಕ್ತನಾಳದ ತಂತ್ರಜ್ಞ, 4. ಸಾಂಕ್ರಾಮಿಕ ರೋಗಶಾಸ್ತ್ರಜ್ಞ/ವೈದ್ಯಕೀಯ ವಿಜ್ಞಾನಿ, 5. ಹಣಕಾಸು ವಿಶ್ಲೇಷಕ, 6. ಪರಿಸರ ವಿಜ್ಞಾನ ಮತ್ತು ರಕ್ಷಣಾ ತಂತ್ರಜ್ಞ, 7. ಶಾಲಾ ಮನಶ್ಶಾಸ್ತ್ರಜ್ಞ, 8. ಡೇಟಾಬೇಸ್ ನಿರ್ವಾಹಕರು, 9. ನೋಂದಾಯಿತ ನರ್ಸ್, 10. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ವ್ಯವಸ್ಥಾಪಕ ಇವೇ ಮೊದಲಾದವು.

English summary
2022 is indeed a nightmare for IT employees and tech industry employees. Tens of thousands of employees have been laid off by large companies. This raises the question of job security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X