• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Infographic; ಪುದುಚೇರಿ ಗೆದ್ದ ಎನ್‌ಡಿಎ; ಮತಗಳಿಕೆ ಅಂಕಿ-ಸಂಖ್ಯೆ

|
Google Oneindia Kannada News

ನವದೆಹಲಿ, ಮೇ 03; ಪುದಚೇರಿ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಜಯಗಳಿಸಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

30 ವಿಧಾನಸಭಾ ಕ್ಷೇತ್ರಗಳನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊಂದಿದೆ. ಚುನಾವಣೆಯಲ್ಲಿ ಬಿಜೆಪಿ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು.

ಎನ್‌ಡಿಎ ವಶಕ್ಕೆ ಪುದುಚೇರಿ; ಗೆದ್ದ ಪ್ರಮುಖ ಅಭ್ಯರ್ಥಿಗಳು ಎನ್‌ಡಿಎ ವಶಕ್ಕೆ ಪುದುಚೇರಿ; ಗೆದ್ದ ಪ್ರಮುಖ ಅಭ್ಯರ್ಥಿಗಳು

ಎಐಎನ್‌ಆರ್‌ಸಿ 10 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಪಕ್ಷದ ಮತಗಳಿಕೆ ಪ್ರಮಾಣ ಶೇ 25.85. ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಮತಗಳಿಕೆ ಪ್ರಮಾಣ ಶೇ 13.51. ಎಐಎನ್‌ಆರ್‌ಸಿ ಪಕ್ಷದವರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.

Infographics: ಕೇರಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶInfographics: ಕೇರಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ

ಕಾಂಗ್ರೆಸ್ ಮೈತ್ರಿಕೂಟದಲ್ಲಿದ್ದ ಡಿಎಂಕೆ ಪಕ್ಷ 6 ಸ್ಥಾನಗಳಲ್ಲಿ ಜಯಗಳಿಸಿದೆ. ಪಕ್ಷದ ಮತಗಳಿಕೆ ಪ್ರಮಾಣ ಶೇ 18.51. ಕಾಂಗ್ರೆಸ್ ಶೇ 15.71ರಷ್ಟು ಮತಗಳನ್ನು ಪಡೆದಿದೆ. ಎಐಎಡಿಎಂಕೆಯ 5 ಅಭ್ಯರ್ಥಿಗಳು ಕಣದಲ್ಲಿದ್ದರು. ಯಾರೂ ಗೆಲುವು ಸಾಧಿಸದೇ ಪಕ್ಷ ಹಿನ್ನಡೆಯನ್ನು ಅನುಭವಿಸಿದೆ.

ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ

2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ 17 ಸ್ಥಾನಗಳಲ್ಲಿ ಗೆದ್ದಿತ್ತು. ವಿ. ನಾರಾಯಣಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಚುನಾವಣೆ ಘೋಷಣೆಗೂ ಕೆಲವು ದಿನಗಳ ಹಿಂದೆ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಬಹಮತ ಕಳೆದುಕೊಂಡಿತ್ತು. ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.

English summary
Puducherry : Party-wise Assembly Election Results 2021. BJP alliance won in the 16 seats in Puducherry. BJP alone won 6 seats out of 30 assembly seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X