ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP C-Voter Exit Poll: ಪುದುಚೇರಿಯಲ್ಲಿ ಎನ್‌ಡಿಎಗೆ ಬಹುಮತ

|
Google Oneindia Kannada News

ಪುದುಚೇರಿ, ಏಪ್ರಿಲ್ 29: ಚುನಾವಣೆ ನಡೆದ 4 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.

ಅದರಲ್ಲಿ ಎಬಿಪಿ ಸಿ ವೋಟರ್ ನಡೆಸಿದ ಪುದುಚೇರಿ ಸಮೀಕ್ಷೆಯಲ್ಲಿ ಎನ್‌ಡಿಎಗೆ ಬಹುಮತ ಲಭ್ಯವಾಗಲಿದೆ ಎಂದು ಹೇಳಿದೆ. ಎನ್‌ಡಿಎಗೆ 19-23, ಯುಪಿಎ-6-10, ಸ್ವತಂತ್ರ-ಶೂನ್ಯ, ಇತರೆ-1-2 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎನ್‌ಡಿಎ-17-21, ಕಾಂಗ್ರೆಸ್-08-12, ಇತರೆ 1-3 ಬರುಬಹುದು ಎಂದು ಹೇಳಲಾಗಿತ್ತು.

Puducherry Assembly Elections ABP C-Voter Exit polls Results 2021

ಅಸ್ಸಾಂ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ABP ಸಿ-ವೋಟರ್ ಸಮೀಕ್ಷೆ ಬಗ್ಗೆ ಮಾಹಿತಿ ಇಲ್ಲಿದೆ. ಸಿ-ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ.

ಒಟ್ಟು 126 ಸ್ಥಾನಗಳಿದ್ದು, ಬಿಜೆಪಿಗೆ 58-71 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಸಫಲವಾಗಲಿದೆ, ಕಾಂಗ್ರೆಸ್ 53-66 ಸ್ಥಾನಗಳನ್ನು ಪಡೆದುಕೊಳ್ಳಲಿದೆ, ಇತರೆ 0- ಇಂದ 5 ಸ್ಥಾನವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ABP C-Voter Exit Poll: ಕೇರಳದಲ್ಲಿ ಪಿಣರಾಯಿಗೆ ವಿಜಯABP C-Voter Exit Poll: ಕೇರಳದಲ್ಲಿ ಪಿಣರಾಯಿಗೆ ವಿಜಯ

ತಮಿಳುನಾಡು ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ. ಎಬಿಪಿ ಸಿ-ವೋಟರ್ ಸಮೀಕ್ಷೆ ಫಲಿತಾಂಶ ಹೀಗಿದೆ. ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಜಯಭೇರಿ ಭಾರಿಸಲಿದೆ ಎಂದು ಹೇಳಲಾಗಿದೆ. ಎಐಎಡಿಎಂಕೆಗೆ 58-70 ಸ್ಥಾನಗಳನ್ನು ಪಡೆಯಲಿದೆ, ಡಿಎಂಕೆ 160-172 ಸ್ಥಾನಗಳನ್ನು ಪಡೆಯಲಿದೆ, ಎಂಎನ್‌ಎಂ- ಇಲ್ಲ, ಇತರೆ 0-7 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಈಗಾಗಲೇ ಚುನಾವಣೆ ನಡೆದಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಚುನಾವಣೋತ್ತರ ಸಮೀಕ್ಷೆಯನ್ನು ಎಬಿಪಿ ಸಿ-ವೋಟರ್ ಬಿಡುಗಡೆಗೊಳಿಸಿದೆ.

ಸಮೀಕ್ಷೆ ಪ್ರಕಾರ ಪಿಣರಾಯಿ ವಿಜಯನ್‌ಗೆ ಮತ್ತೆ ಜಯ ಸಿಗಲಿದೆ. ಎಲ್‌ಡಿಎಫ್ 71-77 ಸ್ಥಾನಗಳನ್ನು ಗಳಿಸಲಿದೆ, ಯುಡಿಎಫ್ 62-68 ಸ್ಥಾನಗಳನ್ನು ಪಡೆಯಲಿದೆ, ಬಿಜೆಪಿ 0-2 ಸ್ಥಾನ ಪಡೆಯಲಿದೆ, ಇತರೆ ಶೂನ್ಯ ಇರಲಿದೆ ಎಂದು ಹೇಳಿದೆ.

English summary
Check out Puducherry Assembly Elections ABP C-Voter Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X